KSRTC ನೌಕರರ ಪ್ರತಿಭಟನೆ ಸಾಮಾನ್ಯ ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನೇ ಉಂಟು ಮಾಡಿದೆ. ನವಜಾತ ಶಿಶುವಿನೊಂದಿಗೆ ಬಾಣಂತಿಯೋರ್ವಳು ಮೂರು ದಿನ ನಿಲ್ದಾಣದಲ್ಲೇ ಕಳೆದಿದ್ದಾಳೆ
ಕಲಬುರಗಿ (ಡಿ.14): ತನ್ನ ಮಡಿಲಲ್ಲಿ 20 ದಿನದ ನವಜಾತ ಶಿಶುವನ್ನಿಟ್ಟುಕೊಂಡು ಇಲ್ಲಿನ ಬಸ್ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿಗೆ ಕಲಬುರಗಿ ನಗರದ ಆಟೋ ಚಾಲಕರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಬಾಣಂತಿ ಒಂದು ನವಜಾತ ಶಿಶು ಮತ್ತು 3 ವರ್ಷದ ಮಗುವಿನೊಂದಿಗೆ ಕಳೆದ 3 ದಿನಗಳ ಹಿಂದೆಯೇ ತವರೂರು ಲಾತೂರಿನಿಂದ ಕಲಬುರಗಿಗೆ ಆಗಮಿಸಿದ್ದಾಳೆ.
undefined
ಪತ್ನಿ, ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ 400 ಕಿ.ಮೀ. ಸಂಚಾರ ..
ಇಲ್ಲಿಂದ ತನ್ನ ಪತಿ ವಾಸವಿರುವ ಬೆಂಗಳೂರಿಗೆ ಹೋಗಲು ಆಗಮಿಸಿದ್ದಳು. ಆದರೆ, ಮುಷ್ಕರ ಶುರುವಾಗಿದ್ದರಿಂದ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, 3 ದಿನ ಬಸ್ ನಿಲ್ದಾಣದಲ್ಲೇ ಕೊರೆಯುವ ಚಳಿಯಲ್ಲಿಯೇ ಕಾಲ ಕಳೆದಿದ್ದಾಳೆ.
ಇದನ್ನು ಗಮನಿಸಿದ ಇಲ್ಲಯ ಆಟೋ ಚಾಲಕರು 3 ಸಾವಿರ ರು. ಚಂದಾ ಸಂಗ್ರಹಿಸಿ ಆಕೆಯನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.