'ಅನರ್ಹರು ಅಧಿಕಾರದ ದಾಹಕ್ಕಾಗಿ ಎಂತಹ ಹೇಸಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ'

By Web DeskFirst Published Nov 28, 2019, 1:02 PM IST
Highlights

ಅನರ್ಹರು ಅಧಿಕಾರದ ದಾಹಕ್ಕಾಗಿ ಎಂತಹ ಹೇಸಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ| ಮಹಾರಾಷ್ಟ್ರ, ಗುಜರಾತ್ ನಲ್ಲಿ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ| ತಾಯಿಯಂತ ಪಕ್ಷಕ್ಕೆ ದ್ರೋಹ ಮಾಡಿ, ಬೆನ್ನಿಗೆ ಚೂರಿ ಹಾಕಿದ್ದಾರೆ| ಅನರ್ಹ ಶಾಸಕರಿಗೆ ಜನರು ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ| ಭೀಕರ ಪ್ರವಾಹ ಪರಿಸ್ಥಿತಿ ಇದ್ದಾಗ ರಮೇಶ್ ಉಡಾಫೆಯಿಂದ ಬಾಂಬೆಯಲ್ಲಿದ್ದು ಜನರಿಗೆ ವಂಚಿಸಿದ್ದಾರೆ| ಪಕ್ಷಾಂತರಿಗಳು ಅನರ್ಹರು ಇದ್ದಾರೆ, ಅಯೋಗ್ಯರು ಇದ್ದಾರೆ ಎಂದ ಖಂಡ್ರೆ| 

ಬೆಳಗಾವಿ(ನ.28): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜಾತಿ, ಧರ್ಮದ ಮೇಲೆ ಮತಯಾಚನೆ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ವೀರಶೈವ ಸಮುದಾಯ ಎಲ್ಲರನ್ನೂ ಸಮಾನವಾಗಿ ಕಾಣುವ ಸಮುದಾಯವಾಗಿದೆ. ಹೀಗಾಗಿ ಬಿಎಸ್‌ವೈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ. 

ಗುರುವಾರ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷಾಂತರ ಮಾಡಿ ಗೋಕಾಕ್ ಜನತೆಗೆ ರಮೇಶ್ ಜಾರಕಿಹೊಳಿ ಅವರು ವಂಚಿಸಿದ್ದಾರೆ. ರಮೇಶ್ ಗೆ ಗೋಕಾಕ್ ಜನತೆ ತಕ್ಕ ಪಾಠ ಕಲಿಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಅವರು ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಲ ತಿಂಗಳ ಹಿಂದೆಯಷ್ಟೇ ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಬಿಜೆಪಿ ಸರ್ಕಾರ ರೈತರಿಗೆ, ಜನರಿಗೆ ಏನು ಪರಿಹಾರ ಕೊಟ್ಟಿದೆ. ಆ ವಿಷಯ ಹೇಳೋದು ಬಿಟ್ಟು ಯಡಿಯೂರಪ್ಪ ಜಾತಿ ಹೆಸರಲ್ಲಿ ಮತಯಾಚನೆ ಮಾಡಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಸರ್ಕಾರ ಇಲ್ಲ ಎಂಬ ರೀತಿ ಅರಾಜಕತೆ ಇದೆ. ಇದಕ್ಕೆ ಮೂಲ ಕಾರಣ ರಮೇಶ್ ಜಾರಕಿಹೊಳಿ ಎಂದು ತಿಳಿಸಿದ್ದಾರೆ. 

ಅನರ್ಹರು ಅಧಿಕಾರದ ದಾಹಕ್ಕಾಗಿ ಎಂತಹ ಹೇಸಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಮಹಾರಾಷ್ಟ್ರ, ಗುಜರಾತ್ ನಲ್ಲಿ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ತಾಯಿಯಂತ ಪಕ್ಷಕ್ಕೆ ದ್ರೋಹ ಮಾಡಿ, ಬೆನ್ನಿಗೆ ಚೂರಿ ಹಾಕಿದ್ದಾರೆ ಅನರ್ಹ ಶಾಸಕರಿಗೆ ಜನರು ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ. ಭೀಕರ ಪ್ರವಾಹ ಪರಿಸ್ಥಿತಿ ಇದ್ದಾಗ ರಮೇಶ್ ಉಡಾಫೆಯಿಂದ ಬಾಂಬೆಯಲ್ಲಿದ್ದು ಜನರಿಗೆ ವಂಚಿಸಿದ್ದಾರೆ. ಪಕ್ಷಾಂತರಿಗಳು ಅನರ್ಹರು ಇದ್ದಾರೆ, ಅಯೋಗ್ಯರು ಇದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!