ಮೋದಿ ನಿರ್ಧಾರ ಮೆಚ್ಚಿದ್ದ ಭಗವಾನ್‌ರಿಂದ ರಾಮಮಂದಿರ ನಿಧಿ ಸಂಗ್ರಹಕ್ಕೆ ಬೆಂಬಲ

Kannadaprabha News   | Asianet News
Published : Jan 17, 2021, 11:42 AM IST
ಮೋದಿ ನಿರ್ಧಾರ ಮೆಚ್ಚಿದ್ದ ಭಗವಾನ್‌ರಿಂದ ರಾಮಮಂದಿರ ನಿಧಿ ಸಂಗ್ರಹಕ್ಕೆ ಬೆಂಬಲ

ಸಾರಾಂಶ

ರಾಮಂದಿರ ನಿಧಿ ಸಂಗ್ರಹಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ವಿವಿಧ ಸಂಘಟನೆಗಳು ವ್ಯಕ್ತಿಗಳು ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದೀಗ ಹಲವು ಬಾರಿ ವಿವಾದಿತ ಹೇಳಿಕೆ ನೀಡಿದ್ದ ಭಗವಾನ್ ಅವರು ನಿಧಿ ಸಂಘ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಮೈಸೂರು (ಜ.17): ಶ್ರೀರಾಮನ ಕುರಿತಾಗಿ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ವಿಚಾರವಾದಿ ಪ್ರೊ.ಕೆ.ಎಸ್‌. ಭಗವಾನ್‌ ಅವರು ಈಗ ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಬೆಂಬಲಿಸಿ ಆಶ್ಚರ್ಯವನ್ನುಂಟು ಮಾಡಿದ್ದಾರೆ.

 ಕುವೆಂಪುನಗರದ ಭಗವಾನ್‌ ಅವರ ನಿವಾಸಕ್ಕೆ ಆರ್‌ಎಸ್‌ಎಸ್‌ ಕಾರ್ಯಕರ್ತರು ನಿಧಿ ಸಮರ್ಪಣಾ ಅಭಿಯಾನದ ಮಾಹಿತಿ ಪುಸ್ತಕ ನೀಡಿದರು. ಆರ್‌ಎಸ್‌ಎಸ್‌ ಕಾರ್ಯಕರ್ತರ ಜೊತೆ ಸೌಜನ್ಯದಿಂದ ವರ್ತಿಸಿದ ಕೆ.ಎಸ್‌. ಭಗವಾನ್‌ ಅವರು ನಿಧಿ ಸಮರ್ಪಣಾ ಅಭಿಯಾನ ಮುಂದುವರಿಯಲಿ, ಆದಷ್ಟುಬೇಗ ಅಭಿಯಾನ ಮುಗಿಸಿ ಎಂದು ಸಲಹೆ ನೀಡಿದ್ದಾರೆ. 

ರಾಮಮಂದಿರ ನಿಧಿ ಸಂಗ್ರಹಕ್ಕೆ ಉದ್ಯಮಿಗಳ ಸಮಾವೇಶ: ಪೇಜಾವರ ಶ್ರೀ ಸಾರಥ್ಯ ...

ಶ್ರೀರಾಮನ ಅಸ್ತಿತ್ವದ ಬಗ್ಗೆ ಪದೇಪದೇ ಟೀಕಿಸಿ ವಿವಾದ ಸೃಷ್ಟಿಸಿದ್ದ ಪ್ರೋ ಕೆ.ಎಸ್‌ ಭಗವಾನ್‌ ಸಂಘ ಪರಿವಾರದ ಅಭಿಯಾನಕ್ಕೆ ನೈತಿಕ ಬೆಂಬಲ ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ. ಕಾಶ್ಮೀರದದಲ್ಲಿನ 370ನೇ ವಿಧಿ ರದ್ದು ಮಾಡಿದ್ದ ಪ್ರಧಾನಿ ಮೋದಿಯನ್ನು ಕೆ.ಎಸ್‌. ಭಗವಾನ್‌ ಬೆಂಬಲಿಸಿದ್ದರು.

PREV
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ