ಕೊರೋನಾ ವಿರುದ್ಧ ಹೋರಾಟ: ಹೋಟೆಲ್‌ ಕ್ವಾರಂಟೈನ್‌ಗೆ ದರ ನಿಗದಿ

By Kannadaprabha NewsFirst Published May 16, 2020, 7:36 AM IST
Highlights

ನಾನ್‌ ಎಸಿ ಕೊಠಡಿಗಳಲ್ಲಿ ಒಬ್ಬರಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ 700 ರು. ನಿಗದಿ| ಇಬ್ಬರು ಒಂದೇ ಕೊಠಡಿಯಲ್ಲಿ ಇದ್ದರೆ 1000 ,ಎಸಿ ಕೊಠಡಿಯಲ್ಲಿ ಇಬ್ಬರಿಗೆ ದಿನವೊಂದಕ್ಕೆ 1500 ರು.|ಕಡಿಮೆ ದರದ ಹೋಟೆಲ್‌ಳೂ ಕೂಡ ಲಭ್ಯ|

ಹುಬ್ಬಳ್ಳಿ(ಮೇ.16): ಹೊರ ರಾಜ್ಯಗಳಿಂದ ಆಗಮಿಸುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಸ್ವಂತ ವೆಚ್ಚ ಭರಿಸಲು ಸಿದ್ಧ ಇರುವವರು ಹೋಟೆಲ್‌ ಕ್ವಾರಂಟೈನ್‌ ಆಯ್ದುಕೊಳ್ಳಬಹುದು. ಇದಕ್ಕಾಗಿ ನಗರದಲ್ಲಿ ಇರುವ ವಿವಿಧ ಹೋಟೆಲ್‌ಗಳಿಗೆ ಸಾಮಾನ್ಯ ದರಗಳನ್ನು ನಿಗದಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳ ಜತೆಗಿನ ಸಭೆಯಲ್ಲಿ ಚರ್ಚಿಸಿ ಈ ದರಗಳನ್ನು ಕ್ವಾರಂಟೈನ್‌ ಸೌಲಭ್ಯಕ್ಕೆ ನಿಗದಿಗೊಳಿಸಲಾಗಿದೆ. ನಾನ್‌ ಎಸಿ ಕೊಠಡಿಗಳಲ್ಲಿ ಒಬ್ಬರಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ 700 ನಿಗದಿ ಮಾಡಲಾಗಿದೆ. ಇಬ್ಬರು ಒಂದೇ ಕೊಠಡಿಯಲ್ಲಿ ಇದ್ದರೆ 1000 ಹಾಗೂ ಎಸಿ ಕೊಠಡಿಯಲ್ಲಿ ಇಬ್ಬರಿಗೆ ದಿನವೊಂದಕ್ಕೆ 1500 ನಿಗದಿ ಪಡಿಸಲಾಗಿದೆ.

ಕೇಂದ್ರ ಸರ್ಕಾದ ಪ್ಯಾಕೇಜ್‌ನಲ್ಲಿ ರೈತರಿಗೆ ನೆರವು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕಡಿಮೆ ದರದ ಹೋಟೆಲ್‌ಗಳು:

ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ ಒಬ್ಬರಿಗೆ 500  ಹಾಗೂ ಇಬ್ಬರಿಗೆ ಶೇರಿಂಗ್‌ ಆಧಾರದಲ್ಲಿ 700 ದರ ನಿಗದಿಪಡಿಸಲಾಗಿದೆ. ಹೋಟೆಲ್‌ಗಳ ಮಾಲೀಕರು ತಮ್ಮ ಹೋಟೆಲ್‌ ವಿಳಾಸ, ಲಭ್ಯ ಇರುವ ಕೊಠಡಿಗಳ ವರ್ಗಿಕರಣದ ಮಾಹಿತಿ ಮತ್ತು ತಮ್ಮ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಅಡಿ ತಂಗುವವರ ಕುರಿತು ಪೂರ್ಣ ವಿವರಗಳನ್ನು ಧಾರವಾಡ ಜಿಲ್ಲಾಧಿಕರಿಗಳ ಕಚೇರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.
 

click me!