ತಾಯಿ, ಮಗನ ಮಧ್ಯೆ ಅಕ್ರಮ ಸಂಬಂಧ: ತಂದೆಯನ್ನೇ ಮುಗಿಸಿಬಿಟ್ಟ ಪಾಪಿಗಳು!

Suvarna News   | Asianet News
Published : Mar 01, 2020, 03:01 PM IST
ತಾಯಿ, ಮಗನ ಮಧ್ಯೆ ಅಕ್ರಮ ಸಂಬಂಧ: ತಂದೆಯನ್ನೇ ಮುಗಿಸಿಬಿಟ್ಟ ಪಾಪಿಗಳು!

ಸಾರಾಂಶ

ದಾಮು ನಾಯಕ್ ಕೊಲೆ ಪ್ರಕರಣ| ಐವರು ಆರೋಪಿಗಳನ್ನ ಬಂಧಿಸಿದ ಪೊಲೀಸರು| ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದ್ದ ಕೊಲೆ| ದಾಮು ನಾಯಕ್ ಕೊಲೆಗೆ ತಾಯಿ-ಮಗನ ಅಕ್ರಮ ಸಂಬಂಧವೇ ಕಾರಣ| ಬ

ವಿಜಯಪುರ(ಮಾ.01):  ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾಮು ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನ ಬಸವನ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.  ದಾಮು ನಾಯಕ್ ಎರಡನೇ ಪತ್ನಿ ಪ್ರೇಮಾ ದಾಮು ನಾಯಕ್, ದಾಮು ನಾಯಕ್‌ನ ಮೊದಲನೇ ಹೆಂಡತಿ ಮಗ ಸುಭಾಷ ದಾಮು ನಾಯಕ್, ಶಾಲೆಯ ಶಿಕ್ಷಕರಾದ ಅವ್ವಣ್ಣ ಗ್ವಾತಗಿ, ಶಿವಣ್ಣ ಕೊಣ್ಣೂರ್ ಹಾಗೂ ಓರ್ವ ಸುಪಾರಿ ಕಿಲ್ಲರ್ ಅಶೋಕ ಲಮಾಣಿ ಬಂಧಿತ ಆರೋಪಿಗಳಾಗಿದ್ದಾರೆ. 

ಏನಿದು ಪ್ರಕರಣ? 

ಕಳೆದ ಫೆ. 25 ರಂದು ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಾಮು ನಾಯಕ್‌ನನ್ನ  ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ದಾಮು ನಾಯಕ್‌ನನ್ನ ಕೊಲೆ ಮಾಡಿದ್ದು ಪತ್ನಿ ಪ್ರೇಮಾ ದಾಮು ನಾಯಕ್, ಮಗ ಸುಭಾಷ ದಾಮು ನಾಯಕ್ ಎಂದು ತಿಳಿದು ಬಂದಿದೆ. ಪ್ರೇಮಾ ದಾಮು ನಾಯಕ್ ಜೊತೆ ಮಗ ಸುಭಾಷ ದಾಮು ನಾಯಕ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನೈತಿಕ ಸಂಬಂಧ ಹಾಗೂ ಆಸ್ತಿಗಾಗಿ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾಮು ನಾಯಕ್‌ನನ್ನ ತಾಯಿ ಮತ್ತು ಮಗ ಸೇರಿಕೊಂಡು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 

PREV
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು