ಮತ್ತೊಮ್ಮೆ ಸಚಿವ ಶಾಸಕರು ಬದಲಾಗ್ತಾರಾ..? ಡಿಕೆಶಿ ನುಡಿದ್ರು BJP ಭವಿಷ್ಯ

Suvarna News   | Asianet News
Published : Mar 01, 2020, 03:25 PM ISTUpdated : Mar 01, 2020, 05:54 PM IST
ಮತ್ತೊಮ್ಮೆ ಸಚಿವ ಶಾಸಕರು ಬದಲಾಗ್ತಾರಾ..? ಡಿಕೆಶಿ ನುಡಿದ್ರು BJP ಭವಿಷ್ಯ

ಸಾರಾಂಶ

ಬಿಜೆಪಿಯಲ್ಲಿ ಮತ್ತೊಮ್ಮೆ ರೀಷಫಲ್ ಆಗಲಿದೆ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಏನಾಗಲಿದೆ ಬಿಜೆಪಿಯಲ್ಲಿ..? ಮತ್ತೊಮ್ಮೆ ಬದಲಾಗ್ತಾರಾ ಸಚಿವ, ಶಾಸಕರು..? ಡಿಕೆಶಿ ಏನ್ ಹೇಳಿದ್ದಾರೆ..? ಇಲ್ಲಿ ಓದಿ.  

ಮೈಸೂರು(ಮಾ.01): ಬಿಜೆಪಿಯಲ್ಲಿ ಮತ್ತೊಮ್ಮೆ ರೀಷಫಲ್ ಆಗಲಿದೆ ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ‌ ನೆರಳನ್ನು ನಾನು ನಂಬಲು ಆಗುತ್ತಿಲ್ಲ. ಬೇರೆ ಕ್ಷೇತ್ರದವರಂತೆ ರಾಜಕಾರಣಿಗಳೂ ಬದಲಾಗಿದ್ದಾರೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಬೇರೆ ಕ್ಷೇತ್ರದವರಂತೆ (ಮಾಧ್ಯಮ) ರಾಜಕಾರಣಿಗಳೂ ಆಗಿದ್ದಾರೆ. 20-30 ವರ್ಷ ಸೇವೆ ಸಲ್ಲಿಸಿದವರು ಪಕ್ಷ ಬಿಟ್ಟು ಬಿಟ್ಟು ಹೋಗುತ್ತಿದ್ದಾರೆ. ಇದು ಎಲ್ಲಾ ಪಕ್ಷಗಳಲ್ಲೂ ಆಗುತ್ತಿದೆ. ಮೈಸೂರು ಭಾಗದಲ್ಲೂ ನಾಯಕರುಗಳು ಹಿಂದೆ ಏನು ಹೇಳಿದ್ದರು, ಈಗ ಹೇಗಿದೆ ನೀವೇ ನೋಡಿ ಎಂದು ಹೇಳಿದ್ದಾರೆ.

ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ

ಚುನಾವಣೆ ಮುಂಚೆ ಏನು ಮಾತಾಡಿದ್ರು, ಈಗ ಏನಾಗಿದೆ. ಬಿಜೆಪಿಯಲ್ಲಿ ಹೊಸಬರೆಲ್ಲ ಆಢಳಿತ ನಡೆಸುತ್ತಿದ್ದಾರೆ, ಪಾಪ ಹಳಬರು ನೋಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಹೆಚ್.ವಿಶ್ವನಾಥ್‌ಗೆ ಕುಟುಕಿದ್ದಾರೆ. ಬಿಜೆಪಿಯಲ್ಲಿ ಮತ್ತೊಮ್ಮೆ ರೀಷಫಲ್ ಆಗುತ್ತೆ ಎಂದಿದ್ದಾರೆ.

ಕೆಪಿಸಿಸಿ ಅದ್ಯಕ್ಷ ಗಾದಿ ಕಸರತ್ತು ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಿರಿಯ ಗುಲಾಮ್‌ನಬಿ ಆಜಾದ್ ಭೇಟಿಯನ್ನು ಅಲ್ಲಗಳೆದಿದ್ದಾರೆ. ನಾನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಕೆಲಸ ಮಾಡುತ್ತಿದ್ದೇನೆ. ಅಸೆಂಬ್ಲಿಗೆ ಹೋಗಿ ನನ್ನ ಕೆಲಸ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಳಂಬದ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಕೇಳಿ ಎಂದು ಉತ್ತರಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಕಾಂಗ್ರೆಸ್ ಇಲ್ಲ. ಇಲ್ಲಿ ಯಾರೂ ಹೊಸಬ ಹಳಬ ಅಂತ ಬೋರ್ಡ್ ಹಾಕಿಕೊಂಡಿಲ್ಲ ಎಂದಿದ್ದಾರೆ.

ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ