ಸಿದ್ದರಾಮಯ್ಯರನ್ನು ಹೊಗಳಲು ಇದು ಸಮಯವಲ್ಲ ಎಂದ ಕಾಂಗ್ರೆಸ್‌ ನಾಯಕ

Kannadaprabha News   | Asianet News
Published : Jun 21, 2021, 08:23 AM ISTUpdated : Jun 21, 2021, 08:50 AM IST
ಸಿದ್ದರಾಮಯ್ಯರನ್ನು ಹೊಗಳಲು ಇದು ಸಮಯವಲ್ಲ ಎಂದ ಕಾಂಗ್ರೆಸ್‌ ನಾಯಕ

ಸಾರಾಂಶ

* ಮುಂದಿನ ಸಿಎಂ ಬಗ್ಗೆ ಜಮೀರ್‌ ಗೊಂದಲ ಮೂಡಿಸಬಾರದು * ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ * ಜನತಾದಳದಲ್ಲಿದ್ದಾಗ ಇದ್ದಾಗ ಹೆಚ್‌ಡಿಕೆಯನ್ನ ಕುಮಾರಣ್ಣ ಅಂತಿದ್ದ ಜಮೀರ್‌

ಮೈಸೂರು(ಜೂ.21): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಶಾಸಕ ಜಮೀರ್‌ ಅಹಮದ್‌ ಅವರು ಈಗಲೇ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಸಲಹೆ ಮಾಡಿದ್ದಾರೆ. 

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಚುನಾವಣೆ ಮುಗಿದು, ಪಕ್ಷ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷದ ಸಭೆ ಕರೆದು, ಅಲ್ಲಿ ಅಭಿಪ್ರಾಯ ಸಂಗ್ರಹಿಸಿ, ನಂತರ ಯಾರು ಸಿಎಂ ಆಗಬೇಕೆಂದು ವರಿಷ್ಠರು ತೀರ್ಮಾನಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗಿರುವಾಗ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಜಮೀರ್‌ ಅಹಮದ್‌ ಅವರು ಈಗಿನಿಂದಲೇ ಸಿಎಂ ಸ್ಥಾನ ವಿಚಾರವಾಗಿ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಮನವಿ ಮಾಡುತ್ತೇನೆ ಎಂದರು. 

ಅವರಪ್ಪನ ಮನೆಯಿಂದ ನನಗೆ MLC ಸ್ಥಾನ ತಂದುಕೊಟ್ಟಿದ್ದಾರಾ?: ವಿಶ್ವನಾಥ್‌

ಜಮೀರ್‌ ಅಹಮದ್‌ ಅವರು ಜನತಾದಳದಲ್ಲಿದ್ದಾಗ ಇದ್ದಾಗ ಕುಮಾರಸ್ವಾಮಿ ಅವರನ್ನು ಕುಮಾರಣ್ಣ ಅಂತಿದ್ರು, ಈಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಜೊತೆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಗಳಬೇಡಿ ಎಂದು ಹೇಳುವುದಿಲ್ಲ. ಆದರೆ ಇದು ಸಮಯವಲ್ಲ ಎಂದರು.
 

PREV
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?