ಲಾಕ್‌ಡೌನ್‌: KSRTC ನೌಕರರಿಗೆ ಕೊನೆಗೂ ಸಂಬಳ ಪಾವ​ತಿ..!

By Kannadaprabha NewsFirst Published May 8, 2020, 9:03 AM IST
Highlights

ರಾಜ್ಯ ಸರ್ಕಾರದಿಂದ 325 ಕೋಟಿ ಬಿಡುಗಡೆ| ನೌಕರರ ಏಪ್ರಿಲ್‌ ತಿಂಗಳ ವೇತನ ಪಾವತಿಗಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ| ಮೇ ತಿಂಗಳ ಉಳಿದರ್ಧ ಮೊತ್ತವನ್ನು ನಿಗಮಗಳು ಸ್ವಂತ ಸಂಪನ್ಮೂಲಗಳಿಂದ ಸಂಗ್ರಹಿಸಿ ವೇತನ ಭರಿಸುವಂತೆ ಸೂಚನೆ|

ಬೆಂಗಳೂರು(ಮೇ.08): ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಏಪ್ರಿಲ್‌ ತಿಂಗಳ ವೇತನ ಪಾವತಿಗಾಗಿ ರಾಜ್ಯ ಸರ್ಕಾರ 325 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ.

ಲಾಕ್‌ಡೌನ್‌ನಿಂದ ಆದಾಯವಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದ ನಾಲ್ಕು ಸಾರಿಗೆ ನಿಗಮಗಳು, ನೌಕರರ ವೇತನ ಪಾವತಿಸಲು ಮಾಸಿಕ 364 ಕೋಟಿ ರು.ನಂತೆ ಮೂರು ತಿಂಗಳಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಇರಿಸಿದ್ದವು. ನಿಗಮಗಳ ಕೋರಿಕೆ ಪುರಸ್ಕರಿಸಿರುವ ರಾಜ್ಯ ಸರ್ಕಾರ, ವಿದ್ಯಾರ್ಥಿ ಬಸ್‌ ಪಾಸ್‌ ಸಹಾಯಧನದ ಶೀರ್ಷಿಕೆಯಡಿ ಏಪ್ರಿಲ್‌ ತಿಂಗಳ ವೇತನ ಪಾವತಿಗೆ 325 ಕೋಟಿ ರು. ಹಾಗೂ ಮೇ ತಿಂಗಳ ವೇತನ ಪಾವತಿಗೆ ಶೇ.50ರಷ್ಟು ಅಂದರೆ, 162.50 ಕೋಟಿ ರು. ಅನುದಾನ ಒದಗಿಸಿದೆ. 

ಲಾಕ್‌ಡೌನ್‌ ಎಫೆಕ್ಟ್‌: ಇಂದಿ​ನಿಂದ ವಲಸೆ ಕಾರ್ಮಿಕರಿಗೆ ವಿಶೇಷ ರೈಲು..!

ಮೇ ತಿಂಗಳ ಉಳಿದರ್ಧ ಮೊತ್ತವನ್ನು ನಿಗಮಗಳು ಸ್ವಂತ ಸಂಪನ್ಮೂಲಗಳಿಂದ ಸಂಗ್ರಹಿಸಿ ವೇತನ ಭರಿಸುವಂತೆ ಸೂಚಿಸಲಾಗಿದೆ.

ನಿಗಮವಾರು ಅನುದಾನ ಹಂಚಿಕೆ

ನಿಗಮ ಅನುದಾನ (ಕೋಟಿ ರು.) (ಏಪ್ರಿಲ್‌) (ಮೇ)

ಕೆಎಸ್‌ಆರ್‌ಟಿಸಿ 101.76 50.88
ಬಿಎಂಟಿಸಿ 98.62 49.31
ವಾಕರಸಾನಿ 66.43 33.215
ಈಕರಾರಸಾ 58.20 29.10
 

click me!