ಶಿವಮೊಗ್ಗ: ಚೆನ್ನಿ ಅಲ್ಲ, ಈಶ್ವರಪ್ಪರೇ ಶಾಸಕ ಹಾಗೆನ್ನುತ್ತಿವೆ ವಾರ್ಡ್‌ ಬೋರ್ಡ್..!

By Kannadaprabha News  |  First Published Oct 9, 2023, 4:00 AM IST

ವಿಧಾನಸಭೆ ಚುನಾವಣೆ ‌ಮುಗಿದು ಐದು ತಿಂಗಳುಗಳೇ ಕಳೆದಿವೆ. ಆದರೆ, ಈ ಬೋರ್ಡ್‌ಗಳಲ್ಲಿರುವ ಮಾಹಿತಿಯಂತೆ ರ್ಈ ಹಿಂದೆ ಶಾಸಕರಾಗಿದ್ದ ಕೆ.ಎಸ್‌.ಈಶ್ವರಪ್ಪ ಇನ್ನೂ ಮಾಜಿ ಆಗಿಯೇ ಇಲ್ಲ! ಶಿವಮೊಗ್ಗ ನಗರ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಎಸ್‌.ಎನ್‌.ಚನ್ನಬಸಪ್ಪ ಚುನಾಯಿತರಾಗಿ ಬಂದಿದ್ದಾರೆ. ಆದರೆ, ಚನ್ನಬಸಪ್ಪ ಅವರ ಹೆಸರು ಇರಬೇಕಾದ ಜಾಗದಲ್ಲಿ ಇನ್ನೂ ಕೆ.ಎಸ್‌.ಈಶ್ವರಪ್ಪ ಅವರ ಹೆಸರೇ ವಿರಾಜಮಾನವಾಗಿದೆ. 


ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ(ಅ.09): ಶಿವಮೊಗ್ಗ ನಗರ ಕ್ಷೇತ್ರದ ಹಾಲಿ ಶಾಸಕರು ಯಾರು? ಕೆ.ಎಸ್‌.ಈರಪ್ಪನೋ, ಚನ್ನಬಸಪ್ಪನೋ..?! ಪಾಲಿಕೆ ವ್ಯಾಪ್ತಿಯ ಬೀದಿ, ಬಡಾವಣೆಗಳಲ್ಲಿ ಶಾಸಕರ ಹೆಸರು ಸೂಚಿಸುವ ವಾರ್ಡ್‌ ಬೋರ್ಡ್‌ ನೋಡಿದವರಿಗೆಲ್ಲಾ ಇಂಥ ದೊಡ್ಡ ಗೊಂದಲ ಉಂಟಾಗುತ್ತಿದೆ. ಏಕೆಂದರೆ, ಈ ವಾರ್ಡ್‌ ಬೋರ್ಡ್‌ಗಳಲ್ಲಿರುವ ಶಾಸಕರ ಹೆಸರಿಗೂ, ಹಾಲಿ ಶಾಸಕರಿಗೂ ಯಾವುದೇ ಸಂಬಂಧವೇ ಇಲ್ಲ ಎಂಬ ವಾದಕ್ಕೆ ಇವು ಮೂಕಸಾಕ್ಷಿಯಾಗಿ ನಿಂತಿವೆ.

Tap to resize

Latest Videos

ವಿಧಾನಸಭೆ ಚುನಾವಣೆ ‌ಮುಗಿದು ಐದು ತಿಂಗಳುಗಳೇ ಕಳೆದಿವೆ. ಆದರೆ, ಈ ಬೋರ್ಡ್‌ಗಳಲ್ಲಿರುವ ಮಾಹಿತಿಯಂತೆ ರ್ಈ ಹಿಂದೆ ಶಾಸಕರಾಗಿದ್ದ ಕೆ.ಎಸ್‌.ಈಶ್ವರಪ್ಪ ಇನ್ನೂ ಮಾಜಿ ಆಗಿಯೇ ಇಲ್ಲ! ಶಿವಮೊಗ್ಗ ನಗರ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಎಸ್‌.ಎನ್‌.ಚನ್ನಬಸಪ್ಪ ಚುನಾಯಿತರಾಗಿ ಬಂದಿದ್ದಾರೆ. ಆದರೆ, ಚನ್ನಬಸಪ್ಪ ಅವರ ಹೆಸರು ಇರಬೇಕಾದ ಜಾಗದಲ್ಲಿ ಇನ್ನೂ ಕೆ.ಎಸ್‌.ಈಶ್ವರಪ್ಪ ಅವರ ಹೆಸರೇ ವಿರಾಜಮಾನವಾಗಿದೆ. ಮಾಜಿ ಶಾಸಕರ ಹೆಸರಿನ ನಾಮಫಲಕಗಳಲ್ಲಿನ ಮಾಹಿತಿಯೇ ಇನ್ನೂ ಬದಲಾಗಿಲ್ಲ. ಬೀದಿ, ಬಡಾವಣೆಗಳಿಗೆ ಅಳವಡಿಸಿರುವ ಈ ನಾಮಫಲಕಗಳ ನೋಡಿದ ಮತದಾರರು, ಈ ಮತಕ್ಷೇತ್ರದ ಶಾಸಕರು ಯಾರು ಎಂದು ವ್ಯಂಗ್ಯ ಮಾಡಿ, ನಗುವಂತಾಗಿದೆ.

ಮುಸ್ಲಿಂ ಮತಗಳನ್ನು ಪಡೆಯಲು ಸರ್ಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು: ಪುತ್ತಿಲ ಕಿಡಿ

ನಗರದೆಲ್ಲೆಡೆ ಪ್ರತಿಯೊಂದು ಬಡಾವಣೆಗಳಲ್ಲಿರುವ ವಾರ್ಡ್‌ ಬೋರ್ಡ್‌ಗಳಲ್ಲಿ ಮಾಜಿ ಶಾಸಕರ ಹೆಸರೇ ರಾರಾಜಿಸುತ್ತಿದೆ. ಪರಿಣಾಮ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನೆ ಆಗುತ್ತಿದೆ. 10 ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಶಿವಮೊಗ್ಗ ಪಾಲಿಕೆಯ ಎಲ್ಲ ವಾರ್ಡ್‌ಗೂ ನಾಮಫಲಕಗಳನ್ನು ಹಾಕಲಾಗಿತ್ತು. ಹೊರಗಿನಿಂದ ಬರುವವರಿಗೆ, ಸಾರ್ವಜನಿಕರಿಗೆ ವಾರ್ಡ್‌, ಬಡಾವಣೆ, ರಸ್ತೆ, ತಿರುವು ಮಾಹಿತಿ ಒದಗಿಸುವಂತಹ ನಾಮಫಲಕದ ಅವಶ್ಯವಿತ್ತು. ಹೀಗಾಗಿ ಎಲ್ಲ ವಾರ್ಡ್‌ ಹಾಗೂ ಮುಖ್ಯ ತಿರುವುಗಳಲ್ಲಿ ಪಾಲಿಕೆಯಿಂದ ನಾಮಫಲಗಳನ್ನು ಹಾಕಲಾಗಿದೆ. ಆದರೆ, ಈ ಬೀದಿಗಳ ನಾಮಫಲಕಗಳೇ ಜನರಿಗೆ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸುತ್ತಿವೆ.

ಚುನಾಯಿತ ಪ್ರತಿನಿಧಿಗಳ ಹೆಸರುಗಳೇ ಬೇಡ:

ನಾಮಫಲಕದಲ್ಲಿ ವಾರ್ಡ್‌ ಸಂಖ್ಯೆ, ಹೆಸರು, ಬಡಾವಣೆ ಹೆಸರು, ರಸ್ತೆ, ತಿರುವುಗಳನ್ನು ನಮೂದಿಸಿದ್ದರೆ ಸಾಕಿತ್ತು. ಆದರೆ, ಅವುಗಳಿಗಿಂತಲೂ ಮುಖ್ಯವಾಗಿ ಶಾಸಕರು ಮತ್ತು ಪಾಲಿಕೆ ಸದಸ್ಯರ ಹೆಸರನ್ನೂ ನಮೂದಿಸಲಾಯಿತು. ಪಾಲಿಕೆ ಸದಸ್ಯರು ಮತ್ತು ಶಾಸಕರು ಬದಲಾದಂತೆಲ್ಲ ನಾಮಫಲಕಗಳನ್ನೂ ಬದಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾಮಫಲಕಗಳು ಹೇಗಿವೆ ಎಂದರೆ, ಬಡಾವಣೆ ಮಾಹಿತಿಗಿಂತ ಚುನಾಯಿತ ಸದಸ್ಯರ ಹೆಸರೇ ಪ್ರಮುಖವಾಗಿ ಉಳಿದವು ಗೌಣವಾಗಿವೆ. ಈಗ ಶಾಸಕರು ಬದಲಾಗಿರುವುದರಿಂದ ನಾಮಫಲಕಗಳ ಬದಲಾವಣೆಯೂ ಅನಿವಾರ್ಯವಾಗಿದೆ.

ಪ್ರತಿಯೊಂದು ರಸ್ತೆಗಳಲ್ಲಿ ನಾಮಫಲಕಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ಕೋಟ್ಯಂತರ ರು. ವೆಚ್ಚ ಮಾಡಿತ್ತು. ಹೊಸ ಆಡಳಿತ ಬಂದ ಬಳಿಕ ನಾಮಫಲಕಗಳಲ್ಲಿನ ಸ್ಟಿಕ್ಕರ್‌ಗಳನ್ನು ಬದಲಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಮತ್ತೆ ಲಕ್ಷಾಂತರ ರು. ವೆಚ್ಚ ಮಾಡಲು ಪಾಲಿಕೆ ಸಿದ್ಧತೆ ನಡೆಸಿದೆ. ಚುನಾಯಿತ ಪ್ರತಿನಿಧಿಗಳ ಹೆಸರು ನಮೂದಿಸಿದಲ್ಲಿ ಪ್ರತಿ ಬಾರಿ ಬದಲಿಸಬೇಕಾಗುತ್ತದೆ. ಅದಕ್ಕಾಗಿ ಈ ಬಾರಿ ಬಡಾವಣೆಗಳ ಮಾಹಿತಿ ಇದ್ದರೆ ಸಾಕು. ಚುನಾಯಿತ ಪ್ರತಿನಿಧಿಗಳ ಹೆಸರು ಬೇಡ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಪಾಲಿಕೆ ಸದಸ್ಯ ನಾಗರಾಜ್‌ ಕಂಕಾರಿ ಹೇಳುವಂತೆ, ಹಿಂದಿನ ಸಂಪ್ರದಾಯದಂತೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಎಲ್ಲ ವಾರ್ಡ್‌ಗಳಲ್ಲೂ ಆಯಾ ವಾರ್ಡ್‌ಗಳ ಹೆಸರು, ತಿರುವಿನ ಜತೆ ವಾರ್ಡ್‌ ಸದಸ್ಯರು ಹಾಗೂ ಶಾಸಕರ ಹೆಸರು ನಮೂದಿಸಲಾಗಿದೆ. ಈಗ ವಾರ್ಡ್‌ ಸದಸ್ಯರು ಬದಲಾಗಿದ್ದಾರೆ. ಹೀಗಾಗಿ ಕೂಡಲೇ ಮಾಜಿ ಸದಸ್ಯರ ಹೆಸರು ತೆಗೆದು, ಹಾಲಿ ಸದಸ್ಯರ ಹೆಸರು ನಮೂದಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

ಡಿಕೆಶಿಗೆ ಉಪಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ?, ಇಂತಹ ಡಿಸಿಎಂ ನಮಗೆ ಬೇಕಾ?: ಈಶ್ವರಪ್ಪ ಗುಡುಗು

ಆದರೆ, ಈಗ ಕ್ಷೇತ್ರದ ಶಾಸಕರು ಮಾತ್ರ ಬದಲಾಗಿದ್ದಾರೆ. ಇನ್ನೂ ಪಾಲಿಕೆಗೆ ಚುನಾವಣೆ ನಡೆದು ಹೊಸ ಸದಸ್ಯರು ನೇಮಕವಾದ ಬಳಿಕ ಆಯಾ ವಾರ್ಡ್‌ ಸದಸ್ಯರು ನಾಮಫಲಕವನ್ನು ಬದಲಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಈವರೆಗೆ ಚುನಾವಣೆಯೇ ಘೋಷಣೆ ಆಗಿಲ್ಲ. ಪದೇಪದೆ ನಾಮಫಲಕ ಬದಲಾವಣೆ ಮಾಡುವುದರಿಂದ ಜನರ ತೆರಿಗೆ ಹಣವೇ ಪೋಲಾಗುತ್ತದೆ. ಹೀಗಾಗಿ ಚುನಾವಣೆ ನಡೆದು, ಹೊಸ ಸದಸ್ಯರ ಆಯ್ಕೆ ಆಗುವವರೆಗೂ ಈ ನಾಮಫಲಕಗಳು ಹೀಗೇ ಇರಲಿವೆ ಎನ್ನುತ್ತಾರೆ.

ಶಿವಮೊಗ್ಗ ನಗರ ಕ್ಷೇತ್ರದ ಶಾಸಕರು ಬದಲಾಗಿ ಕೆಲತಿಂಗಳು ಕಳೆದಿದೆ. ಈಗಾಗಲೇ ನಾಮಫಕಗಳು ಬದಲಿಸಬೇಕಿತ್ತು. ಆದರೆ, ಪಾಲಿಕೆ ಚುನಾವಣೆ ಬಳಿಕ ಒಟ್ಟಿಗೆ ನಾಮಫಲಕ ಬದಲಾವಣೆ ಮಾಡಿದರೆ ಸೂಕ್ತ ಎಂದು ತೀರ್ಮಾನಿಸಲಾಗಿದೆ. ಹೀಗಾಗಿ ನಾಮಫಕಗಳನ್ನು ಇನ್ನೂ ಬದಲಿಸಿಲ್ಲ ಎಂದು ಮಹಾನಗರ ಪಾಲಿಕೆ ಮೇಯರ್‌, ಮೇಯರ್‌ ಎಸ್‌.ಶಿವಕುಮಾರ್‌ ತಿಳಿಸಿದ್ದಾರೆ. 

click me!