ಬಸನಗೌಡ ಪಾಟೀಲ ಯತ್ನಾಳ್‌ ಈಗ ನಿರುದ್ಯೋಗಿ: ಈಶ್ವರ್‌ ಖಂಡ್ರೆ

Kannadaprabha News   | Asianet News
Published : Mar 02, 2020, 07:17 AM IST
ಬಸನಗೌಡ ಪಾಟೀಲ ಯತ್ನಾಳ್‌ ಈಗ ನಿರುದ್ಯೋಗಿ: ಈಶ್ವರ್‌ ಖಂಡ್ರೆ

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡನೀಯ|ಬಿಜೆಪಿ ನಾಯಕರಿಗೆ ನಿಜವಾದ ದೇಶಭಕ್ತಿ ಇದ್ದರೆ ಯತ್ನಾಳ್‌ ಶಾಸಕ ಸ್ಥಾನ ರದ್ದುಪಡಿಸಿ|ಸಂವಿಧಾನ ಬುಡಮೇಲು ಮಾಡುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ |

ಹುಬ್ಬಳ್ಳಿ[ಮಾ.02]: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಾಪ್ರಹಾರ ಮುಂದುವರೆಸಿದ್ದಾರೆ. ಯತ್ನಾಳ್‌ ಮಾಡಲು ಕೆಲಸವಿಲ್ಲದ ನಿರುದ್ಯೋಗಿ ಆಗಿದ್ದು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಿಜವಾದ ದೇಶಭಕ್ತಿ ಇದ್ದರೆ ಯತ್ನಾಳ್‌ ಶಾಸಕ ಸ್ಥಾನ ರದ್ದುಪಡಿಸಬೇಕು. ಗಾಂಧೀಜಿ ಅವರ 105ನೇ ಜನ್ಮದಿನಾಚರಣೆ ಮಾಡುವ ಬಿಜೆಪಿಗರು, ಇನ್ನೊಂದೆಡೆ ಗಾಂಧಿ ಭಾವಚಿತ್ರಕ್ಕೆ ಗನ್‌ ಹಿಡಿದು ಸಂಭ್ರಮಿಸುತ್ತಾರೆ. ಸಂವಿಧಾನ ಬುಡಮೇಲು ಮಾಡುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ ಎಂದು ದೂರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪ ಜನ್ಮದಿನಾಚರಣೆಗೆ ಸಿದ್ದರಾಮಯ್ಯ ಹೋಗಿದ್ದಕ್ಕೆ ಯಾರ ವಿರೋಧವೂ ಇಲ್ಲ. ಅವರು ತಮ್ಮ ಸಿದ್ಧಾಂತದ ನಿಲುವಿಗೆ ಬದ್ಧರಾಗಿದ್ದಾರೆ. ಸ್ನೇಹವೇ ಬೇರೆ ರಾಜಕೀಯವೆ ಬೇರೆ ಎಂದು ಹೇಳಿದ್ದಾರೆ. 
 

PREV
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!