ಕ್ರಿಸ್ಮಸ್, ಹೊಸ ವರ್ಷ ಎಂದು ಫ್ಯಾಮಿಲಿ ಟ್ರಿಪ್ ಹೊರಟವರಿಗೆ ಮಂಡ್ಯದ ಕೆಆರ್ಎಸ್ನಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ. ಎಂಟ್ರಿ ಫೀಸ್ ಸೇರಿ ಪಾರ್ಕಿಂಗ್ ಚಾರ್ಜ್‌ನಲ್ಲೂ ಭಾರೀ ಬೆಲೆ ಏರಿಕೆ ಮಾಡಲಾಗಿದೆ.
ಮಂಡ್ಯ(ಜ.05): ಕ್ರಿಸ್ಮಸ್, ಹೊಸ ವರ್ಷ ಎಂದು ಫ್ಯಾಮಿಲಿ ಟ್ರಿಪ್ ಹೊರಟವರಿಗೆ ಮಂಡ್ಯದ ಕೆಆರ್ಎಸ್ನಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ. ಎಂಟ್ರಿ ಫೀಸ್ ಸೇರಿ ಪಾರ್ಕಿಂಗ್ ಚಾರ್ಜ್‌ನಲ್ಲೂ ಭಾರೀ ಬೆಲೆ ಏರಿಕೆ ಮಾಡಲಾಗಿದೆ.
ಕೆಆರ್‌ಎಸ್ ನೋಡಲು ಬರುವ ಪ್ರವಾಸಿಗರಿಗೆ ದರ ಏರಿಕೆ ಬರೆ ಬಿದ್ದಿದೆ. ವಾಹನಗಳ ಪಾರ್ಕಿಂಗ್, ಟೋಲ್ ಹಾಗೂ ಬೃಂದಾವನ ಪ್ರವೇಶ ಶುಲ್ಕಗಳಲ್ಲಿ ಬಾರೀ ಏರಿಕೆಯಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರವಾಸಿಗರಿಗೆ ಎಂಟ್ರಿ ಫೀಸ್ ಸೇರಿ ಇತರ ಚಾರ್ಜ್‌ಗಳನ್ನು ಹೆಚ್ಚಿಸಿದ್ದಾರೆ.
ರೊಮ್ಯಾನ್ಸ್ ಮಾಡೋಕೆ ಸ್ವಿಟ್ಜರ್‌ಲ್ಯಾಂಡೇ ಬೇಕಿಲ್ಲ ಭಾರತದ ಈ ಸ್ಥಳಕ್ಕೆ ಹೋದ್ರೂ ಸಾಕು!
ಈ ಹಿಂದೆ ಬೃಂದಾವನ ಪ್ರವೇಶಕ್ಕೆ ಒಬ್ಬ ವ್ಯಕ್ತಿಗೆ 20 ರೂಪಾಯಿ ಇತ್ತು. ಈಗ 50 ರೂಪಾಯಿಗೆ ಏರಿಸಲಾಗಿದೆ. ಟೋಲ್‌ನಲ್ಲೂ ಭಾರೀ ಏರಿಕೆ ಮಾಡಲಾಗಿದೆ. ಈ ಹಿಂದೆ ಎಲ್ಲಾ ಬಗೆಯ ಕಾರ್‌ಗಳಿಗೆ 30 ರೂ ಇತ್ತು ಈಗ 50 ರೂಪಾಯಿಗೆ ಏರಿಸಲಾಗಿದೆ.
ಮಿನಿ ಬಸ್ಸು 70, ಬಸ್ಸಿಗೆ 100 ರೂ ಟೋಲ್ ಕಟ್ಟಬೇಕು. ಟೋಲ್‌ನಷ್ಟೇ ಶುಲ್ಕವನ್ನ ಬೃಂದಾವನ ಬಳಿಯ ಪಾರ್ಕಿಂಗ್‌ನಲ್ಲೂ ವಾಹನ ನಿಲುಗಡೆಗೆ ಪಾವತಿಸಬೇಕು. ಒಟ್ಟಿಗೆ ಮೂರು ಶುಲ್ಕಗಳ ಹೆಚ್ಚಳದಿಂದ ಪ್ರವಾಸಿಗರು ಹೈರಾಣಾಗಿದ್ದಾರೆ.
ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!