ಬಳ್ಳಾರಿ ಆಂಧ್ರಕ್ಕೆ ಸೇರಿಸಬೇಕು ಎಂಬ ಕೂಗಿಗೆ ಕರವೇ ಅಕ್ರೋಶ

By Suvarna News  |  First Published Jan 18, 2021, 3:23 PM IST

ಬಳ್ಳಾರಿ ಆಂಧ್ರಕ್ಕೆ ಸೇರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸುತ್ತಿರುವ ಆಂಧ್ರದಲ್ಲಿನ ಕೆಲ ಸಂಘಟನೆಗಳು| ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದನ್ನ ಸರ್ಕಾರ ಕೈಬಿಡಬೇಕು| ಬಳ್ಳಾರಿ ಮೇಲೆ ಉಂಟಾಗುವ ಆಂಧ್ರದ ಪ್ರಭಾವ ತಡೆಯಬೇಕು| 


ಬಳ್ಳಾರಿ(ಜ.18): ಆಂಧ್ರಪ್ರದೇಶಕ್ಕೆ ಬಳ್ಳಾರಿ ಸೇರಿಸಬೇಕು ಎಂಬ ಕೂಗಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ತೀವ್ರತರವಾದ ಆಕ್ರೋಶ ವ್ಯಕ್ತವಾಗಿದೆ.

ಆಂಧ್ರದಲ್ಲಿನ ಕೆಲ ಸಂಘಟನೆಗಳು ಬಳ್ಳಾರಿಯನ್ನ ಆಂಧ್ರಕ್ಕೆ ಸೇರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸುತ್ತಿವೆ. ಇದನ್ನು ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಇಂದು(ಸೋಮವಾರ) ಪ್ರತಿಭಟನೆ ನಡೆಸಿದ್ದಾರೆ. 

Tap to resize

Latest Videos

ಬೆಳಗಾವಿ ಆಯ್ತು ಇದೀಗ ಬಳ್ಳಾರಿ ಆಂಧ್ರಕ್ಕೆ ಸೇರಿಸಲು ಒತ್ತಾಯ

ಆ ಕಡೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ತಗಾದೆ ತೆಗೆದಿದೆ. ಈ ಕಡೆ ಆಂಧ್ರದವರ ಕಿರಿಕಿರಿ ಆರಂಭವಾಗಿದೆ.  ಇದೀಗ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾಗಿದ್ದಕ್ಕೆ ಆಂಧ್ರ ಕೂಡ ಬಳ್ಳಾರಿ ಮೇಲೆ ಗಧಾಪ್ರವಾಹ ಮಾಡುತ್ತಿದೆ. ಈ ಪದ್ದತಿ ಸರಿಯಲ್ಲ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದನ್ನ ನಿಲ್ಲಿಸಬೇಕು. ಈ ಮೂಲಕ ಬಳ್ಳಾರಿ ಮೇಲೆ ಉಂಟಾಗುವ ಆಂಧ್ರದ ಪ್ರಭಾವ ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ. 
 

click me!