ಕೋಲಾರ ಐಫೋನ್‌ ಘಟಕ ಧ್ವಂಸ : 120 ಮಂದಿ ಜೈಲಿಗೆ

By Kannadaprabha NewsFirst Published Dec 14, 2020, 7:16 AM IST
Highlights

ಕೋಲಾರದಲ್ಲಿ ಐ ಫೋನ್ ಘಟಕವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 120 ಮಂದಿಯನ್ನು ಅರೆಸ್ಟ್ ಮಾಡಿ ಜೈಲಿಗಟ್ಟಲಾಗಿದೆ.

ಕೋಲಾರ (ಡಿ.14) : ಐಫೋನ್‌ ಮೊಬೈಲ್‌ ಬಿಡಿಭಾಗಗಳನ್ನು ತಯಾರಿಸುತ್ತಿದ್ದ ಕೋಲಾರದ ವಿಸ್ಟ್ರಾನ್‌ ಇಸ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಶನಿವಾರ ಕಾರ್ಮಿಕರು ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಕಾರ್ಮಿಕರನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 300ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಮಿಕರನ್ನು ಬಿಗಿ ಭದ್ರತೆಯಲ್ಲಿ ಪೊಲೀಸರು ಕರೆದೊಯ್ದು ಜಿಲ್ಲಾ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಪರೆನ್ಸ್‌ ಮೂಲಕ ಹಾಜರುಪಡಿಸಿದರು.

ನೌಕರರಿಂದಲೇ ಕೋಲಾರದ iPhone ಕಚೇರಿ ಪುಡಿ ಪುಡಿ! ...

 ಕೋಲಾರದ ಎಸ್ಪಿ ಕಚೇರಿ ಹಿಂಭಾಗದ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಯಿತು. 5 ಖಾಸಗಿ ಬಸ್‌ಗಳಲ್ಲಿ 120ಕ್ಕೂ ಹೆಚ್ಚು ಆರೋಪಿಗಳನ್ನು ಕೆಜಿಎಫ್‌, ಚಿಂತಾಮಣಿ ಮತ್ತು ಚಿತ್ರದುರ್ಗ ಜೈಲಿಗೆ ಸಾಗಿಸಲಾಯಿತು.

click me!