
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ಮಂಗಳೂರು-3ನೇ ಘಟಕದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್)ನಿಂದ ಕಟೀಲು/ಬೊಕ್ಕಪಟ್ಣ/ ಸ್ಟೇಟ್‍ಬ್ಯಾಂಕ್/ಕೋಡಿಕಲ್ ಮಾರ್ಗವಾಗಿ ನಗರ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕಟೀಲಿಗೆ ಬೆಳಗ್ಗೆ 6.55, 10.45, ವಯಾ: ಕೂಳೂರು-ಸುರತ್ಕಲ್-ಚೊಕ್ಕಬೆಟ್ಟು-ಕಾಟಿಪಳ್ಳ-ಶಿಬರೂರು-ಬಲವಿನಗುಡ್ಡೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಬೊಕ್ಕಪಟ್ಣದಿಂದ ಬೆಳಗ್ಗೆ 8.45, 10.15, 11.45, ಮಧ್ಯಾಹ್ನ 1.30, 3.20, 5.00, 6.30, ವಯಾ ಕಂಕನಾಡಿ-ಜ್ಯೋತಿ-ಪಿವಿಎಸ್-ಲಾಲ್‍ಬಾಗ್-ಸುಲ್ತಾನ್‍ಬತ್ತೇರಿ-ಅಮೃತವಿದ್ಯಾಲಯ-ಬೋಳಾರ್.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್)ದಿಂದ ಸ್ಟೇಟ್‍ಬ್ಯಾಂಕ್‍ಗೆ 3, ಸಂಜೆ 5, ಮಧ್ಯಾಹ್ನ 1, 1.25, 2.40, ವಯಾ ಪಡೀಲ್-ಮರೋಳಿ-ನಂತೂರು-ಕದ್ರಿ-ಜ್ಯೋತಿ
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ (ಪಡೀಲ್) ನಿಂದ ಕೋಡಿಕಲ್ ಬೆಳಗ್ಗೆ 8, 9, 9.50, 11, 12.15, 2.30, 3.30, ವಯಾ: ಪಡೀಲ್-ಮರೋಳಿ-ಕಂಕನಾಡಿ ಮಾರ್ಕೆಟ್-ಮಲ್ಲಿಕಟ್ಟೆ-ಕೆಪಿಟಿ-ಲಾಲ್‍ಬಾಗ್-ಉರ್ವಾಸ್ಟೋರ್-ಕೊಟ್ಟಾರ.
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
16ರಿಂದ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ವಿಳಂಬ
ಮಂಗಳೂರು: ವಿವಿಧ ದಿನಗಳಲ್ಲಿ ರೈಲು ಹಳಿ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು - ಸುಬ್ರಹ್ಮಣ್ಯ ನಡುವೆ ಪ್ಯಾಸಜ್ಜರ್ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಜೂ. 16, 18, 20 ಹಾಗೂ 23 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಪ್ರಯಾಣದಲ್ಲಿ ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಣಕ್ಕೆ (ವಿಳಂಬಕ್ಕೆ) ಒಳಪಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.