KR ಪೇಟೆ ಉಪ ಚುನಾವಣೆ : ಸಂಸದೆ ಸುಮಲತಾ ಬೆಂಬಲ ಯಾರಿಗೆ?

Published : Sep 23, 2019, 11:29 AM IST
KR ಪೇಟೆ ಉಪ ಚುನಾವಣೆ : ಸಂಸದೆ ಸುಮಲತಾ ಬೆಂಬಲ ಯಾರಿಗೆ?

ಸಾರಾಂಶ

ಮಂಡ್ಯ ಸಂಸದೆ ಗೆಲುವಿನ ಬಳಿಕವೂ ಪಕ್ಷೇತರರಾಗಿಯೇ ಉಳಿದ ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ ಸಿಗಲಿದೆ  ಎನ್ನುವುದು ಸದ್ಯದ ಮಟ್ಟಿನ ಕುತೂಹಲವಾಗಿದೆ.

ಮಂಡ್ಯ [ಸೆ. 23]: ಮಂಡ್ಯದ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ನಾರಾಯಣ ಗೌಡ ಅನರ್ಹತೆಯಿಂದಾಗಿ ಇದೇ ಅಕ್ಟೋಬರ್ 22 ರಂದು ಚುನಾವಣೆ ನಡೆಯಲಿದ್ದು, ಮಂಡ್ಯ ಸಂಸದೆ ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿ ಇಲ್ಲಿನ ಮುಖಂಡರಿದ್ದಾರೆ. 

ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ, ಸಂಸದೆ ಸುಮಲತಾ ಬೆಂಬಲ ಯಾರಿಗೆ ಎನ್ನುವ ಕುತೂಹಲ ಇದೀಗ ಗರಿಗೆದರಿದೆ. 

ಕಳೆದ  ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸುಮಲತಾಗೆ ಬಿಜೆಪಿ ಮುಖಂಡರು ಬೆಂಬಲ ನೀಡಿದ್ದು, ಕೆಲ ಕಾಂಗ್ರೆಸಿಗರೂ ಕೂಡ ಬೆಂಬಲಿಸಿದ್ದರು. ಆದರೆ ಚುನಾವಣೆ ಮುಕ್ತಾಯದ ಬಳಿಕ ಸುಮಲತಾ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲ ಇತ್ತು. ಆದರೆ ಅವರು ಪಕ್ಷೇತರರಾಗಿಗೆ ಉಳಿದಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂಬರೀಶ್ ಬೆಂಬಲಿತ ಪಕ್ಷ ಕಾಂಗ್ರೆಸ್ ಹಾಗೂ ಸುಮಲತಾ ಉತ್ತಮ ಒಡನಾಟ ಹೊಂದಿರುವ ಬಿಜೆಪಿ ಇದರಲ್ಲಿ ಯಾರಿಗೆ ಇವರ ಬೆಂಬಲ ಇರಲಿದೆ. ಮುಂದಿನ ಕೆ.ಆರ್ ಪೇಟೆ ಕಣದಲ್ಲಿ ಸುಮಲತಾ ಪಾತ್ರವೇನು ಎನ್ನುವುದು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. 

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!