ಯಾದಗಿರಿ: ಕೃಷ್ಣ ಎಡದಂಡೆ ಕಾಲುವೆ ಎಸ್ಕೇಪ್‌ ಗೇಟ್‌ ಕುಸಿತ

By Kannadaprabha NewsFirst Published Jan 17, 2023, 9:30 PM IST
Highlights

ಈಗಾಗಲೇ ಗೇಟ್‌ ಅವಾಂತರದಿಂದ ಕಾಲುವೆಗೆ ಅರ್ಧದಷ್ಟು ನೀರು ಬಂದ್‌ ಮಾಡಲಾಗಿದೆ. ಇದರಿಂದಾಗಿ ಕೊನೆಭಾಗದ ರೈತರಿಗೆ ನೀರಿನ ಚಿಂತೆ ಕಾಡಲಿದ್ದು, ಆತಂಕವೂ ಎದುರಾಗಿದೆ. 

ಹುಣಸಗಿ(ಜ.17): ತಾಲೂಕಿನ ಇಸ್ಲಾಂಪೂರ ಹತ್ತಿರದಲ್ಲಿರುವ 52 ಕಿಮೀ ಎಸ್ಕೇಪ್‌ ಗೇಟ್‌ ಭಾನುವಾರ ಬೆಳಗ್ಗೆ ತಾಂತ್ರಿಕ ದೋಷದಿಂದ ಗೇಟ್‌ ಕಿತ್ತಿದ್ದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಂತಕ ಶುರುವಾಗಿದೆ. ಈಗಾಗಲೇ ಅಚ್ಚುಕಟ್ಟು ಪ್ರದೇಶದ ರೈತರು ನಾಟಿ ಮಾಡುವ ಚಟುವಟಿಕೆ ನಡೆಸಿದ್ದಾರೆ. ಈಗಾಗಲೇ ಗೇಟ್‌ ಅವಾಂತರದಿಂದ ಕಾಲುವೆಗೆ ಅರ್ಧದಷ್ಟು ನೀರು ಬಂದ್‌ ಮಾಡಲಾಗಿದೆ. ಇದರಿಂದಾಗಿ ಕೊನೆಭಾಗದ ರೈತರಿಗೆ ನೀರಿನ ಚಿಂತೆ ಕಾಡಲಿದ್ದು, ಆತಂಕವೂ ಎದುರಾಗಿದೆ. ನಾರಾಯಣಪುರ ಎಡದಂಡೆ ಮುಖ್ಯ ನಾಲೆಯು 10 ಸಾವಿರ ಕ್ಯುಸೆಕ್‌ ನೀರು ಹರಿಯುವ ಸಾಮರ್ಥ್ಯ ಹೊಂದಿದ್ದು, ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ಇಂಡಿ, ಸಿಂದಗಿ, ಜೇವರ್ಗಿ, ಶಹಾಪುರ, ಮುಡಬೂಳ, ನಾಗಠಾಣ, ಚಡಚಣ, ವಿಜಯಪುರ ತಾಲೂಕುಗಳ ನೀರಾವರಿ ಒದಗಿಸಲಿದೆ.

ಈಗಾಗಲೇ ಕಾಲುವೆಗೆ ನೀರು ಹರಿಸಿ ಕೆಲವೇ ದಿನಗಳಲ್ಲಿ ಅಂದರೆ ಸಲಹಾ ಸಮಿತಿಯಂತೆ ಬಂದ್‌ ಮಾಡುವುದು ಮೂರು ದಿನಗಳ ಒಳಗಾಗಿಯೇ ಎಸ್ಕೇಪ್‌ ಗೇಟ್‌ ಅರ್ಧ ಕಿತ್ತಿ ಕೆಳಗಡೆ ಕುಸಿದಿದೆ. ಹೀಗಾಗಿ ಹಳ್ಳಿಕ್ಕೆ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ರೈತರ ಹಿತದೃಷ್ಟಿಯಿಂದ ಅ​ಧಿಕಾರಿಗಳು ಗೇಟ್‌ ರಿಪೇರಿಗೊಳಿಸಿ ಪದೇ ಪದೇ ಸಮಸ್ಯೆ ಆಗದಂತೆ ಸುರಕ್ಷತೆ ಕಾಯ್ದುಕೊಳ್ಳುವ ಜವಾಬ್ದಾರಿ ಹೆಚ್ಚಾಗಿದೆ. ಅಲ್ಲದೆ ನೀರು ಪೂರ್ಣ ಬಂದ್‌ ಮಾಡಿದರೂ ರೈತರು ಗಂಭೀರ ಸಮಸ್ಯೆಕ್ಕೀಡಾಗಲಿದ್ದಾರೆ ಎಂಬುದು ರೈತರ ಮಾತು ಕೇಳಿ ಬರುತ್ತಿವೆ.

ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

ರಾಜಾ ಸಂತೋಷ ನಾಯಕ ಒತ್ತಾಯ:

ಎಡದಂಡೆ ಕಾಲುವೆ ಎಸ್ಕೇಪ್‌ಗೇಟ್‌ ಕುಸಿತ ಸ್ಥಳಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ಸಂತೋಷನಾಯಕ ಭೇಟಿ ನೀಡಿ ವೀಕ್ಷಿಸಿದರು. ನಂತರ ಮಾತನಾಡಿ, ಕಾಲುವೆಗೆ ನೀರು ಹರಿಸಿ ವಾರವೇ ಆಗಿಲ್ಲ, ಆಗಲೇ ಎಸ್ಕೇಪ್‌ ಗೇಟ್‌ ಕಿತ್ತಿದೆ. ಇದರಿಂದ ರೈತರು ಸಮಸ್ಯೆಪಡಬೇಕಾಗಿದೆ. ಪ್ರತಿನಿತ್ಯವೂ ಅ​ಕಾರಿಗಳು ಕಾಲುವೆ ವಸ್ತುಸ್ಥಿತಿ ಹೇಗಿದೆ ಎಂಬುದು ಸರ್ವಿಸ್‌ ರಸ್ತೆಗೆ ಸಂಚರಿಸುವುದಿಲ್ಲ. ಇದರಿಂದಾಗಿ ಎಲ್ಲವೂ ಈಗಾಗುತ್ತಿವೆ ಎಂದು ಆಗ್ರಹಿಸಿದ ಅವರು ಕೂಡಲೇ ದುರಸ್ತಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅ​ಧಿಕಾರಿಗಳಿಗೆ ಒತ್ತಾಯಿಸಿದರು.

ರೈತರು ಹಿಂಗಾರು ಭತ್ತ ನಾಟಿ ಮಾಡುತ್ತಿದ್ದಾರೆ. ನಾಟಿ ಮಾಡುವ ಕಾರ‍್ಯ ಪೂರ್ಣಗೊಂಡಿಲ್ಲ. ಕಾಲುವೆಗೆ ನೀರು ಬಂದ್‌ ಮಾಡುವುದರಿಂದ ದೊಡ್ಡ ಸಮಸ್ಯೆ ಆಗಲಿದೆ. ಭತ್ತ, ಶೇಂಗಾ, ಮುಂತಾದ ಬೆಳೆ ಬೆಳೆದ ಯಾವುದೇ ರೈತರಿಗೆ ತೊಂದರೆ ಆಗದಂತೆ ಎಸ್ಕೇಪ್‌ಗೇಟ್‌ ತುರ್ತು ಕೆಲಸ ನಡೆಸಿ ದರಸ್ತಿಗೊಳಿಸಬೇಕು ಎಂದು ಕೆಬಿಜೆಎನ್‌ಎಲ್‌ ಅಧಿ​ಕಾರಿಗಳಿಗೆ ಸೂಚಿಸಿದರು.

ಗೇಟ್‌ ವಿಭಾಗದ ಸಹಾಯಕ ಎಂಜನೀಯರ ಪ್ರಭಾಕರ, ಕಾಲುವೆಗೆ ನೀರು ನಿಲ್ಲಿಸಿ ಗೇಟ್‌ ಪರಿಸ್ಥಿತಿ ಒಳಭಾಗದಲ್ಲಿ ಯಾವ ಮಟ್ಟಕ್ಕೆ ಇದೆ ಎಂಬುದು ವೀಕ್ಷಿಸಲಾಗುವುದು. ನಂತರ ದುರಸ್ತಿ ಕಾರ‍್ಯಕೈಗೊಂಡು ಮುಂದೆ ಕಾಲುವೆಗೆ ನೀರು ಹರಿಸಿದರೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ಪ್ರಪ್ರಥಮ ಬಾರಿಗೆ ಯಾದಗಿರಿಗೆ ಪಿಎಂ ನರೇಂದ್ರ ಮೋದಿ ಆಗಮನ: ಸ್ಕಾಡಾ ಗೇಟ್‌ ಉದ್ಘಾಟನೆ

ದೂರವಾಣಿಯೊಂದಿಗೆ ಆರ್‌ವಿಎನ್‌ ಆಗ್ರಹ:

ಎಸ್ಕೇಪ್‌ಗೇಟ್‌ ಕಿತ್ತಿದ ಸುದ್ದಿ ಗೊತ್ತಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ನೇರವಾಗಿ ಸಂಬಂಧಿ​ಸಿದ ವಿಭಾಗದ ಎಂಜನೀಯರುಗಳಿಗೆ ದೂರವಾಣಿ ಮೂಲಕ ಮಾತನಾಡಿ, ಎಸ್ಕೇಪ್‌ಗೇಟ್‌ ಅತೀ ಶೀಘ್ರದಲ್ಲಿ ರಿಪೇರಿಗೊಳಿಸಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದಿಗೌಡ ಕುಪ್ಪಿ, ಮಲ್ಲಣ್ಣ ಸಾಹು ಮುಧೋಳ, ಗೋಪಾಲ ದೊರೆ, ಗ್ರಾ.ಪಂ.ಸದಸ್ಯ ಮೌನೇಶ ಬೊಳ್ಳರಗಿ, ಅಂಬ್ರೇಶಗೌಡ, ಪ್ರಭು ಸಾಸನೂರು, ಬಸನಗೌಡ ಹುಡೇದ್‌ ಹಾಗೂ ಸಹಾಯಕ ಇಂಜನೀಯರ ವಿ.ಎಲ್‌.ಕಂಬಾರ ಸೇರಿದಂತೆ ಇತರರಿದ್ದರು.

click me!