KSRTC: 'ಕೊರೋನಾ ಬಳಿಕವೂ ಸಾರಿಗೆ ಸಂಸ್ಥೆ ಪ್ರಗತಿ ನಿರೀಕ್ಷೆಯಂತಿಲ್ಲ'

Kannadaprabha News   | Asianet News
Published : Feb 19, 2022, 08:07 AM IST
KSRTC: 'ಕೊರೋನಾ ಬಳಿಕವೂ ಸಾರಿಗೆ ಸಂಸ್ಥೆ ಪ್ರಗತಿ ನಿರೀಕ್ಷೆಯಂತಿಲ್ಲ'

ಸಾರಾಂಶ

*  ಬಸ್‌ ಡಿಪೋಗೆ ಎನ್‌ಡಬ್ಲ್ಯೂಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ವಿ.ಎಸ್‌. ಪಾಟೀಲ್‌ ಭೇಟಿ *  ಬರಲಿದೆ ಎಲೆಕ್ಟ್ರಿಕ್‌ ಬಸ್‌ಗಳು *  ಸರಕಾರ ಸಿಬ್ಬಂದಿಗಳಿಗೆ ವೇತನ ನೀಡುವ ವ್ಯವಸ್ಥೆ ಮಾಡಿ 

ಕಾರವಾರ(ಫೆ.19):  ಕೊರೋನಾ(Coronavirus) ಬಳಿಕವೂ ಸಾರಿಗೆ ಸಂಸ್ಥೆ(KSRTC) ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್‌. ಪಾಟೀಲ್‌ ಹೇಳಿದ್ದಾರೆ.

ಇಲ್ಲಿನ ಬಸ್‌ ಡಿಪೋಗೆ ಶುಕ್ರವಾರ ಭೇಟಿ ನೀಡಿದ ಅವರು ಕೊರೋನಾ ಲಾಕ್‌ಡೌನ್‌(Lockdown) ಆಗಿದ್ದರಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಕಳೆದೊಂದು ವಾರದಿಂದ ಕೊಂಚ ಸುಧಾರಿಸಿಕೊಂಡಿದೆ. ಒಂದು ಕಿಮೀಗೆ 40 ರು. ಆದಾಯವಾದರೆ ತಕ್ಕ ಮಟ್ಟಿಗೆ ಸುಧಾರಿಸಿಕೊಳ್ಳಬಹುದು. ಇಷ್ಟಾದರೆ ಮಾತ್ರ ನಿರ್ವಹಣೆ, ವೇತನ ನೀಡಲು ಸಾಧ್ಯ. ಆದರೆ ಈ ಪ್ರತಿ ಕಿ.ಮೀ.ಗೆ 29ರಿಂದ 30 ರು. ಬರುತ್ತಿದೆ. ಇನ್ನು ನಿರೀಕ್ಷಿತ ಮಟ್ಟದಲ್ಲಿ ಪಿಕ್‌ ಅಪ್‌ ಆಗಿಲ್ಲ ಎಂದರು.

Price Hike and Corona: 2900 ಕೋಟಿ ನಷ್ಟದಲ್ಲಿ ಕೆಎಸ್‌ಆರ್‌ಟಿಸಿ.. ಕೊರೋನಾ ಒಂದೇ ಅಲ್ಲ ಕಾರಣ

ಮುಂದೆ ಪಿಕ್‌ ಅಪ್‌ ಆಗದೆ ಇದ್ದರೇ ನಮಗೆ ಸರಕಾರ(Government of Karnataka) ಅನುದಾನ(Grants) ನೀಡಬೇಕು. ಮೂರು ವರ್ಷದಿಂದ ಯಾವುದೇ ಬಸ್‌ ಖರೀದಿ ಮಾಡಿಲ್ಲ. ಮೊದಲು 17 ಲಕ್ಷ ಕಿ.ಮೀ. ನಿತ್ಯ ಬಸ್‌ ಓಡಿಸುತ್ತಿದ್ದೇವೆ. ಈ ಅವಧಿಯಲ್ಲಿ 22 ಲಕ್ಷ ಪ್ರಯಾಣಿಕರು(Passengers) ಓಡಾಡುತ್ತಿದ್ದರು. ಈಗ 14.50 ಲಕ್ಷ ಕಿ.ಮೀ. ಓಡಿಸುತ್ತಿದ್ದೇವೆ. 15 ಲಕ್ಷದವರೆಗೆ ಪ್ರಯಾಣಿಕರು ಓಡಾಡುತ್ತಿದ್ದಾರೆ. 4800 ಬಸ್‌ ಗಳಲ್ಲಿ ಈಗಾಗಲೇ ಶೇ.50ರಷ್ಟು ಓಡಿದ ಬಸ್‌ ಇದೆ. ಬೋರ್ಡ್‌ ಮೀಟಿಂಗ್‌ನಲ್ಲಿ ಎಲೆಕ್ಟ್ರಿಕಲ್‌ ಬಸ್‌ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಆದರೆ .ಕಿ.ಮೀ.ಗೆ 56 ರು. ಆಗುವುದರಿಂದ ಅದಕ್ಕೆ ಬೇಡ ಎನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇಲೆಕ್ಟ್ರಿಕಲ್‌ ಬಸ್‌(Electric Bus) ಈಗ ಅನಿವಾರ್ಯವಾಗಿದೆ. ಕೇಂದ್ರ ಸರಕಾರದಿಂದ(Central Government) 80 ಲಕ್ಷ ರು. ಸಬ್ಸಿಡಿ ಲಭಿಸುತ್ತದೆ. ಅದಕ್ಕೂ ಪರವಾನಗಿ ಕೇಳಿದ್ದೇವೆ. ಬಜೆಟ್‌ನಲ್ಲೂ(Budget) ಹೇಳಿದ್ದೇವೆ. ಅನುದಾನ ನೀಡಿದರೆ ಬಸ್‌ ಖರೀದಿ ಮಾಡುತ್ತೇವೆ. ಆದರೆ ಈಗ ಎಲೆಕ್ಟ್ರಿಕಲ್‌ ಬಸ್‌ ಅನಿವಾರ್ಯವಾಗಿದೆ. ಸಿಟಿಯೊಳಗೆ ಎಲೆಕ್ಟ್ರಿಕಲ್‌ ಬಸ್‌ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಆಗಿದೆ. ಕೇಂದ್ರ ಸಬ್ಸಿಡಿ ನೀಡಿದರೂ ಸಹ 56 ರು. ಕಿ.ಮೀ. ಆಗುತ್ತೆ. 50 ಬಸ್‌ ತೆಗೆದುಕೊಳ್ಳಬೇಕು ಎಂದು ಠರಾವು ಮಾಡಿದ್ದೇವೆ ಎಂದರು.

ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ನಿವೃತ್ತಿಯಾಗಿದ್ದರಿಂದ ಹೊಸ ಸಿಬ್ಬಂದಿಗಳ ನೇಮಕ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆಗೆ ಮಾತನಾಡಿದ್ದೇವೆ. ಈಗಾಗಲೇ ಸಂಸ್ಥೆ ನಷ್ಟದಲ್ಲಿದ್ದು ಹೊಸ ಸಿಬ್ಬಂದಿಯನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂದು ಮುಖಂಡರು ಹೇಳಿದ್ದಾರೆ , ಆದರೆ ಇದು ಜನರ ಸೇವೆಯಾಗಿದ್ದರಿಂದ ಮಾಡಬೇಕಾಗಿದ್ದು ಅನಿವಾರ್ಯತೆ ಇದೆ. ಪರವಾನಗಿ ಪಡೆದು ಸಿಬ್ಬಂದಿ ನೇಮಕ ಮಾಡುತ್ತೇವೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಚಾಲಕರು, ನಿರ್ವಾಹಕರ ಕೊರತೆ ಹೆಚ್ಚಿದೆ. ಬೇರೆ ಕಡೆಗಳಲ್ಲಿ ನೇಮಕ ಆಗಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶೀಘ್ರವೇ ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

KSRTC: ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿ ಮರುನೇಮಕ: ಸಚಿವ ರಾಮುಲು

ಕೆಎಸ್‌ಆರ್‌ಟಿಸಿ ಕೊರೋನಾ ಬಂದ ಮೇಲೆ ನಾಲ್ಕು ನಿಗಮಗಳು ನಷ್ಟದಲ್ಲಿದೆ. ಆದರೆ ಸರಕಾರ ಸಿಬ್ಬಂದಿಗಳಿಗೆ ವೇತನ ನೀಡುವ ವ್ಯವಸ್ಥೆ ಮಾಡಿ, ನಾಲ್ಕು ತಿಂಗಳು ಪೂರ್ಣ ವೇತನ(Salary) ಹಾಗೂ ಶೇ.50ರಷ್ಟು ನೀಡಿದರು. ಈಗಾಗಲೇ ನಿವೃತ್ತಿಯಾದವರಿಗೆ 1 ಸಾವಿರ ಕೋಟಿ ರು. ನೀಡುವುದು ವಾಯವ್ಯ ಕರ್ನಾಟದಿಂದ ಬಾಕಿ ಇದೆ. ಸಾರಿಗೆ ಮಂತ್ರಿಗಳಿಗೆ, ಮುಖ್ಯಮಂತ್ರಿಗೆ ಮಾತನಾಡಿದ್ದೇವೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಹ ಭರವಸೆ ನೀಡಿದ್ದಾರೆ. ವಾಯವ್ಯ ಕರ್ನಾಟಕದಲ್ಲಿ ನಿತ್ಯ 2 ಕೋಟಿ ರು. ವೇತನಕ್ಕೆ ಬೇಕು. ಬರುವುದು 4 ಕೋಟಿ ರು. ಸದ್ಯ ಬರುತ್ತಿದೆ. ಇದರಲ್ಲಿ 2.50 ಕೋಟಿ ರು.ಡೀಸೆಲ್‌ಗೆ ಬೇಕು. ಒಂದು ವಾರದ ಅವಧಿಯಿಂದ 4 ಕೋಟಿಗೂ ಅಧಿಕ ಕಲೆಕ್ಷನ್‌ ಬರುತ್ತಿದೆ. 2 ಕೋಟಿ ರು. ಉಳಿಯುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ(Students) ತೊಂದರೆ ಆಗದಂತೆ, ಗ್ರಾಮೀಣ ಭಾಗದಲ್ಲಿ ಬಸ್‌ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕದಂಬ ಬಸ್‌ ಕಾರವಾರದ(Karwar) ಬಸ್‌ ನಿಲ್ದಾಣದಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ ಗೋವಾದಲ್ಲಿ(Goa) ಕರ್ನಾಟಕ(Karnataka) ಬಸ್‌ಗಳಿಗೆ ಒಳಗೆ ಪ್ರವೇಶ ನೀಡುತ್ತಿಲ್ಲ. ಬಸ್‌ ರಸ್ತೆ ಮೇಲೆ ನಿಲ್ಲುತ್ತದೆ ಎನ್ನುವ ವಿಷಯ ಅಧ್ಯಕ್ಷರ ಗಮನಕ್ಕೆ ಬಂದಾಗ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಕಾರವಾರ ಬಸ್‌ ನಿಲ್ದಾಣದ ವ್ಯವಸ್ಥೆ ಸರಿಯಾಗಿ ಇಲ್ಲ. ಪಾರ್ಕಿಂಗ್‌ ಇಲ್ಲ, ಮಹಿಳೆಯರಿಗಾಗಿ ಕೊಠಡಿ ಇಲ್ಲ ಎನ್ನುವ ಮಾಹಿತಿ ಪಡೆದುಕೊಂಡರು. ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಉಚಿತ ಎನ್ನುವ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಘಟಕ ವ್ಯವಸ್ಥಾಪಕಿ ಸೌಮ್ಯ ನಾಯಕ ಹಾಗೂ ಇನ್ನಿತರರು ಇದ್ದರು.

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ