KPCC ಮುಖಂಡ ರಾಜೀನಾಮೆ : ಶೀಘ್ರ ಬಿಜೆಪಿಗೆ

By Kannadaprabha News  |  First Published Dec 2, 2020, 2:21 PM IST

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅನೇಕ ಕೈ ಮುಖಂಡರು ಪಕ್ಷ ತೊರೆಯುತ್ತಿದ್ದಾರೆ. ಇದೀಗ ಪ್ರಮುಖ ಮುಖಂಡರೋರ್ವರು ಪಕ್ಷ ತೊರೆದಿದ್ದಾರೆ.


ಚಿಕ್ಕಬಳ್ಳಾಪುರ (ಡಿ.02): ಕ್ಷೇತ್ರದಲ್ಲಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿದ್ದಾರೆ.

ಈ ಹಿಂದೆ ಸಚಿವ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌ನಲ್ಲಿ ಇದ್ದಾಗ ಅವರ ಶಿಪಾರಸಿನಂತೆ ಎಸ್‌.ಪಿ.ಶ್ರೀನಿವಾಸ್‌ರನ್ನು ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬ್ಲಾಕ್‌ ವತಿಯಿಂದ ಕೆಪಿಸಿಸಿ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಇದೀಗ ಡಾ.ಸುಧಾಕರ್‌ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್‌ನಲ್ಲೇ ಉಳಿದುಕೊಂಡಿದ್ದ ಶ್ರೀನಿವಾಸ್‌, ಈಗ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲು ಅಣಿಯಾಗಿದ್ದಾರೆ.

Tap to resize

Latest Videos

ಕೈ ಕೊಟ್ಟ ಉಪಾಧ್ಯಕ್ಷ : ಬಿಜೆಪಿ ಸೇರ್ಪಡೆ - ಮಾಸ್ಟರ್ ಆಪರೇಷನ್ ...

ಈಗಾಗಲೇ ಹಲವು ದಿನಗಳಿಂದ ಹೈದ್ರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಪರ ಶ್ರೀನಿವಾಸ್‌ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿನ ಕಾಂಗ್ರೆಸ್‌ ಪಕ್ಷದೊಳಗಿನ ಬೆಳವಣಿಗೆಗಳನ್ನು ನೋಡಿ ಬೇಸರವಾಗಿ ನಾನು ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಎಸ್‌.ಪಿ.ಶ್ರೀನಿವಾಸ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

click me!