
ಆನೇಕಲ್(ಏ.07): ರೈತರ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಆಡಳಿತ ಮಂಡಳಿ ಯೋಜನೆಯ ಅನುಷ್ಠಾನಕ್ಕೆ ಬದ್ಧರಾಗಿರಬೇಕೆಂದು ಸಂಸದ ಡಿ.ಕೆ.ಸುರೇಶ್ ಕರೆ ನೀಡಿದ್ದಾರೆ.
ಅವರು ಆನೇಕಲ್‌ನ ಟಿಎಪಿಸಿಎಂಎಸ್ ಸೊಸೈಟಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ರೈತರ ಉತ್ಪನ್ನಗಳ ಶೇಖರಣೆ ಮತ್ತು ಸುಸ್ಥಿರತೆಗಾಗಿ ಕೋಲ್ಡ್ ಸ್ಟೋರೇಜ್ ಅವಶ್ಯಕತೆಯಿದೆ. ಅದಕ್ಕಾಗಿ ವಿಶಾಲವಾದ ಭೂಮಿಯೂ ಬೇಕಿದೆ. ಸರ್ಕಾರಿ ಜಾಗವನ್ನು ಹುಡುಕಿ ಗುರುತಿಸಿ ಗೋದಾಮುಗಳು ಹಾಗೂ ಇತರ ವ್ಯವಸಾಯ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಲು ಪಕ್ಷ ಬೇಧ ಮರೆತು ರೈತರ ಚಿಂತನೆ ಮಾಡಬೇಕು ಎಂದು ಹೇಳಿದರು.
ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಕರಡಿ: 10 ಜನರ ಮೇಲೆ ದಾಳಿ
ಶಾಸಕ ಬಿ.ಶಿವಣ್ಣ, ಅಧ್ಯಕ್ಷ ಪಟೇಲ್ ಮಂಜುನಾಥರೆಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಕೆ.ರಮೇಶ್, ಬಮೂಲ್ ಮಾಜಿ ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ಪಿ.ರಾಜು, ಕವಿತಾ ಸಂಪತ್ ಕುಮಾರ್, ಸೋಮಶೇಖರರೆಡ್ಡಿ, ಎಚ್.ಪಿ.ಸದಾಶಿವ, ಪವನ್‌ಕುಮಾರ್ ಇದ್ದರು.