ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾದ ಕಾರ್ಮಿಕರು: ತವರಿಗೆ ಮರಳಲು ಮೂರು ಪಟ್ಟು ದರ ಹೆಚ್ಚಿಸಿದ ಸಾರಿಗೆ ಸಂಸ್ಥೆ

Kannadaprabha News   | Asianet News
Published : May 16, 2020, 07:57 AM ISTUpdated : May 18, 2020, 05:24 PM IST
ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾದ ಕಾರ್ಮಿಕರು: ತವರಿಗೆ ಮರಳಲು ಮೂರು ಪಟ್ಟು ದರ ಹೆಚ್ಚಿಸಿದ ಸಾರಿಗೆ ಸಂಸ್ಥೆ

ಸಾರಾಂಶ

ಪ್ರತಿ ಟಿಕೆಟ್‌ಗೆ 330 ರು. ಇದ್ರೆ, ಪಡೆದದ್ದು 1110 ರು|  ಕಾರ್ಮಿಕರ ಅಸಹಾಯಕತೆಯನ್ನೇ ಬಂಡವಾಳಗಿಸಿಕೊಂಡ ಸಾರಿಗೆ ಸಂಸ್ಥೆ| ಸರ್ಕಾರದ ನೀತಿಗೆ ಬೇಸತ್ತು 5 ಲಕ್ಷ ರು. ಭರಿಸಿದ ಬಿಜೆಪಿ ಶಾಸಕ ರಾಜೂಗೌಡ| 5 ಲಕ್ಷ ರು.ಗಳ ಹಣ ನೀಡಿ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಂಡ ರಾಜೂಗೌಡ|

ಆನಂದ್ ಎಂ. ಸೌದಿ

ಯಾದಗಿರಿ(ಮೇ.16):  ಲಾಕ್‌ಡೌನ್ ಸಂದರ್ಭದಲ್ಲಿ ಅನ್ಯ ರಾಜ್ಯಗಳಲ್ಲಿ ಸಿಲುಕಿದ್ದ ಕಾರ್ಮಿಕರು ಹಾಗೂ ವಲಸಿಗರ ಅಸಾಹಯಕತೆಯನ್ನೇ ಸರ್ಕಾರ ಬಂಡವಾಳವಾಗಿಸಿಕೊಂಡಂತಿದೆ. ಅತಂತ್ರಗೊಂಡಿದ್ದ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಆಗುವಾಗ ಎಷ್ಟು ಬೇಕಾದರೂ ಹಣ (ಟಿಕೆಟ್ ದರ) ನಿಗದಿಪಡಿಸಿದರೆ ಕೊಟ್ಟೇ ಕೊಡುತ್ತಾರೆ ಎಂದರಿತ ಸಾರಿಗೆ ಸಂಸ್ಥೆ ಟಿಕೆಟ್ ದರದಲ್ಲಿ ಮೂರು ಪಟ್ಟು ಹೆಚ್ಚಳ ಮಾಡುವ ಮೂಲಕ, ಬಸವಳಿದ ಬಸವರ ಹೊಟ್ಟೆ ಮೇಲೆ ಕೊಡಲಿ ಪೆಟ್ಟು ನೀಡಿದಂತಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಸುರಪುರ ತಾಲೂಕಿಗೆ ಅನ್ಯ ರಾಜ್ಯಗಳಿಂದ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳಲು ಹೆಣಗಾಡಿದ್ದ ಆಡಳಿತ ಪಕ್ಷದ ಬಿಜೆಪಿ ಶಾಸಕ ನರಸಿಂಹ ನಾಯಕ್ (ರಾಜೂಗೌಡ), ಐದು ಲಕ್ಷ ರು.ಗಳನ್ನು ಸಾರಿಗೆ ಸಂಸ್ಥೆಗೆ ಭರಿಸಿದ ಮೇಲೆಯೇ ಬೆಳಗಾವಿ ಮೂಲಕ ಬಸ್‌ಗಳಲ್ಲಿ ಅವರನ್ನು ಜಿಲ್ಲೆಗೆ ಕರೆತರಲಾಗಿದೆ. ಹಣ ನೀಡಿದರೆ ಮಾತ್ರ ಬಸ್ ಬಿಡುವುದಾಗಿ ಬೆಳಗಾವಿ ಜಿಲ್ಲಾಡಳಿಯ ಷರತ್ತು ಹಾಕಿದ್ದರಿಂದ ಲಕ್ಷಾಂತರ ರು.ಗಳ ಹಣ ತಾವೇ ಭರಿಸಿ, ಕಾರ್ಮಿಕರು ಸುರಕ್ಷಿತವಾಗಿ ವಾಪಸ್ಸಾಗುವಲ್ಲಿ ಪ್ರಯತ್ನಿಸಿದ್ದಾರೆ.

‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!

ವಲಸಿಗರ ಹಾಗೂ ಕಾರ್ಮಿಕರ ವಾಪಸ್ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ ತೋರಿದೆ ಎಂಬ ಅಸಮಾಧಾನ ಶಾಸಕರ ರಾಜೂಗೌಡರನ್ನು ಕಾಡುತ್ತಿದ್ದು, ಇದಕ್ಕೆ ತಮ್ಮ ಬೆಂಬಲಿಗರು ಹಾಗೂ ಆಪ್ತರಲ್ಲಿ ತೀವ್ರ 330 ರು.ಗಳಷ್ಟಿದ್ದರೆ, ಇಲ್ಲಿ ಪ್ರತಿಯೊಬ್ಬರಿಗೆ 1100 ರು.ಗಳನ್ನು ಪಡೆಯಲಾಗಿದೆ. ತಲಾ ಒಂದು ಬಸ್ಸಿನಲ್ಲಿ 28 ಜನರಂತೆ, 13 ಬಸ್‌ಗಳಲ್ಲಿ ಕಾರ್ಮಿಕರನ್ನು ಕರೆ ತರಲಾಗಿದೆ. ನಮ್ಮ ಜನರ ಹಿತದೃಷ್ಟಿಗೆ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಎಲ್ಲ ಹಣ ಹಣ ಭರಿಸಿದ್ದೇನೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ ಶಾಸಕ ರಾಜೂಗೌಡ, ಇಂತಹ ಸಂದರ್ಭದಲ್ಲಿಸ ಸಾರಿಗೆ ಸಂಸ್ಥೆ ಬಡವರ ಹೊಟ್ಟೆ ಮೇಲೆ ಹೊಡೆಯಬಾರದು ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಬೆಳಗಾವಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾದರೂ, ಅದು ಫಲ ಕೊಡಲಿಲ್ಲ. ಎಲ್ಲ ಪ್ರಯಾಣಿಕರ ಹಣ ತುಂಬಲೇಬೇಕು ಎಂದು ಬೆಳಗಾವಿ ಜಿಲ್ಲಾಡಳಿತ ಪಟ್ಟು ಬಿಡಲಿಲ್ಲ. ಬಸ್ಸಿನಲ್ಲಿ ಕುಳಿತ ಕಾರ್ಮಿಕರನ್ನು ಕೆಳಗಿಳಿಸುವ ಪ್ರಮೇಯ ಎದುರಾಗಿತ್ತು. ಅನ್ನ ನೀರಿಲ್ಲದೆ ಹೈರಾಣಾಗಿರುವ ಕಾರ್ಮಿಕರಿಂದ ದುಡ್ಡು ಭರಿಸುವ ಬದಲು ನಾನೇ ಸ್ವಂತವಾಗಿ ಅದನ್ನು ತುಂಬಿದ್ದೇನೆ ಎಂದವರು ತಿಳಿಸಿದರು.
ಈಗಾಗಲೇ 28 ಬಸ್‌ಗಳಲ್ಲಿ ಸುರಪುರ ತಾಲೂಕಿಗೆ ಕಾರ್ಮಿಕರು/ವಲಸಿಗರು ವಾಪಸ್ಸಾಗಿದ್ದಾರೆ. ಗೋವಾ ರಾಜ್ಯದಲ್ಲಿದ್ದ ಜನರು ಬೆಳಗಾವಿ ಮೂಲಕ ಬಂದ ಬಸ್‌ಗಳಿಗೆ ಹಣ ಪಡೆಯಲಾಗಿಲ್ಲ. 13 ಬಸ್‌ಗಳಿಗೆ ಹಣ ನೀಡಿದ್ದೇನೆ. ಟಿಕೆಟ್ ಹಣ ಕೊಡಬಾರದು ಎಂದಲ್ಲ, ಆದರೆ ಇಂತಹ ಕಷ್ಟದ ಸಂದರ್ಭದಲ್ಲಿ  ಮೂಲ ದರಕ್ಕಿಂತ ಮೂರು ಪಟ್ಟು ಹೆಚ್ಚಿಸಿರುವುದು ನ್ಯಾಯವಲ್ಲ ಎಂದೂ ರಾಜೂಗೌಡರ ಮಾತುಗಳಲ್ಲಿ ಬೇಜಾರು ಎದ್ದು ಕಾಣುತ್ತಿತ್ತು.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!