ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಕೋವಿಡ್‌ ಪಾಸಿಟಿವ್‌

Kannadaprabha News   | Asianet News
Published : Apr 07, 2021, 08:06 AM ISTUpdated : Apr 07, 2021, 08:27 AM IST
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಕೋವಿಡ್‌ ಪಾಸಿಟಿವ್‌

ಸಾರಾಂಶ

KPCC ಮುಖಂಡ ಈಶ್ವರ್ ಖಂಡ್ರೆಗೆ ಇದೀಗ ಕೊರೋನಾ ಮಹಾಮಾರಿ ತಗುಲಿದೆ. ಅವರ ಕೊರೋನಾ ಪರೀಕ್ಷಾ ವರದಿ ಆಸಿಟಿವ್ ಬಂದಿದ್ದು ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. 

ಬೀದರ್‌ (ಏ.07): ಬಸವಕಲ್ಯಾಣ ಉಪಚುನಾವಣೆಯಲ್ಲಿ ಅತ್ಯಂತ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಕೋವಿಡ್‌ ಪಾಸಿಟಿವ್‌ ಧೃಢಪಟ್ಟಿದೆ. 

ಈ ಕುರಿತಂತೆ ಫೇಸ್ಬುಕ್‌ನಲ್ಲಿ ಸ್ವತಃ ಈಶ್ವರ ಖಂಡ್ರೆ ಅವರೇ ಇದನ್ನು ತಿಳಿಸಿದ್ದು, ಸಣ್ಣ ಪ್ರಮಾಣದಲ್ಲಿ ರೋಗಲಕ್ಷಣಗಳು ಕಂಡು ಬಂದಿರುವ ಕಾರಣ ಕೋವಿಡ್‌ 19 ಪರೀಕ್ಷೆ ಮಾಡಿಸಿಕೊಳ್ಳಲಾಗಿ ವರದಿ ಪಾಸಿಟಿವ್‌ಬಂದಿದೆ.

ಬೆಂಗ್ಳೂರಲ್ಲಿ 2ನೇ ಗರಿಷ್ಠ ಕೊರೋನಾ ಕೇಸ್‌ ದಾಖಲು! ...

 ಯಾರೂ ಆತಂಕಪಡಬೇಕಿಲ್ಲ. ಕೋವಿಡ್‌ ನಿಯಮಗಳ ಪ್ರಕಾರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ತಮ್ಮೆಲ್ಲರ ಶುಭ ಹಾರೈಕೆ, ಆಶೀರ್ವಾದದಿಂದ ಆದಷ್ಟುಬೇಗ ಜನಸೇವೆಗೆ ಮರಳುತ್ತೇನೆ  ಎಂದಿರುವ ಖಂಡ್ರೆ, ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸುರಕ್ಷಿತವಾಗಿರಿ ಎಂದು ಈಶ್ವರ ಖಂಡ್ರೆ ಸಲಹೆ ನೀಡಿದ್ದಾರೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ