* ನೀರಿನ ಪ್ರಮಾಣ ತೀವ್ರ ಕಡಿಮೆ
* 51 ಗ್ರಾಮಗಳಿಂದ 10046 ಕುಟುಂಬಗಳನ್ನು ಸ್ಥಳಾಂತರ
* ತಹಬದಿಗೆ ಬರುತ್ತಿರುವ ಪ್ರವಾಹ
ಬೆಳಗಾವಿ(ಆ.01): ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಬಹುತೇಕ ಕ್ಷೀಣಿಸಿದ್ದು, ರಾಜ್ಯದ ಕೃಷ್ಣಾ ನದಿ ಕೊಳ್ಳ ಪ್ರದೇಶದಲ್ಲಿ ಉಲ್ಬಣವಾಗಿದ್ದತಹಬದಿಗೆ ಬರುತ್ತಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಅಥಣಿ, ಕಾಗವಾಡ ತಾಲೂಕು ಸೇರಿದಂತೆ ವ್ಯಾಪ್ತಿಗೆ ಒಳಪಟ್ಟಿರುವ ಒಟ್ಟು 20 ಸೇತುವೆಗಳು ಈಗಲೂ ಮುಳುಗಡೆ ಸ್ಥಿತಿಯಲ್ಲೇ ಮುಂದುವರಿದಿದ್ದರೂ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ.
ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕುಗಳಲ್ಲಿಯೂ ಕೃಷ್ಣಾ ನದಿಯ ಪ್ರವಾಹ ಇಳಿದಿದೆ. ಹಿಪ್ಪರಗಿ ಜಲಾಶಯಕ್ಕೆ 3.05 ಲಕ್ಷ ಕ್ಯುಸೆಕ್ ನೀರು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ಅಥಣಿ ಭಾಗದಲ್ಲಿಯೂ ಪ್ರವಾಹ ಇಳಿಕೆಯಾಗಿದೆ. ಏತನ್ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದ ಬಾಧಿತವಾದ 51 ಗ್ರಾಮಗಳಿಂದ 10046 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು 38004 ಜನತೆ ಸ್ಥಳಾಂತರಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.