ಜೆಡಿಎಸ್ ಸೇರಲ್ಲ ಎಂದ ಮಾಜಿ ಸಚಿವ : ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ

By Kannadaprabha NewsFirst Published Jul 31, 2021, 3:59 PM IST
Highlights
  • ನಾನು ಯಾವುದೇ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಅಥವಾ ಪಕ್ಷೇತರನಾಗಿ ಎದುರಿಸುತ್ತೇನೆ
  • ಎಂದಿಗೂ ಜೆಡಿಎಸ್ ಸೇರ್ಪಡೆಯಾಗುವ ವಿಚಾರ ಮಾತ್ರ ನನ್ನಲ್ಲಿ ಇಲ್ಲ - ವರ್ತೂರ್

ಕೋಲಾರ (ಜು.31): ನಾನು ಯಾವುದೇ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಅಥವಾ ಪಕ್ಷೇತರನಾಗಿ ಎದುರಿಸುತ್ತೇನೆ ಹೊರತು  ಬೇರೆ ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ. 

ಕೋಲಾರದಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಪ್ರಕಾಶ್  ಪಕ್ಷೇತರ ಎಂದು ನಿರ್ಧರಿಸಿಲ್ಲ. ಬೆಗ್ಲಿ ಸೂರ್ಯ ಪ್ರಕಾಶ್ ಮತ್ತು ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೃಷ್ಣೇಗೌಡ ಅವರುಗಳು ನಮ್ಮ ವಣವನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲು ಈಗಾಗಲೇ ಐದಾರು ಭಾರಿ ಮಾಜಿ ಕೇಂದ್ರ ಸಚಿವರಾದ ಕೆ.ಎಚ್ ಮುನಿಯಪ್ಪ ಅವರ ಬಳಿ ಮಾತುಕತೆ ನಡೆಸಿದ್ದು, ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು.

ನಾನು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆಂದ ಮುಖಂಡ

ಇಷ್ಟು ದಿನಗಳ ಕಾಲ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮತಿ ಬೇಕೆಂದು ಹೇಳುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಅವರು ಈಗಾಗಲೇ ಶೇ.95ರಷ್ಟು  ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ  ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಮುನಿಯಪ್ಪ ಸಮ್ಮತಿಸುತ್ತಿಲ್ಲ ಎಂದರು. 

ಶಾಸಕ ರಮೇಶ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಾಗಿದೆ. ಮತ್ತೆ ಮುನಿಯಪ್ಪರನ್ನು ಇನ್ನು ಎರಡು  ಮೂರು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸೇರ್ಪಡೆಯಾಗುತ್ತೇನೆ ಎಂದರು. 

ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಇರುಷ್ಟು ನಂಬಿಕೆ ಯಾವ ಪಕ್ಷದ ಮೇಲೂ ಇಲ್ಲ. ಜೆಡಿಎಸ್ ಸೇರುತ್ತೇನೆ ಎಂಬ ವಿಚಾರ ಸತ್ಯಕ್ಕೆ ದೂರವಾದುದು ಎಂದರು. 

click me!