ಸಿದ್ದಗಂಗಾ ಮಠಕ್ಕೆ ತೆರಳಿ ಆಮಂತ್ರಣ ನೀಡಿದ ಡಿಕೆಶಿ

By Kannadaprabha News  |  First Published Jan 17, 2021, 2:55 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಮಠಕ್ಕೆ ತೆರಳಿ ಶ್ರೀಗಳಿಗೆ ಆಮಂತ್ರಣ ನೀಡಿದ್ದಾರೆ. 


ತುಮಕೂರು (ಜ.17): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳಿಗೆ ಆಮಂತ್ರಣ ನೀಡಿದ್ದಾರೆ. ಕುಟುಂಬ ಕಾರ್ಯಕ್ರಮದ ಆಮಂತ್ರಣ ನೀಡಿದ್ದಾಗಿ ಡಿಕೆಶಿ ತಿಳಿಸಿದರು.

ಈ ವೇಳೆ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  20 ತಾರೀಖು ರೈತರ ಪರವಾಗಿ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ. 
ಫ್ರೀಡಂ ಪಾರ್ಕ್ ಸಂಗುಳ್ಳಿ ರಾಯಣ್ಣ  ಸರ್ಕಲ್ ನಿಂದ ರಾಜಭವನಕ್ಕೆ ಚಲೋ ಹಮ್ಮಿಕೊಂಡಿದ್ದೇವೆ. ಇಡೀ ರಾಷ್ಟ್ರದಲ್ಲಿ ಇಂತ ದೊಡ್ಡ ಹೋರಾಟ ನಡೆದಿರಲಿಲ್ಲ. ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ.  ಕಮಿಟಿ ಮಾಡಿರೋದನ್ನ ರೈತರು ಧಿಕ್ಕರಿಸಿದ್ದಾರೆ.  ನಮಗೆ ಅವಶ್ಯಕತೆ ಇಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ ಎಂದರು. 

Tap to resize

Latest Videos

ಇದು ರೈತ ಸಮುದಾಯಕ್ಕೆ ದೇಶಕ್ಕೆ ಮರಣ ಶಾಸನವಾಗಿದೆ. ಇದನ್ನ ವಾಪಸ್ ಪಡೆಯಬೇಕು ಎಂದು ನಾವೆಲ್ಲಾ ಹೋರಾಟ ಮಾಡುತ್ತೇವೆ. ರಾಜ್ಯದ ಆಡಳಿತದಲ್ಲಿ ಅನ್ಯಾಯಗಳು ನಡೆಯುತ್ತಿದೆ.  ಬೆಲೆ ಏರಿಕೆಗಳು, ಪೆಟ್ರೋಲ್ ಡಿಸೆಲ್ ಪ್ರಾಪರ್ಟಿ ಟ್ಯಾಕ್ಸ್  ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾಡಿರೋದು ಗಮನಸಿದ್ದೇವೆ.  ಸರ್ಕಾರ ಹಾಗೂ ದೇಶದ ಜನರನ್ನ ಗಮನ ಸೆಳೆಯಬೇಕು.  ಸ್ವಂತ ಅಜೆಂಡಾ ಮೇಲೆ ಸರ್ಕಾರಗಳು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. 

ಸೀಡಿ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ: ಡಿ.ಕೆ. ಶಿವಕುಮಾರ್‌

ಸಾರ್ವಜನಿಕರ ಅಭಿಪ್ರಾಯದಂತೆ ಯಾವುದೂ ಕೂಡ ನಡೆಯುತ್ತಿಲ್ಲ. ಅವರು ಏನು ಬೇಕಾದರು ಹೇಳಿಕೊಳ್ಳಲಿ.  ಕಾಂಗ್ರೆಸ್ ಪಕ್ಷವನ್ನ ಏನೂ ಮಾಡೋಕೆ ಆಗುವುದಿಲ್ಲ. 
ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಡಿಕೆಶಿ ಹೇಳಿದರು.  

ಕನ್ನಡ ಕಡೆಗಣನೆ ಪ್ರಸ್ತಾಪ :  ಇನ್ನು ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಷಾ ವೇದಿಕೆಯಲ್ಲಿ ಕನ್ನಡ ಮಾಯ ವಿಚಾರವಾಗಿಯೂ ಮಾತನಾಡಿದ ಡಿಕೆ ಶಿವಕುಮಾರ್ ಪ್ರಾದೇಶಿಕ ಸಂಸ್ಕೃತಿಗಳು ಭಾಷೆ ಯಾವುದೂ ಅವರಿಗೆಲ್ಲಾ ಬೇಕಾಗಿಲ್ಲ.  ನಮ್ಮ ಎಂಪಿಗಳು ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. 

click me!