ಜೆಡಿಎಸ್‌ ಸಹವಾಸಕ್ಕೆ ನಾವು ಹೋಗುವುದಿಲ್ಲ : ನಮ್ಮ ತಂಟೆಗೆ ಬಂದ್ರೆ ಬಿಡಲ್ಲ

By Kannadaprabha NewsFirst Published Dec 14, 2020, 12:08 PM IST
Highlights

ನಾವು ಜೆಡಿಎಸ್ ಸಹವಾಸಕ್ಕೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಮುಖಂಡರೋರ್ವರು ವಾರ್ನಿಂಗ್ ನೀಡಿದ್ದಾರೆ

ಕೆ.ಆರ್‌. ನಗರ (ಡಿ.14):  ಜೆಡಿಎಸ್‌ ಸುದ್ದಿ ಮತ್ತು ಸಹವಾಸಕ್ಕೆ ನಾವು ಹೋಗುವುದಿಲ್ಲ. ಆದರೆ ನಮ್ಮ ಪಕ್ಷದ ತಂಟೆಗೆ ಬಂದು ಅನಗತ್ಯವಾಗಿ ಅಪ ಪ್ರಚಾರ ಮಾಡಿದರೆ ಅಂತಹವರನ್ನು ನಾವು ರಾಜಕೀಯವಾಗಿ ಹಣಿಯದೆ ಬಿಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಎಚ್ಚರಿಸಿದರು.

ಪಟ್ಟಣದ ಕೃಷ್ಣ ಮಂದಿರದಲ್ಲಿ ನಡೆದ ಕಾಂಗ್ರೆಸ್‌ ಜನಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ ನಮ್ಮ ಕುಟುಂಬಕ್ಕೆ ಅಧಿಕಾರ ಇಲ್ಲದಿದ್ದರು ಪರವಾಗಿಲ್ಲ. ಆದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು ಎಂಬ ಮನೋಭಾವನೆ ನಮ್ಮದು ಎಂದರು.

ಆ ನಾಯಕನನ್ನು ಭೇಟಿ ಮಾಡಿದ ಸಾ.ರಾ.ಮಹೇಶ್ : ಏನಿದು ಕುತೂಹಲದ ರಾಜಕೀಯ..? .

ಕೆಲವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲುವುದು ಮತ್ತು ತಮ್ಮ ಪಕ್ಷದ ಮುಖಂಡರಿಗೆ ಅಧಿಕಾರ ಸಿಗುವುದು ಮುಖ್ಯವಲ್ಲ. ಅವರು ಮಾತ್ರ ಸದಾ ಅಧಿಕಾರದಲ್ಲಿ ಇರುವುದು ಬಹಳ ಮುಖ್ಯ. ಶಾಸಕರು ಕೆಲವು ಸಭೆ ಸಮಾರಂಭಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಲವಾರು ನಾಯಕರು ಜೆಡಿಎಸ್‌ ಪಕ್ಷಕ್ಕೆ ಬರುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ತೊರೆದಿರುವುದು ಇಲ್ಲಿ ತಿಂದು ಉಂಡು ಹೋಗಿರುವ ಸ್ವಾರ್ಥಿಗಳೆ ಹೊರತು ಪ್ರಾಮಾಣಿಕರಲ್ಲ ಎಂದು ಅವರು ಹೇಳಿದರು.

ಜೆಡಿಎಸ್‌ ಪಕ್ಷದಲ್ಲಿ ರಾಜಕೀಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅದು ಯಾವಾಗ ಸ್ಫೋಟಗೊಳ್ಳುತ್ತದೋ ಎಂಬುದು ತಿಳಿದಿಲ್ಲ. ನಂತರ ಅದರ ಪರಿಣಾಮವನ್ನು ಶಾಸಕರು ಅನುಭವಿಸುತ್ತಾರೆ ಎಂದರು.

click me!