ರಾಮಮಂದಿರ ಜೊತೆ ರಾಮ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ, ಮೋದಿಗೆ ಪೇಜಾವರ ಶ್ರೀ ಸೂಚನೆ

By Suvarna News  |  First Published Jan 17, 2023, 9:16 PM IST

2024 ರ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದೊಳಗೆ ರಾಮದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು, ಇದರ ಅಂಗವಾಗಿ 1 ವರ್ಷಗಳ ಕಾಲ ದೇಶವ್ಯಾಪಿ ವಿವಿಧ ಸೇವಾ ಕೈಂಕರ್ಯಗಳನ್ನು ನಡೆಸಲು ಭಕ್ತರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕರೆ ನೀಡಿದರು.


ಉಡುಪಿ (ಜ.17): 2024 ರ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ಯಲ್ಲಿ ಭವ್ಯ ರಾಮಮಂದಿರದೊಳಗೆ ರಾಮದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು, ಇದರ ಅಂಗವಾಗಿ 1 ವರ್ಷಗಳ ಕಾಲ ದೇಶವ್ಯಾಪಿ ವಿವಿಧ ಸೇವಾ ಕೈಂಕರ್ಯಗಳನ್ನು ನಡೆಸಲು ಭಕ್ತರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕರೆ ನೀಡಿದರು. ದೇವ ಭಕ್ತಿ ಹಾಗೂ ದೇಶ ಭಕ್ತಿ ಬೇರೆಬೇರೆಯಲ್ಲ. ಹುಂಡಿಯಲ್ಲಿ ಹಾಕಿದ ಕಾಣಿಕೆಯನ್ನು ಸರ್ಕಾರ ಅನ್ಯಕಾರ್ಯಗಳಿಗೆ ವಿನಿಯೋಗಿಸುತ್ತದೆ ಎಂದು ದೂರುವ ಬದಲು ಸಮಾಜದ ದೀನ, ದುರ್ಬಲರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ಈ ಮೂಲಕ ದೇವರಿಗೆ ಸೇವೆ ಸಲ್ಲಿಸಬೇಕು. ಮನೆ ಇಲ್ಲದವರಿಗೆ ಸೂರು ಒದಗಿಸುವುದು, ಅನಾರೋಗ್ಯ ಪೀಡಿತರಿಗೆ ನೆರವು, ವಿದ್ಯಾರ್ಥಿಗಳನ್ನು, ಗೋವುಗಳನ್ನು ದತ್ತು ತೆಗೆದುಕೊಳ್ಳುವುದು, ರಾಮಾಯಣ ಉಪನ್ಯಾಸಗಳನ್ನು ಏರ್ಪಡಿಸುವುದು ಮುಂತಾದ ಸೇವಾ ಚಟುವಟಿಕೆ ಕೈಗೊಳ್ಳಲು ಸಂಕಲ್ಪ ಮಾಡಬೇಕು ಎಂದು ಹೇಳಿದರು.

Udupi: ಬೀಳಲು ಸಿದ್ಧವಾಗಿರುವ ನೀರಿನ ಟ್ಯಾಂಕ್ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

Tap to resize

Latest Videos

undefined

ವಿಶೇಷ ಸಂಕಲ್ಪದ ಬಗ್ಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸೇವಾ ಸಂಕಲ್ಪ ದಿನಕ್ಕೆ ಚಾಲನೆ ನೀಡಲು ಕೋರಿಕೆ ಸಲ್ಲಿಸಲಾಗುವುದು. ಸೇವಾ ಚಟುವಟಿಕೆಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಆ್ಯಪ್ ರೂಪಿಸಿ ಸಾರ್ವಜನಿಕರು ಅದರಲ್ಲಿ ವಿವರಗಳನ್ನು ದಾಖಲಿಸುವಂತೆ ಮಾಡಬೇಕು. ಮಂದಿರ ನಿರ್ಮಾಣವಾದ ಬಳಿಕ ಎಲ್ಲಾ ದಾಖಲೆಗಳನ್ನು ರಾಮದೇವರಿಗೆ ಸಮರ್ಪಣೆ ಮಾಡಬಹುದು ಎಂದರು.

ಸೈಂಟ್ ಮೇರಿಸ್ ದ್ವೀಪ: ಸಿಬ್ಬಂದಿ ಉದ್ಧಟತನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಇದಕ್ಕೂ ಮುನ್ನ ಸ್ವಾಮೀಜಿ ಅಯೋಧ್ಯೆ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು, ಅದಮಾರು ಶ್ರೀ ಈಶಪ್ರಿಯತೀರ್ಥರು, ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

click me!