ತಾಲೂಕಿನ ಮೊರಬನಹಳ್ಳಿ ಗ್ರಾಮದಿಂದ ಕೂಡ್ಲಿಗಿಗೆ ಬಸ್ ಸಂಚರಿಸುತ್ತಿತ್ತು| ಈ ವೇಳೆ ರಸ್ತೆಯಲ್ಲಿ ರೈತರು ರಾಶಿ ಮಾಡುತ್ತಿದ್ದರು| ಚಾಲಕ ಬಸ್ ಅನ್ನು ರಸ್ತೆ ಬದಿಯಲ್ಲಿ ಓಡಿಸಿದ್ದರಿಂದ ವಾಲಿದ ಬಸ್| ಒಂದು ಬದಿಯ ಚಕ್ರಗಳು ಮೇಲೆ ಎದ್ದಿದ್ದವು| ಮಳೆ ಆಗಿದ್ದರಿಂದ ಇನ್ನೊಂದು ಬದಿಯ ಚಕ್ರಗಳು ಮಣ್ಣಿನಲ್ಲಿ ಹೂತಿದ್ದರಿಂದ ಬಸ್ ಪಲ್ಟಿಯಾಗುವುದು ತಪ್ಪಿದೆ| ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ|
ಕೂಡ್ಲಿಗಿ(ಅ.5): ರೈತರು ರಸ್ತೆಯಲ್ಲಿ ಫಸಲನ್ನು ಹಾಕಿದ್ದರಿಂದ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್ ಉರುಳುವುದು ಕೂದಲೆಯ ಅಂತರದಲ್ಲಿ ತಪ್ಪಿದೆ. ತಾಲೂಕಿನ ಮೊರಬನಹಳ್ಳಿ ಗ್ರಾಮದಿಂದ ಕೂಡ್ಲಿಗಿಗೆ ಬಸ್ ಸಂಚರಿಸುತ್ತಿತ್ತು. ಈ ವೇಳೆ ರಸ್ತೆಯಲ್ಲಿ ರೈತರು ರಾಶಿ ಮಾಡುತ್ತಿದ್ದರು. ಹೀಗಾಗಿ, ಚಾಲಕ ಬಸ್ ಅನ್ನು ರಸ್ತೆ ಬದಿಯಲ್ಲಿ ಓಡಿಸಿದ್ದಾನೆ. ಈ ವೇಳೆ ಬಸ್ ವಾಲಿದ್ದು, ಒಂದು ಬದಿಯ ಚಕ್ರಗಳು ಮೇಲೆ ಎದ್ದಿದ್ದವು. ಮಳೆ ಆಗಿದ್ದರಿಂದ ಇನ್ನೊಂದು ಬದಿಯ ಚಕ್ರಗಳು ಮಣ್ಣಿನಲ್ಲಿ ಹೂತಿದ್ದರಿಂದ ಬಸ್ ಪಲ್ಟಿಯಾಗುವುದು ತಪ್ಪಿದೆ. ಈ ಘಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳ ಪಾಲಕರು ರಸ್ತೆಯಲ್ಲಿ ಹಾಕಿದ್ದ ರಾಶಿಯನ್ನು ತೆಗೆಯುವಂತೆ ರೈತರಿಗೆ ತಾಕೀತು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಕೂಡ್ಲಿಗಿಯ ಯುವ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತ ಸಚಿನ್ ಕುಮಾರ್ ಅವರು, ರಸ್ತೆಯಲ್ಲಿ ಜೋಳ ಇತರೆ ಫಸಲುಗಳನ್ನು ರಸ್ತೆಯಲ್ಲಿ ಹಾಕಿ ಒಕ್ಕಲುತನ ಮಾಡುವುದರಿಂದ ಅಪಘಾತಗಳು ಆಗುವ ಸಂಭವವಿದೆ. ನೂರಾರು ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮುಂದೆ ಈ ರೀತಿಯ ಅಪಘಾತಗಳು ಆಗದಂತೆ ನಮ್ಮ ಯುವ ಬ್ರಿಗೇಡ್ ಸಂಘಟನೆ ವತಿಯಿಂದ ರೈತರಿಗೆ ಅರಿವು ಮೂಡಿಸುವ ಮತ್ತು ಅಪಘಾತಗಳನ್ನು ತಪ್ಪಿಸುವ ಕಾರ್ಯಕ್ಕೆ ಕೈ ಜೋಡಿಸಲಾಗುವುದು ಎಂದು ಹೇಳಿದ್ದಾರೆ.