ನಷ್ಟದಲ್ಲಿ ಬಸ್‌ಗಳ ಓಡಾಟ| ಬಸ್ ಸಂಚಾರ ಆರಂಭವಾದರೂ ನಿಲ್ದಾಣಕ್ಕೆ ಬಾರದ ಪ್ರಯಾಣಿಕರು| ಒಂದು ಬಸ್‌ನಲ್ಲಿ 5 ರಿಂದ 10 ಜನ ಮಾತ್ರ ಸಂಚಾರ| ಕೆಎಸ್‌ಆರ್‌ಟಿಸಿಗೆ ಅಪಾರ ಪ್ರಮಾಣದಲ್ಲಿ ನಷ್ಟ|
ನರಗುಂದ(ಮೇ.31): ದೇಶದಲ್ಲಿ ಮನುಷ್ಯ ಕುಲವನ್ನು ನಾಶ ಮಾಡುವಂತ ಮಹಾಮಾರಿ ಕೊರೋನಾ ರೋಗ ಆವರಿಸಿರುವುದರಿಂದ ಸರ್ಕಾರ ಈ ರೋಗ ನಿಯಂತ್ರಣ ಮಾಡಲು 2 ತಿಂಗಳಕಾಲ ಲಾಕ್‌ಡೌನ್ ಮಾಡಿ ಬಸ್‌ಗಳ ಓಡಾಟ ಬಂದ್ ಮಾಡಿದ್ದರಿಂದ ಜನತೆ ಪ್ರತಿದಿನ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.
2 ತಿಂಗಳ ನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಲಾಕ್‌ಡೌನ್‌ನ್ನು ಅಲ್ಪ ಪ್ರಮಾಣದಲ್ಲಿ ಸಡಿಲಗೊಳಿಸಿ ಸಡಲಗೊಳಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೂ ಸಹ ಸಾರ್ವಜನಿಕರು ಬಸ್‌ನಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಕಡಿಮೆ ಸಂಖ್ಯೆಯ ಬಸ್‌ಗಳನ್ನು ಓಡಿಸುವ ಪ್ರಸಂಗ ಎದುರಾಗಿದ್ದು, ಅದರಲ್ಲೂ ಒಂದು ಬಸ್‌ನಲ್ಲಿ 5 ರಿಂದ 10 ಜನ ಮಾತ್ರ ಸಂಚಾರ ಮಾಡುತ್ತಿರುವ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ.
ಗದಗ ಜಿಲ್ಲೆಯಲ್ಲಿ ದೂರವಾಗದ ಕೊರೋನಾ ಆತಂಕ..!
ಸಂಸ್ಥೆಯ ತಾಲೂಕು ಅಧಿಕಾರಿಗಳು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಒಟ್ಟು 74 ಬಸ್‌ಗಳಿವೆ, 274 ನಿರ್ವಾಹಕರು, ಚಾಲಕರು ಇದ್ದಾರೆ. ಇಂದು ಸರ್ಕಾರದ ಆದೇಶ ಪ್ರಕಾರ ನಾವು ಪ್ರತಿ ದಿನ 8 ರಿಂದ 10 ಬಸ್‌ಗಳನ್ನು ಓಡಿಸುತ್ತಿದ್ದೇವೆ, ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳಸದೇ ಇರುವುದರಿಂದಾಗಿ ಬಸ್‌ನ ಡೀಸಲ್ ಖರ್ಚು ಸಹ ಬರದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಹೆಸರು ಹೇಳದ ಕೆಲವು ನಿರ್ವಾಹಕರು, ಚಾಲಕರು ಮಾತನಾಡಿ, ಕೊರೋನಾ ರೋಗದಿಂದ ಕಳೆದ 2 ತಿಂಗಳಿಂದ ಬಸ್ ಸಂಚಾರ ಬಂದಾಗಿದೆ, ಮೇಲಾಗಿ ನಮಗೆ 3 ತಿಂಗಳುಗಳಿಂದ ಸಂಬಳ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಎಲ್ಲ ನಿರ್ವಾಹಕರು, ಚಾಲಕರಿಗೆ ಆದಷ್ಟುಬೇಗನೇ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.