ಜೆಡಿಎಸ್ ಶಾಸಕ ಸಾ ರಾ ಮಹೇಶ್ ನೇತೃತ್ವದಲ್ಲಿ ನಡೆಯಿತು ಬಿಗ್ ಆಪರೇಷನ್

Kannadaprabha News   | Asianet News
Published : Jan 17, 2021, 11:21 AM IST
ಜೆಡಿಎಸ್ ಶಾಸಕ ಸಾ ರಾ ಮಹೇಶ್ ನೇತೃತ್ವದಲ್ಲಿ ನಡೆಯಿತು ಬಿಗ್ ಆಪರೇಷನ್

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಜೋರಾಗಿದೆ. ಇದರ ಎನ್ನಲ್ಲೇ ಪಕ್ಷಾಂತರಗಳು ಆಗುತ್ತಿವೆ. ವಿವಿಧ ರೀತಿಯ ರಾಜಕೀಯದ ನಡುವೆ ಜೆಡಿಎಸ್ ಶಾಸಕ ಸಾ ರಾ ಮಹೇಶ್ ನೇತೃತ್ವದಲ್ಲಿ ಬಿಗ್ ಆಪರೇಷನ್ ನಡೆದಿದೆ. 

ಭೇರ್ಯ (ಜ.17):  ನಾನು ರಾಜಕಾರಣ ಬಿಡುವುದರೊಳಗೆ ಕೆ.ಆರ್‌. ನಗರ ತಾಲೂಕಿನ ಜಾತಿ ರಾಜಕಾರಣಕ್ಕೆ ಅಂತ್ಯ ಹಾಡುವುದಾಗಿ ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಸಾಲಿಗ್ರಾಮ ತಾಲೂಕು ಕುಲುಮೆ ಹೊಸೂರು ಗ್ರಾಮದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಶಾಸಕ ಸಾ.ರಾ. ಮಹೇಶ್‌ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕುಲುಮೆ ಹೊಸೂರು ಗ್ರಾಮದ ಮುಖ್ಯ ರಸ್ತೆ ಅಭಿವೃದ್ದಿ, ಶಾಲೆಯ ನಿವೇಶನ ಕೊಡಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ, ನಾಯಕ್‌ ಜನಾಂಗದ ಬೀದಿಗೆ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ, ಮಾರಮ್ಮ ದೇವಸ್ಥಾನ ಅಭಿವೃದ್ಧಿ, ಸುಸಜ್ಜಿತ ಅಂಗನವಾಡಿ ಕಟ್ಟಡ, ನಿರಂತರ ವಿದ್ಯುತ್‌, ಶುದ್ಧ ಕುಡಿಯುವ ನೀರು ಸರಬರಾಜು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪ್ರಭಾವಿ ಮುಖಂಡ .

ಕಾಳಮ್ಮನಕೊಪ್ಪಲು ಗ್ರಾಮದ ಜೆಡಿಎಸ್‌ ಮುಖಂಡ ಬಲರಾಮ್‌ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್‌ ತೊರೆದು ಶಾಸಕ ಸಾ.ರಾ. ಮಹೇಶ್‌ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಸಾಲಿಗ್ರಾಮ ತಾಲೂಕು ಜೆಡಿಎಸ್‌ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮು, ತಾಪಂ ಮಾಜಿ ಅಧ್ಯಕ್ಷ ರವಿ, ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮ, ಪ್ರಸನ್ನ, ನಟರಾಜ, ಜಿಲ್ಲಾ ಸಹಕಾರ ಯೂನಿಯನ್‌ ಬ್ಯಾಂಕ್‌ ನಿರ್ದೇಶಕ ರಾಮೇಗೌಡ, ರಮೇಶ್‌, ನಿಂಗಪ್ಲ, ಪುರುಷೋತ್ತಮ, ತುಳಿಸಿರಾಮ, ಹರೀಶ್‌ ಇದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC