ಮಂಡ್ಯ: 450 ಹೋಂ ಗಾರ್ಡ್, 600 ಸಿವಿಲ್ ಪೊಲೀಸ್ ಸೇರಿ ಹೆಚ್ಚಿನ ಭದ್ರತೆ

By Suvarna NewsFirst Published Dec 4, 2019, 12:51 PM IST
Highlights

ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಸ್ಟರಿಂಗ್ ಕಾರ್ಯ ಭರದಿಂದ ಸಾಗಿದೆ, ಚುನಾವಣಾ ಭದ್ರತೆಗಾಗಿ ಈಗಾಗಲೇ ಹೋಂ ಗಾರ್ಡ್ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

ಮಂಡ್ಯ(ಡಿ.04): ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಸ್ಟರಿಂಗ್ ಕಾರ್ಯ ಭರದಿಂದ ಸಾಗಿದೆ, ಚುನಾವಣಾ ಭದ್ರತೆಗಾಗಿ ಈಗಾಗಲೇ ಹೋಂ ಗಾರ್ಡ್ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

ಕೆ‌. ಆರ್. ಪೇಟೆ ಉಪಚುನಾವಣೆ ಗುರುವಾರ ನಡೆಯಲಿದ್ದು, ನಾಳೆ ಬೆಳಗ್ಗೆ 7 ಗಂಟೆ ಇಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಕೆ. ಆರ್. ಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗುತ್ತಿದೆ. ತಮ್ಮ ಕರ್ತವ್ಯಕ್ಕೆ ನೋಂದಣಿ ಮಾಡಿಕೊಳ್ಳುತ್ತಿರುವ ಸಿಬ್ಬಂದಿ ನಿಯೋಜನೆಗೊಂಡಿರೊ ಮತಗಟ್ಟೆಗಳಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.

ಹುಣಸೂರು ಬೈ ಎಲೆಕ್ಷನ್: ಪ್ರಚಾರದಲ್ಲಿ ಯುವನಾಯಕರದ್ದೇ ಹವಾ!

ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಲು ಸಿದ್ದತೆ ನಡೆಸಲಾಗಿದ್ದು, ಸಿಬ್ಬಂದಿ ಬೂತ್‌ಗಳಿಗೆ ತೆರಳಲು ಸರ್ಕಾರಿ ಬಸ್, ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇವಿಎಂ ತೆಗೆದುಕೊಂಡು ಹೋಗುವುದಕ್ಕೂ ಚುನಾವಣಾ ಆಯೋಗ ಸೂಕ್ತ ವ್ಯವಸ್ಥೆ ಮಾಡಿದೆ.

ಒಟ್ಟು 258ಮತಗಟ್ಟೆ

ಒಟ್ಟು 258 ಮತಗಟ್ಟೆ, 65 ಸೂಕ್ಷಮತಗಟ್ಟೆ, 65 ಅತಿಸೂಕ್ಷ್ಮ ಮತಗಟ್ಟೆ, 2ಪಿಂಕ್, 1ವಿಷೇಶ ಚೇತನ ಮತಗಟ್ಟೆ, 125 ಸಾಮಾನ್ಯ ಮತಗಟ್ಟೆ ಇರಲಿದೆ. ಮತದಾನ ಕಾರ್ಯಕ್ಕೆ ಪ್ರಿಸೈಡಿಂಗ್ ಅಧಿಕಾರಗಳು 290, ಸಹಾಯಕ ಪ್ರಿಸೈಡಿಂಗ್ ಅಧಿಕಾರಗಳು 293, ಮತದಾನ ಅಧಿಕಾರಗಳು 580 ಒಟ್ಟಾರೆ 1163 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರೆದೊಯ್ಯಲು 40ಕೆಎಸ್‌ಆರ್‌ಟಿಸಿ,15ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಮತದಾನ ದಿನದಂದು ಬಿಗಿ ಭದ್ರತೆ

ಮತದಾದನ ದಿನದ ಭದ್ರತೆಗೆ 4 KSRP, 9 DAR, 450 ಹೋಂ ಗಾರ್ಡ್, 600 ಸಿವಿಲ್ ಪೊಲೀಸ್, 3 DYSP, 6 CPI, 18 PSIಗಳ ನೇಮಕ ಮಾಡಲಾಗಿದೆ. 4 ತುಕಡಿ ಕೇಂದ್ರೀಯ ಮೀಸಲು ಪಡೆ ನಿಯೋಜಿಸಲಾಗಿದ್ದು, ಕ್ಷೇತ್ರದಲ್ಲಿ ಒಟ್ಟು 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 71 ಮತಗಟ್ಟೆಗಳಿಗೆ ಭದ್ರತೆಗಾಗಿ ಕೇಂದ್ರೀಯ ಮೀಸಲು ಪಡೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ ವೆಬ್ ಕಾಸ್ಟಿಂಗ್, ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದೆ.

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

click me!