ಬಸ್ಸಿನಲ್ಲಿ ಮರೆತ ಲ್ಯಾಪ್‌ಟಾಪ್‌ ಮರಳಿಸಿ ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ

By Suvarna NewsFirst Published Jan 18, 2021, 3:35 PM IST
Highlights

KSRTC ಬಸ್ಸಿನಲ್ಲಿ ಮರೆತಿದ್ದ 70 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ಬ್ಯಾಗನ್ನು ಮಾಲಿಕರಿಗೆ ಮರಳಿಸಿ ಕಂಡಕ್ಟರ್ ಹಾಗೂ ಡ್ರೈವರ್ ಪ್ರಾಮಾಣಿಕತೆ ಮೆರೆದಿದ್ದಾರೆ. ಪ್ರಯಾಣಿಕರನ್ನು ಪತ್ತೆ ಹಚ್ಚಿ ವಾಪಸ್ ಮಾಡಿದ್ದಾರೆ.

ಸುಬ್ರಹ್ಮಣ್ಯ (ಜ.18):  ಬಸ್ಸಿನಲ್ಲಿ ಪ್ರಯಾಣಿಕರೋರ್ವರು ಮರೆತು ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್‌ ಹಿಂದಿರುಗಿಸಿ KSRTC ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. 

ಜನವರಿ 16 ರಂದು ಸುಬ್ರಮಣ್ಯ ರೈಲ್ವೆ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಪ್ರಯಾಣ ಮಾಡಿದ್ದ ಪ್ರಯಾಣಿಕರೋರ್ವರು ತಮ್ಮ ಲ್ಯಾಪ್‌ಟಾಪ್‌ ಮರೆತು ಹೋಗಿದ್ದರು.  70 ಸಾವಿರ ಬೆಲೆ ಬಾಳುವ ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಿಂದಿರುಗಿಸಿದ್ದಾರೆ. 

ಸಾರಿಗೆ ನೌಕರರಿಗೆ ಡಿಸೆಂಬರ್‌ ತಿಂಗಳ ಅರ್ಧ ವೇತನ ಜಮೆ ..

ಕೆಎಸ್ಆರ್ಟಿಸಿಯ KA:21, F : 0039 ನಂಬರಿನ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು.  ಇಲ್ಲಿ ಲ್ಯಾಪ್‌ಟಾಪ್‌ ಬಿಟ್ಟು ಹೋಗಿದ್ದು, ಬಸ್ಸಿನ ಚಾಲಕ ಇಸುಬ್ ಅಲಿ ಕಲ್ಲೂರ್, ನಿರ್ವಾಹಕ ಮಂಜು ಪ್ರಯಾಣಿಕರನ್ನ ಪತ್ತೆ ಹಚ್ಚಿದ್ದಾರೆ.

ಆಟೋದಲ್ಲಿ ಮರೆತ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಚಾಲಕ ..

ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಮರಳಿಸಿದ್ದಾರೆ. ಚಾಲಕ ನಿರ್ವಾಹಕರ ಪ್ರಾಮಾಣಿಕತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!