ಕೆ. ಆರ್. ಪೇಟೆ ಉಪಚುನಾವಣೆ: ಬಿಜೆಪಿಗೆ ಬಂಡಾಯದ ಬಿಸಿ

By Kannadaprabha News  |  First Published Nov 17, 2019, 8:35 AM IST

ಕೆಆರ್‌ಪೇಟೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ಮಧ್ಯೆ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಲು ಆಕಾಂಕ್ಷಿತರು ಸಜ್ಜಾಗಿದ್ದಾರೆ. ನಾರಾಯಣಗೌಡ ವಿರುದ್ಧ ನಿವೃತ್ತ ಸರ್ವೇಯರ್‌ ದೇವೇಗೌಡರು ಸ್ಪರ್ಧೆ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಬಂಡಾಯದ ಬಿಸಿ ತಾಗುತ್ತಿದೆ.


ಮಂಡ್ಯ(ನ.17): ಕೆಆರ್‌ಪೇಟೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವ ಮಧ್ಯೆ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಲು ಆಕಾಂಕ್ಷಿತರು ಸಜ್ಜಾಗಿದ್ದಾರೆ. ನಾರಾಯಣಗೌಡ ವಿರುದ್ಧ ನಿವೃತ್ತ ಸರ್ವೇಯರ್‌ ದೇವೇಗೌಡರು ಸ್ಪರ್ಧೆ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಬಂಡಾಯದ ಬಿಸಿ ತಾಗುತ್ತಿದೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿರುವ ದೇವೇಗೌಡರು ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಶನಿವಾರ ಬೆಂಬಲಿಗರೊಂದಿಗೆ ಸಭೆ ನಡೆಸಿದ ಸರ್ವೇ ದೇವೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ.

Tap to resize

Latest Videos

ಪಕ್ಷೇತರರು ಸ್ಪರ್ಧಿಸಿರುವಲ್ಲಿ ಕಾಂಗ್ರೆಸ್‌ಗೆ ಸೋಲಿನ ಬುತ್ತಿ!

ಸೋಮವಾರ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿರುವ ದೇವೇಗೌಡರು ಬಿಜೆಪಿ ರಾಜ್ಯ ನಾಯಕರ ಮಾತು ಹಾಗೂ ಸಂಧಾನಕ್ಕೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಗೌಡರಿಗೆ ಬಂಡಾಯದ ಬಿಸಿ ತಾಗುತ್ತದೆ. ಆದರೆ ನಾಮಪತ್ರ ವಾವಸ್ಸು ತೆಗೆದುಕೊಳ್ಳುವ ಕೊನೆಯ ದಿನದವರೆಗೂ ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಶನಿವಾರ ಸಂಜೆ ನಿರ್ಧಾರ:

ಕೆ.ಆರ್‌.ಪೇಟೆ ಉಪಚುನಾವಣೆಗೆ ಇದುವರೆಗೂ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಶನಿವಾರ ಸಂಜೆ ಅಥವಾ ರಾತ್ರಿ ನಿರ್ಧಾರ ವಾಗುವ ಸಾಧ್ಯತೆ ಇದೆ. ಯಾರಿಗೆ ಟಿಕೆಟ್‌ ನೀಡುವುದು ಎಂಬ ಗೊಂದಲದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಅಭ್ಯರ್ಥಿ ಆಯ್ಕೆ ಮಾಡಿ ಪ್ರಚಾರಕ್ಕೆ ಧುಮುಕಿವೆ.

ಇನ್ನೂ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲದಲ್ಲಿರುವ ಕಾಂಗ್ರೆಸ್‌ ಟಿಕೆಟ್‌ ರೇಸ್‌ನಲ್ಲಿ ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್‌ ಮತ್ತು ಬಿ.ಪ್ರಕಾಶ್‌ ಇದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಚ್‌ ನೀಡುವುದು ಎಂಬ ಗೊಂದಲ ಮಾತ್ರ ಮುಂದುವರೆದಿದೆ. ಕಾಂಗ್ರೆಸ್‌ ವರಿಷ್ಠರು ಸಿದ್ದರಾಮಯ್ಯ ನೇತೃತ್ವದಲ್ಲಿ ಟಿಕೆಟ್‌ ಫೈನಲ್ ಮಾಡಲಿದ್ದಾರೆ. ಸಂಜೆ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಟಿಕೆಟ್‌ ಫೈನಲ್ ಆಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

JDS, BJP ಪ್ರಚಾರ ಸ್ಟಾರ್ಟ್, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯಲ್ಲೇ ಗೊಂದಲ

ನಾನು ಯಾರಿಗೆ ಟಿಕೆಟ್‌ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇನೆ. ಈ ಬಾರಿ ಕೆ.ಆರ್‌.ಪೇಟೆ ಇತಿಹಾಸದಲ್ಲಿ ಹೊಸ ಫಲಿತಾಂಶ ಬರಲಿದೆ. ನಮ್ಮ ಅಭ್ಯರ್ಥಿ ಪರ ನಾನು ಕೆಲಸ ಮಾಡುತ್ತೇನೆ ಎಂದು ಟಿಕೆಟ್‌ ಆಕಾಂಕ್ಷಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹೇಳಿಕೆ ನೀಡಿದ್ದಾರೆ.

click me!