ದಾವಣಗೆರೆ: ಒಂದೇ ಗ್ರಾಮದಲ್ಲಿ, ಒಂದೇ ದಿನ 7 ಸಾವು, ಅಂತ್ಯಕ್ರಿಯೆಗೆ ಜಾಗ ಕೂಡ ಇಲ್ಲ..!

By Kannadaprabha News  |  First Published Jul 12, 2024, 6:30 AM IST

ವೃದ್ಧೆಯರು, ವಾಂತಿ ಭೇದಿಯಿಂದ ವೃದ್ಧೆ ಸೇರಿ ಇಬ್ಬರು, ತೀವ್ರ ಜ್ವರಕ್ಕೆ ಯುವಕ ಸೇರಿದಂತೆ ಇಬ್ಬರು ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ನವಜಾತ ಶಿಶು ಮೃತಪಟ್ಟಿದೆ. ಒಂದೇ ದಿನ ಒಂದೇ ಗ್ರಾಮದಲ್ಲಿ 7 ಜನರ ಸಾವು ಜನರನ್ನು ತೀವ್ರ ಆತಂಕಕ್ಕೆ ನೂಕಿದೆ.


ದಾವಣಗೆರೆ(ಜು.12):  ನಗರದ ಹೊರವಲಯದ ಹೊಸಕುಂದುವಾಡ ಗ್ರಾಮದಲ್ಲಿ ಮೂರು ದಿನದ ನವಜಾತ ಶಿಶು ಸೇರಿ 65 ವರ್ಷದ ವೃದ್ಧೆವರೆಗೆ ಒಂದೇ ದಿನ ಏಳು ಮಂದಿ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವೃದ್ಧೆಯರು, ವಾಂತಿ ಭೇದಿಯಿಂದ ವೃದ್ಧೆ ಸೇರಿ ಇಬ್ಬರು, ತೀವ್ರ ಜ್ವರಕ್ಕೆ ಯುವಕ ಸೇರಿದಂತೆ ಇಬ್ಬರು ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ನವಜಾತ ಶಿಶು ಮೃತಪಟ್ಟಿದೆ. ಒಂದೇ ದಿನ ಒಂದೇ ಗ್ರಾಮದಲ್ಲಿ 7 ಜನರ ಸಾವು ಜನರನ್ನು ತೀವ್ರ ಆತಂಕಕ್ಕೆ ನೂಕಿದೆ.

Tap to resize

Latest Videos

ಆತ ಆತ್ಮಹತ್ಯೆ ಮಾಡಿಕೊಂಡಿರೋ ಕಾರಣ ದೇವರಿಗೆ ಗೊತ್ತು..' ಅಳಿಯ ಪ್ರತಾಪ್ ನೆನೆದು ಕಣ್ಣೀರಾದ ಬಿಸಿ ಪಾಟೀಲ್

ಕುಂದುವಾಡ ಗ್ರಾಮದ ಶಾಂತಮ್ಮ (65 ವರ್ಷ), ಮಾರಜ್ಜಿ (60) ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಭೀಮಪ್ಪ(60), ಸಂತೋಷ್ (32) ವಾಂತಿ- ಭೇದಿಯಿಂದ ನಿಧನರಾಗಿದ್ದಾರೆ. ಈರಮ್ಮ (65) ಹಾಗೂ ಸುನಿಲ್ (25) ಜ್ವರದಿಂದಾಗಿ ಹಾಗೂ 3 ತಿಂಗಳ ಹಿಂದಷ್ಟೇ ಜನಿಸಿದ್ದ ನವಜಾತ ಗಂಡು ಶಿಶು ಉಸಿರಾಟ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದೆ. ಹೊಸ ಕುಂದುವಾಡದಲ್ಲಿ ವಯೋ ಸಹಜವಾಗಿ ಇಬ್ಬರು
ತಮ್ಮ ಊರಿನಲ್ಲಿ ಅಂತ್ಯಕ್ರಿಯೆಗೂ ಸ್ಮಶಾನ ಇಲ್ಲ. ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಹಿಂದಿನಿಂದಲೂ ಹೋರಾಟ ನಡೆಸಿ, ಮನವಿ ಮಾಡಿದ್ದರೂ ಸಂಬಂಧಿಸಿದ ಇಲಾಖೆ ಯಾವುದೇ ರೀತಿ ಸ್ಪಂದಿಸಿಲ್ಲ. ಈಗ ಒಂದೇ ದಿನ 7 ಸಾವು ಸಂಭವಿಸಿದ್ದು, ಎಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಸಂಬಂಧ ಪ್ರತಿಭಟನೆ ಕೂಡ ಮಾಡಿದ್ದಾರೆ.

click me!