ಜೂನ್ 1ರಿಂದ ಬಸ್‌ಗಳ ಸಂಚಾರ; ಶೇ.15ರಷ್ಟುಹೆಚ್ಚಿದ ಟಿಕೆಟ್‌ ದರ

By Kannadaprabha News  |  First Published May 31, 2020, 8:38 AM IST

ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಜೂನ್‌ 1ರಿಂದ ನಿಯಮತ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಆದರೆ ಟಿಕೆಟ್‌ ದರದಲ್ಲಿ ಶೇ.15ರಷ್ಚು ಏರಿಸಲು ಬಸ್‌ಗಳ ಮಾಲೀಕರು ನಿರ್ಧರಿಸಿದ್ದಾರೆ.


ಉಡುಪಿ(ಮೇ 31): ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಜೂನ್‌ 1ರಿಂದ ನಿಯಮತ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಆದರೆ ಟಿಕೆಟ್‌ ದರದಲ್ಲಿ ಶೇ.15ರಷ್ಚು ಏರಿಸಲು ಬಸ್‌ಗಳ ಮಾಲೀಕರು ನಿರ್ಧರಿಸಿದ್ದಾರೆ.

ಈ ಬಗ್ಗೆ ಕೆನರಾ ಬಸ್‌ ಮಾಲೀಕರ ಸಂಘದ ಅದ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಪ್ರಸ್ತುತ ಎಲ್ಲ ಬಸ್ಸುಗಳು ರಸ್ತೆಗಿಳಿಯುವುದಿಲ್ಲ, ಪ್ರಯಾಣಿಕರ ಪ್ರತಿಕ್ರಿಯೆಯನ್ನು ಗಮನಿಸಿ ಮುಂದೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 2000 ಸರ್ವಿಸ್‌ ಬಸ್‌ಗಳಲ್ಲಿ 500 ಬಸ್ಸುಗಳಷ್ಟೇ ಸಂಚಾರ ಆರಂಭಿಸಲಿವೆ. ದ.ಕ. ಜಿಲ್ಲೆಯಲ್ಲಿ 320 ಸಿಟಿ ಬಸ್ಸುಗಳಲ್ಲಿ 135 ಮತ್ತು ಉಡುಪಿ ಜಿಲ್ಲೆಯ 82 ಸಿಟಿ ಬಸ್ಸುಗಳಲ್ಲಿ 22 ಬಸ್ಸುಗಳು ರಸ್ತೆಗಿಳಿಯಲಿವೆ ಎಂದರು.

Latest Videos

undefined

ಮಂಗಳೂರಿನಲ್ಲಿ ಮಿಡತೆ ಹಿಂಡು ಪ್ರತ್ಯಕ್ಷ: ಹಸಿರೆಲೆಗಳು ಖಾಲಿ

ಪ್ರತಿ ರೂಟಿನಲ್ಲಿ 15 - 20 ನಿಮಿಷಕ್ಕೊಂದು ಬಸ್ಸು ಓಡಾಡಲಿವೆ. ಸರ್ಕಾರದ ಆದೇಶದಂತೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್ಸಿನ ಸಂಚಾರ ಇರುತ್ತದೆ. ಸಾಮಾಜಿಕ ಅಂತರ, ಮಾಸ್ಕ್ , ಸ್ಯಾನಿಟೈಸರ್‌ ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತದೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ, ಬಸ್ಸು ಟಿಕೆಟ್‌ ದರದಲ್ಲಿ ಶೇ.15ರಷ್ಟುಏರಿಸಲು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ, ದಕ ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ ರಾಜ್‌ ಆಳ್ವಾ ಉಪಸ್ಥಿತರಿದ್ದರು.

click me!