'ಬಸನಗೌಡ ಪಾಟೀಲ್ ಯತ್ನಾಳ್ ಮನುಷ್ಯನೇ ಅಲ್ಲ'

Suvarna News   | Asianet News
Published : Feb 26, 2020, 01:09 PM ISTUpdated : Feb 26, 2020, 01:57 PM IST
'ಬಸನಗೌಡ ಪಾಟೀಲ್ ಯತ್ನಾಳ್ ಮನುಷ್ಯನೇ ಅಲ್ಲ'

ಸಾರಾಂಶ

ಯತ್ನಾಳ ಹೇಳಿಕೆ ಖಂಡಿನೀಯ| ದೇಶದ 130 ಕೋಟಿ ಜನರಿಗೆ ಮಾಡಿದ ದ್ರೋಹ| ದೇಶಕ್ಕೆ ಇವರ ಹೋರಾಟದ ಫಲವಾಗಿ ಸ್ವತಂತ್ರ್ಯ ಸಿಕ್ಕಿದೆ| ಹೋರಾಟ‌‌‌ ಮಾಡಿದ ಇಂತವರ ಬಗ್ಗೆ ಯತ್ನಾಳ್ ಒಬ್ಬ ಶಾಸಕನಾಗಿ, ಮಂತ್ರಿಯಾಗಿ ಹೇಯ ಹೇಳಿಕೆ ಕೊಟ್ಟಿದ್ದಾರೆ| 

ಬೀದರ್(ಫೆ.26): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚುಚ್ಚಾಗಿ ಹೇಳಿಕೆ‌ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯತ್ನಾಳ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ ಹೇಳಿಕೆ ಖಂಡಿನೀಯವಾದದ್ದು, ದೇಶದ 130 ಕೋಟಿ ಜನರಿಗೆ ಮಾಡಿದ ದ್ರೋಹವಾಗಿದೆ. ದೇಶಕ್ಕೆ ಇವರ ಹೋರಾಟದ ಫಲವಾಗಿ ಸ್ವತಂತ್ರ್ಯ ಸಿಕ್ಕಿದೆ, ಹೋರಾಟ‌‌‌ ಮಾಡಿದ ಇಂತವರ ಬಗ್ಗೆ ಒಬ್ಬ ಶಾಸಕನಾಗಿ, ಮಂತ್ರಿಯಾಗಿ ಹೇಯ ಹೇಳಿಕೆ ಕೊಟ್ಟಿದ್ದಾರೆ. ಇಡೀ ದೇಶಕ್ಕೆ ದ್ರೋಹ ಮಾಡಿದ್ದಂತಹ ದೇಶ ದ್ರೋಹದ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯನ್ನ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ

ಬಸವನಗೌಡ ಪಾಟೀಲ್ ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರಿಗೆ ಏಕ ವಚನದಲ್ಲಿ‌ ಮಾತಾಡಿ, ಅಪಮಾನ‌ ಮಾಡೋದು ಅಮಾನವೀಯ, ಅತ್ಯಂತ ‌ಲಜ್ಜೆಗೆಟ್ಟದ್ದು ಎಂದು ಕಿಡಿಕಾರಿದ್ದಾರೆ. ಬಿಜೆಪಿಗೆ ಸ್ವಲ್ಪ ಆದರೂ ಗೌರವ ಇದ್ದರೇ, ಶಾಸಕ‌ ಸ್ಥಾನದಿಂದ ಉಚ್ಛಾಟನೆ ‌ಮಾಡಿ ಕಠಿಣ‌ ಕ್ರಮಕೈಗೊಳ್ಳಬೇಕು. ಬಿಜೆಪಿಗೆ ರಾಷ್ಟ್ರದ ಬಗ್ಗೆ ಸ್ವಲ್ಪಾದರೂ ಕಾಳಜಿ ‌ಇದ್ದರೆ, ಸ್ವಾತಂತ್ರ್ಯ ‌ಸೇನಾನಿ ಬಗ್ಗೆ ಈ ರೀತಿ ಮಾತಾಡಿದ್ದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಸವಾಲ್ ಹಾಕಿದ್ದಾರೆ. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

PREV
click me!

Recommended Stories

Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?