ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮನೆಯ ಮೇಲೆ ದಾಳಿ ಅಬಕಾರಿ, ಐಟಿ ಅಧಿಕಾರಿಗಳ ದಾಳಿ|ಕೋಳಿವಾಡರ ಬಳಿ ಎಲೆಕ್ಷನ್ ಗೆ ದುಡ್ಡು ಇಲ್ಲ| ನಾನು ಸ್ನೇಹಿತರ ಬಳಿ ಸಾಲ ಪಡೆದು ಎಲೆಕ್ಷನ್ ಮಾಡುತ್ತಿದ್ದೇನೆ| ಗುಜರಾತ್ ಪೊಲೀಸರನ್ನ ಚುನಾವಣೆಗೆ ಬಳಸಿಕೊಳ್ಳಲಾಗಿದೆ| ಪೊಲೀಸರನ್ನ ಕೋಳಿವಾಡ ಮನೆ ಕಡೆ ಕಳುಹಿಸಿ ಬಿಜೆಪಿ ನಾಯಕರು ಹಣ ಹಂಚಿದ್ದಾರೆ| ಹಣ ಹಂಚೋದಕ್ಕೋಸ್ಕರ ಆಡಳಿತ ಪಕ್ಷ ಪೊಲೀಸರನ್ನ ಡೈವರ್ಟ್ ಮಾಡಿದೆ ಎಂದ ಪ್ರಕಾಶ್ ಕೋಳಿವಾಡ|
ಹಾವೇರಿ[ಡಿ.04]: ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರ ಮನೆಯ ಮೇಲೆ ದಾಳಿ ಮಾಡಿದ ಅಬಕಾರಿ, ಐಟಿ ಅಧಿಕಾರಿಗಳಿಗೆ ಎರಡು ಹಳೆ ಚಪ್ಪಲಿ ಸಿಕ್ಕಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಅವರು ಹೇಳಿದ್ದಾರೆ.
ಲಾಸ್ಟ್ ಮಿನಿಟ್ ಟ್ವಿಸ್ಟ್, ಉಪಚುನಾವಣೆ ಪ್ರಭಾವಿ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆ.ಬಿ.ಕೋಳಿವಾಡ ಅವರ ಮನೆಯ ಮೇಲೆ ದಾಳಿ ಮಾಡಿದ ಅಬಕಾರಿ, ಐಟಿ ಅಧಿಕಾರಿಗಳಿಗೆ ಎರಡು ಹಳೆ ಚಪ್ಪಲಿ ಸಿಕ್ಕಿವೆ. ಅವುಗಳನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಕೋಳಿವಾಡರ ಬಳಿ ಎಲೆಕ್ಷನ್ ಗೆ ದುಡ್ಡು ಇಲ್ಲ.ನಾನು ಸ್ನೇಹಿತರ ಬಳಿ ಸಾಲ ಪಡೆದು ಎಲೆಕ್ಷನ್ ಮಾಡುತ್ತಿದ್ದೇನೆ. ಗುಜರಾತ್ ಪೊಲೀಸರನ್ನ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಪೊಲೀಸರನ್ನ ಕೋಳಿವಾಡ ಮನೆ ಕಡೆ ಕಳುಹಿಸಿ ಬಿಜೆಪಿ ನಾಯಕರು ಹಣ ಹಂಚಿದ್ದಾರೆ. ಹಣ ಹಂಚೋದಕ್ಕೋಸ್ಕರ ಆಡಳಿತ ಪಕ್ಷ ಪೊಲೀಸರನ್ನ ಡೈವರ್ಟ್ ಮಾಡಿದೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಧ್ಯರಾತ್ರಿ ಮಲಗಿದ ಸಂದರ್ಭದಲ್ಲಿ ದಾಳಿ ಮಾಡಿದ್ದಾರೆ. ಆಡಳಿತ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ. ಚುನವಣೆಯಲ್ಲಿ ಕೋಳಿವಾಡ ಗೆಲುವು ಸಾಧಿಸ್ತಾರೆ ಅಂತ ದಾಳಿ ಮಾಡಿಸಿದ್ದಾರೆ. ಬಿಜೆಪಿ ಪ್ರಯೋಜಿತ ದಾಳಿ ನಮಗೆ ವರವಾಗಿದೆ. ದಾಳಿಯಿಂದ ಗೆಲುವಿನ ಅಂತರ ಹೆಚ್ಚಾಗಿದೆ. ಚೈಲ್ಡಿಶ್ ಪಾಲಿಟಿಕ್ಸ್ ನಿಂದ ನಮಗೆ ವರವಾಗಿದೆ. ಕಾರ್ಯಕರ್ತರ ಮನೋಬಲ ಕುಗ್ಗಿಸಲು ಈ ರೀತಿ ದಾಳಿ ಮಾಡಿಸಲಾಗಿದೆ. ಅನುಕಂಪಕ್ಕಾಗಿ ನಾವೇ ಹೇಳಿ ರೇಡ್ ಮಾಡಿಸಿದ್ದೇವೆ ಅನ್ನೋ ರೀತಿ ಸೋಷಿಯಲ್ ಮಿಡಿಯಾದಲ್ಲಿ ಬಿತ್ತರಿಸುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ದಾಳಿಗೆ ಮಾಡಲು ಪ್ರಕಾಶ ಕೋಳಿವಾಡ ಅವರು ಆಹ್ವಾನ ನೀಡಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.