ರಾಯಚೂರು: ಡಿವೈಡರ್‌ಗೆ ಡಿಕ್ಕಿ ಹೊಡೆದ KSRTC ಬಸ್‌, ಸ್ಥಳದಲ್ಲೇ ಚಾಲಕ ಸಾವು

Published : Jul 12, 2024, 11:19 AM ISTUpdated : Jul 12, 2024, 01:35 PM IST
ರಾಯಚೂರು: ಡಿವೈಡರ್‌ಗೆ ಡಿಕ್ಕಿ ಹೊಡೆದ KSRTC ಬಸ್‌, ಸ್ಥಳದಲ್ಲೇ ಚಾಲಕ ಸಾವು

ಸಾರಾಂಶ

ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಅಪಘಾತದಲ್ಲಿ ಬಸ್ ಚಾಲಕ/ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.   

ರಾಯಚೂರು(ಜು.12):  ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಅಪಘಾತದಲ್ಲಿ ಬಸ್ ಚಾಲಕ/ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವ ನಡೆದಿದೆ. 

ಬಸ್ ಚಾಲಕ/ನಿರ್ವಾಹಕ ರಾಚಪ್ಪ (51)ಮೃತ ದುರ್ದೈವಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ಎಕ್ಸ್‌ಪ್ರೆಸ್‌ವೇಯಲ್ಲಿ ಹಾಲಿನ ಟ್ಯಾಂಕರ್‌ಗೆ ಡಬ್ಬಲ್ ಡೆಕ್ಕರ್ ಬಸ್ ಡಿಕ್ಕಿ: 18 ಜನರ ದಾರುಣ ಸಾವು

ಅಪಘಾತಕ್ಕೀಡಾದ KSRTC ಬಸ್ ಹುಬ್ಬಳ್ಳಿಯಿಂದ ರಾಯಚೂರಿನತ್ತ ಬರುತ್ತಿತ್ತು ಎಂದು ತಿಳಿದು ಬಂದಿದೆ. ಬಸ್ ನಲ್ಲಿ 9 ಜನ ಪ್ರಯಾಣಿಕರಿದ್ದು, ಓರ್ವರಿಗೆ ಮಾತ್ರ ಗಾಯವಾಗಿದೆ. ಈ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV
Read more Articles on
click me!

Recommended Stories

ಬೆಳಗಾವಿಯ ಅಥಣಿಯಿಂದ ಮಹಾರಾಷ್ಟ್ರ, ಆಂಧ್ರಕ್ಕೆ ಹೊಸ ಸಾರಿಗೆ ಬಸ್ ಆರಂಭ, ಅಂತಾರಾಜ್ಯ ಬಸ್ ಸೇವೆಯ ಸಮಯ ಹೀಗಿದೆ
ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಚಿಕ್ಕಮಗಳೂರಿನಲ್ಲಿ ಬೆಳಗ್ಗಿನಿಂದಲೇ ಮಳೆ