ಸೈಂಟ್ ಮೇರಿಸ್ ದ್ವೀಪ: ಸಿಬ್ಬಂದಿ ಉದ್ಧಟತನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

By Suvarna News  |  First Published Jan 17, 2023, 8:29 PM IST

ಮಂಗಳೂರು ಮೂಲದ ಬ್ಲಾಗರ್ ಗೆ ಸೈಂಟ್ ಮೇರಿಸ್ ಐಲ್ಯಾಂಡ್ ದ್ವೀಪದ ಸಿಬ್ಬಂದಿ ಹಲ್ಲೆಗೆ ಯತ್ನಿಸಿರುವುದು ತಿಳಿದುಬಂದಿದೆ. ಪ್ರಕೃತಿ ಉಚಿತವಾಗಿ ನೀಡಿದ ಸೊಬಗಿಗೆ ಬೇಲಿಯನ್ನು ಹಾಕಿ ಪ್ರವಾಸೋದ್ಯಮವನ್ನು ಆರಂಭಿಸಿದ ಜಿಲ್ಲಾಡಳಿತ, ಅಲ್ಲಿಗೆ ಬರುವ ಪ್ರವಾಸಿಗರಿಂದ ಸುಂಕ ವಸೂಲಿಯ ಜವಾಬ್ದಾರಿಯನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡಿದೆ.  ಅವರು ಗೂಂಡಾಗಿರಿಯ ವರ್ತನೆಯಿಂದ ಪ್ರವಾಸಿಗರು ಭಯಗ್ರಸ್ತರಾಗಿದ್ದಾರೆ.


ಉಡುಪಿ (ಜ.17): ಇತ್ತೀಚೆಗಷ್ಟೇ ಉಡುಪಿ ಜಿಲ್ಲಾಡಳಿತವು ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿನೂತನ ಕಾರ್ಯಕ್ರಮವನ್ನು ನಡೆಸಿತ್ತು. ರಾಜ್ಯ, ರಾಷ್ಟ್ರೀಯ ಯೂಟ್ಯೂಬರ್, ಫೇಸ್ ಬುಕ್ ಬ್ಲಾಗರ್ಸ್ ಗಳನ್ನು ಕರೆಯಿಸಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸಿ ಅವರಿಂದ ಪ್ರಚಾರವನ್ನು ಬಯಸಿತ್ತು. ಜಿಲ್ಲಾಡಳಿತದ ಈ ಪ್ರಯೋಗ ಯಶಸ್ವಿಯೂ ಆಗಿತ್ತು, ಆದರೆ ಕಾರ್ಯಕ್ರಮ ಮುಗಿದ ನಂತರ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದರೆ ನೀಡುವ ಸೇವೆ ಮಾತ್ರ ಕಳಪೆಯಾಗಿದೆ, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತದೆ! ಮಂಗಳೂರು ಮೂಲದ ಬ್ಲಾಗರ್ ಗೆ ಸೈಂಟ್ ಮೇರಿಸ್ ಐಲ್ಯಾಂಡ್ ದ್ವೀಪದ ಸಿಬ್ಬಂದಿ ಹಲ್ಲೆಗೆ ಯತ್ನಿಸಿರುವುದು ತಿಳಿದುಬಂದಿದೆ.

ಪ್ರಕೃತಿ ಉಚಿತವಾಗಿ ನೀಡಿದ ಸೊಬಗಿಗೆ ಬೇಲಿಯನ್ನು ಹಾಕಿ ಪ್ರವಾಸೋದ್ಯಮವನ್ನು ಆರಂಭಿಸಿದ ಜಿಲ್ಲಾಡಳಿತ, ಅಲ್ಲಿಗೆ ಬರುವ ಪ್ರವಾಸಿಗರಿಂದ ಸುಂಕ ವಸೂಲಿಯ ಜವಾಬ್ದಾರಿಯನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡಿದೆ. ಆದರೆ ಅಲ್ಲಿನ ಕೆಲಸಗಾರರು, ದರ್ಪ ಮತ್ತು ಗೂಂಡಾಗಿರಿಯ ವರ್ತನೆಯಿಂದ ಪ್ರವಾಸಿಗರಿಗೆ ಭಯಗ್ರಸ್ತ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಪ್ರವಾಸಿಗರಿಂದ ಕೇಳಿ ಬರುತ್ತಿದೆ.

Tap to resize

Latest Videos

undefined

ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಬರುವ ಪ್ರವಾಸಿಗರಿಂದ ಹೆಚ್ವಿನ‌ ಪ್ರಮಾಣದ ಹಣವನ್ನು ಪಡೆಯುವುದಾಗಿ ಆರೋಪವಿದೆ. ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ದುಪ್ಪಟ್ಟು ಹಣ ತೆರುತ್ತಿದ್ದಾರೆ. ಆದರೆ ಹಣಕ್ಕೆ ಸಮಾನವಾದ ಸೇವೆಯನ್ನು ನೀಡಿ ಎಂಬುದು ಪ್ರವಾಸಿಗರಿಂದ ಕೇಳಿ ಬರುತ್ತಿರುವ ಕೂಗು. 

ದೇಶ ವಿದೇಶಗಳಿಂದ ಮಲ್ಪೆ ಕಡಲತೀರ, ಸೈಂಟ್ ಮೇರಿಸ್ ಐಲ್ಯಾಂಡ್ ವೀಕ್ಷಿಸಲು ಸಾವಿರಾರು ಪ್ರವಾಸಿಗರು, ಬ್ಲಾಗರ್ಸ್ ಗಳು ಆಗಮಿಸುತ್ತಾರೆ. ಮಲ್ಪೆ ಬೀಚ್ ಪ್ರವೇಶಿಸುವ ಸ್ವಾಗತ ಕಮಾನು ಬಳಿಯೇ ಪಾರ್ಕಿಂಗ್ ಸುಂಕ ಎಂದು ವಸೂಲಿ ಆರಂಭವಾಗುತ್ತದೆ. ಸ್ವಾಗತ ಕಮಾನು ದಾಟಿಕೊಂಡು ಮುಂದೆ ಹೋಗುವಾಗಲೇ ಪಾರ್ಕಿಂಗ್ ಸುಂಕ ವಸೂಲಿಗೆ ನಿಲ್ಲುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಓಡಾಡಲು ಸುಂಕದ ರೂಪದಲ್ಲಿ ಹಣ ಕೊಡಬೇಕೇ ಎಂದು ಕೆಲ ಪ್ರವಾಸಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ಮಲ್ಪೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಪಾರ್ಕಿಂಗ್ ಹಣ ಕೊಡಬೇಕೇ ಎಂದು ಹಲವಾರು ಪ್ರವಾಸಿಗರು ಸಿಟ್ಟುಗೊಳ್ಳುತ್ತಿದ್ದಾರೆ. ಮಲ್ಪೆಯಲ್ಲಿ ಪ್ರವಾಸಿಗರೊಬ್ಬರಿಂದ ಕ್ಯಾಮೆರಾಕ್ಕೆಂದು ಪಾರ್ಕಿಂಗ್ ನಲ್ಲಿ ಶುಲ್ಕ ಪಡೆದು, ನಂತರ ಐಲ್ಯಾಂಡ್ ನಲ್ಲಿಯೂ ಶುಲ್ಕಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಗಮನಕ್ಕೆ ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೂರ್ಮಾ ರಾವ್,  ನಗರಸಭೆ ಕಮೀಷನರ್ ಅವರಿಗೆ ಈ ಬಗ್ಗೆ ಸಮಗ್ರ ವರದಿ ನೀಡಲು ಸೂಚಿಸಿದ್ದೇನೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈ ಗೊಳ್ಳುತ್ತೇವೆ ಎಂದಿದ್ದಾರೆ.

ಫೇಸ್ ಬುಕ್ ಪೇಜ್ ನ ಪ್ರವಾಸಿ ಬ್ಲಾಗರ್ ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ತೆರಳಲು ಬೈಕ್ ನಲ್ಲಿ ಆಗಮಿಸಿದ್ದು, ಮಲ್ಪೆ ಸೀ ವಾಕ್ ಬಳಿಯ ಬೈಕ್ ಪಾರ್ಕಿಂಗ್ ಗೆ ಶುಲ್ಕವನ್ನು ಕಟ್ಟಿದ್ದಾರೆ. ಪಾರ್ಕಿಂಗ್ ಶುಲ್ಕ ಪಡೆದವರು ಕ್ಯಾಮರಾಕ್ಕೆಂದು ಶುಲ್ಕವನ್ನು ಪಡೆದಿದ್ದರು. ಆದರೆ ಐಲ್ಯಾಂಡ್ ತಲುಪಿದ ಬಳಿಕ ಪ್ರತ್ಯೇಕ ಕ್ಯಾಮರಾ ಶುಲ್ಕ ಕಟ್ಟಬೇಕು ಎಂದು ಸಿಬ್ಬಂದಿ ಹೇಳಿದಾಗ ನಡೆದ ಮಾತಿನ ಜಟಾಪಟಿಯನ್ನು ಬ್ಲಾಗರ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದು, ಸಿಬ್ಬಂದಿಯ ವರ್ತನೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನಿರ್ವಹಣಾ ಸಮಿತಿಯ ಸ್ಪಷ್ಟನೆ:
ಮಲ್ಪೆ ಬೀಚ್‌ನಲ್ಲಿ ಯುಟ್ಯೂಬರ್ ಓರ್ವನ ಮೇಲೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಪ್ರಕಟಿಸಿದ ಯೂಟ್ಯೂಬರ್ ಉದ್ದಟತನ ಪ್ರರ್ದಶಿಸಿದ ಹಿನ್ನೆಲೆ ಸಿಬ್ಬಂದಿಗಳು ಆ ಯುಟ್ಯೂಬರ್‌ನ್ನು ತರಾಟೆಗೆ ತೆಗೆದುಕೊಂಡಿದ್ದಾನೆ ಹೊರತು, ಯಾವುದೇ ದುರುದ್ದೇಶದಿಂದ ಅಲ್ಲ. ಪ್ರಥಮವಾಗಿ ಯುಟ್ಯೂಬರ್ ಬಳಿ ಕ್ಯಾಮೆರಾ ಶುಲ್ಕ ಪಾವತಿಸಿದ ರಶೀದಿ ಇರಲಿಲ್ಲ. ಈ ಹಿನ್ನೆಲೆ ಕ್ಯಾಮೆರಾ ಒಳಗೆ ಬಿಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

ಮಲ್ಪೆ ಬೀಚ್‌ನಲ್ಲಿ ನಡೆಸಿದ ಪ್ರತಿ ವ್ಯವಹಾರಕ್ಕೆ ರಶೀದಿಯನ್ನು ನೀಡಲಾಗುತ್ತದೆ. ಯುಟ್ಯೂಬರ್ ಯುಪಿಐ ಪಾವತಿ ಮಾಡಲಾಗಿದೆ ಎಂದು ಹೇಳಿದರೂ, ರಶೀದಿ ಇಲ್ಲದೆ ಇರುವುದರಿಂದ ಕ್ಯಾಮೆರಾದೊಂದಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಈ ದ್ವೀಪ ಎನ್ನುವುದು ಜೀವ ಸೂಕ್ಷ್ಮ ವಲಯವಾಗಿರುವುದರಿಂದ ಬ್ಯಾಗ್ ಜೊತೆ ಒಳ ಪ್ರವೇಶಕ್ಕೆ ಅನುಮತಿ ಇಲ್ಲ. ಈ ಯೂಟ್ಯೂಬರ್ ಅನುಮತಿ ಇಲ್ಲದೆ ಒಳಪ್ರವೇಶಕ್ಕೆ ಯತ್ನಿಸಿದ್ದು, ಈ ಸಂದರ್ಭ ನಮ್ಮ ಸಿಬ್ಬಂದಿಗಳು ತಡೆದ  ಬಳಿಕ ಲಗೇಜ್ ರೂಮ್‌ನಲ್ಲಿ ವಸ್ತುಗಳನ್ನು ಇಟ್ಟು ಒಳ ಹೋಗುವುದಕ್ಕೆ ರಾಜಿಯಾದ. ಈ ಸಂದರ್ಭ ಯುಟ್ಯೂಬರ್ ಜೊತೆಗಿದ್ದ ವ್ಯಕ್ತಿ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೊ ತೆಗೆಯುವುದಕ್ಕೆ ಯತ್ನಿಸಿದ್ದು, ಇದನ್ನು ನಮ್ಮ ಸಿಬ್ಬಂದಿ ವಿರೋಧಿಸಿದ್ದಾರೆ. ಅಲ್ಲದೆ, ಯೂ ಟ್ಯೂಬರ್ ಕೂಡ ಇದನ್ನು ವಿಡಿಯೋ ಮಾಡಿ ಬೀಚ್‌ನ ವಿರುದ್ದ ಪ್ರಚಾರ ಮಾಡುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದಾನೆ.

Uttarakannada: ದ್ವೀಪದಲ್ಲಿ ಸಂಭ್ರಮದಿಂದ ನಡೆದ ಕೂರ್ಮಗಢ ಜಾತ್ರೆ

ಈ ಕಾರಣಕ್ಕಾಗಿ ನಮ್ಮ ಸಿಬ್ಬಂದಿ ಆಕ್ಷೇಪಿಸಿದ್ದಾರೆ ಹೊರತು ಇನ್ಯಾವ ಕಾರಣದಿಂದಲ್ಲ. ಒತ್ತಾಯಪೂರ್ವಕವಾಗಿ ನಮ್ಮ ಸಿಬ್ಬಂದಿಯ ಅನುಮತಿ ಇಲ್ಲದೆ ಫೋಟೋ ತೆಗೆಯುವುದಕ್ಕೆ ಹೋಗಿದ್ದು, ಈ ಹಿನ್ನೆಲೆ ನಮ್ಮ ಸಿಬ್ಬಂದಿಗಳು ವಿರೋಧಿಸಿದ್ದಾರೆ ಹೊರತು ಬೇರಾವ ಕಾರಣದಿಂದ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಸರಣಗೊಂಡ ದೃಶ್ಯಾವಳಿಯನ್ನು ತಿರುಚಲಾಗಿದ್ದು, ನಮ್ಮ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿರುವ ದೃಶ್ಯಗಳನ್ನು ಮಾತ್ರ ಪ್ರಕಟಿಸಲಾಗಿದೆ. ಯೂಟ್ಯೂಬರ್ ಮತ್ತು ಜತೆಗಿದ್ದ ವ್ಯಕ್ತಿ ನಮ್ಮ ಸಿಬ್ಬಂದಿಯನ್ನು ಅನಗತ್ಯ ನಿಂದಿಸಿದ ವಿಡಿಯೋವನ್ನು ಅವರು ಪ್ರಕಟಿಸಿಲ್ಲ 
ಸೈಂಟ್ ಮೇರಿಸ್ ದ್ವೀಪ ಎನ್ನುವುದು ಜೀವ ವೈವಿದ್ಯಮಯ ತಾಣ. ಇಲ್ಲಿನ ರಕ್ಷಣೆ ಹೊಣೆ ನಮ್ಮ ಸಂಸ್ಥೆಯ ಮೇಲಿದೆ.

Travel Guide: ಇಲ್ಲಿ ಪಾತ್ರೆ ತೊಳೆಯೋ ಸೋಪ್ ಬೆಲೆ 3500 ಇರೋಕೆ ಕಾರಣ ಏನ್ಗೊತ್ತಾ?

ಈ ಹಿನ್ನೆಲೆ ದ್ವೀಪದಲ್ಲಿ  ಕೆಲವೊಂದು ಕಠಿಣ ನಿಯಮಗಳನ್ನು ಪ್ರವಾಸಿಗರ ಮೇಲೆ ಹೇರಲಾಗಿದೆ.  ಇಲ್ಲಿ ಪ್ರವಾಸಿಗರ ಅನುಚಿತ ವರ್ತನೆಯನ್ನು ನಿಯಂತ್ರಿಸುವುದು ನಮ್ಮ ಸಿಬ್ಬಂದಿಗಳ ಹೊಣೆಯಾಗಿದೆ. ಅಲ್ಲದೆ ಸರಕಾರದ ಸ್ಪಷ್ಟ ಸೂಚನೆ ಇರುವುದರಿಂದ ಪರಿಸರ ಸ್ನೇಹಿ ವಸ್ತುಗಳಿಂದ ಸೈಂಟ್ ಮೇರಿಸ್ ದ್ವೀಪವನ್ನು ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಸಂದರ್ಭ ಪ್ರವಾಸಿಗರ ಸುರಕ್ಷತೆಗೆ ಕೂಡ ಅಷ್ಟೇ ಮುತುವರ್ಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.

click me!