ದೇವರ ವಿಗ್ರಹ ಖರೀದಿ ಹಾಗೂ ಐಫೋನ್ ಉಡುಗೊರೆ ನೆಪದಲ್ಲಿ ಇಬ್ಬರಿಗೆ ವಂಚನೆ| ಬೆಂಗಳೂರಿನಲ್ಲಿ ನಡೆದ ಘಟನೆ| ಸೈಬರ್ ಕಳ್ಳರ ಕೈಚೆಳಕ|
ಬೆಂಗಳೂರು(ಮೇ.08): ರಾಜಧಾನಿಯಲ್ಲಿ ಸೈಬರ್ ಕಳ್ಳರ ಹಾವಳಿ ಮುಂದುವರಿದಿದ್ದು, ದೇವರ ವಿಗ್ರಹ ಖರೀದಿ ಹಾಗೂ ಐಫೋನ್ ಉಡುಗೊರೆ ನೆಪದಲ್ಲಿ ಇಬ್ಬರಿಗೆ ವಂಚಿಸಿದ್ದಾರೆ. ದೇವರ ವಿಗ್ರಹ ಮಾರಾಟ ಮಾಡುವ ವಿಜಯನಗರದ ಸಂಜಯ್ ಜೋಷಿ ಹಣ ಕಳೆದುಕೊಂಡಿದ್ದು, ಅವರಿಗೆ ಸೈನಿಕ ಶ್ರೀಕಾಂತ್ ಸಿಂಗ್ ಹೆಸರಿನಲ್ಲಿ ವಂಚಿಸಲಾಗಿದೆ.
ಆರೋಪಿ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ತನ್ನ ಮೇಲಧಿಕಾರಿಗಳಿಗೆ ದೇವರ ವಿಗ್ರಹ ಬೇಕಿದೆ. ಅಲ್ಲದೆ 40 ಸಾವಿರ ಮೌಲ್ಯದ ಮೂರ್ತಿ ಖರೀದಿಸುವುದಾಗಿ ಹೇಳಿದ ಆತ, ಸಂಜಯ್ ಅವರ ವ್ಯಾಲೆಟ್‌ನಿಂದ ತನ್ನ ಖಾತೆಗೆ 5 ವರ್ಗಾಯಿಸಿಕೊಂಡು, ಅದಕ್ಕೆ ಪ್ರತಿಯಾಗಿ 10 ರು. ವರ್ಗಾಯಿಸಿದ್ದಾನೆ. ಈ ರೀತಿ ವ್ಯವಹರಿಸುವುದು ಭಾರತೀಯ ವಾಯುಸೇನೆ ಪದ್ಧತಿ ಎಂದು ನಂಬಿಸಿದ್ದ. ಇದಾದ ಕೆಲ ನಿಮಿಷಗಳ ಬಳಿಕ ಸಂಜಯ್ ಜೋಷಿ ಅವರ ಖಾತೆಯಿಂದ 8 ಸಾವಿರ ದೋಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 11 ಪಂಗನಾಮ!
ಐ ಫೋನ್ ಗಿಫ್ಟ್:
ಅಪರಿಚಿತನ ಐ ಫೋನ್ ಉಡುಗೊರೆ ಆಸೆಗೆ ಬಿದ್ದು ರಾಮ್ ಪ್ರಸಾದ್ ಎಂಬುವರು 25 ಸಾವಿರ ಕಳೆದುಕೊಂಡಿದ್ದಾರೆ. ಮೂರು ದಿನಗಳ ಹಿಂದೆ ರಾಮಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿ, ನಿಮ್ಮ ಫೋನ್ ನಂಬರ್‌ಗೆ ಐಫೋನ್ ಉಡುಗೋರೆ ಬಂದಿದೆ. ಅದನ್ನು ಸ್ವೀಕರಿಸಲು ಆನ್‌ಲೈನ್ ಲಿಂಕ್ ಕಳುಹಿಸುತ್ತೇನೆ. ಕ್ಲಿಕ್ ಮಾಡುವಂತೆ ಸೂಚಿಸಿದ. ಈ ನಂಬಿ ಅವರು ಲಿಂಕ್ ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ.