ದೂರದ ಕುಗ್ರಾಮದಿಂದ ಬಂದಿದ್ದ ಗ್ರಾಮಸ್ಥರು ಬರಿಗೈಯಲ್ಲಿ ವಾಪಸ್‌; ಅಹವಾಲು ಆಲಿಸಲು ಬಾರದ ಸಚಿವ

By Kannadaprabha NewsFirst Published Sep 10, 2022, 12:51 PM IST
Highlights
  • ದೂರದ ಕುಗ್ರಾಮದಿಂದ ಬಂದಿದ್ದ ಗ್ರಾಮಸ್ಥರು ಬರಿಗೈಯಲ್ಲಿ ವಾಪಸ್‌
  • ಅಹವಾಲು ಆಲಿಸಲು ಬಾರದ ಸಚಿವ ಕೋಟ ಶ್ರೀನಿವಾಸ ಪೂಜಾರಿ
  • ಸಮಸ್ಯೆ ಕೇಳಲು ಬಾರದ ಸಚಿವರ ಮೇಲೆ ಗ್ರಾಮಸ್ಥರ ಬೇಸರ
  •  

 ಕಾರವಾರ (ಸೆ.10) ಜಿಲ್ಲಾ ಉಸ್ತುವಾರಿ ಸಚಿವರಿಂದ ಶುಕ್ರವಾರ ಅಹವಾಲು ಸ್ವೀಕಾರ ಕಾರ್ಯಕ್ರಮವಿತ್ತು. ಆದರೆ ಸಚಿವರು ಆಗಮಿಸದ ಕಾರಣ ಸಮಸ್ಯೆ ಹೇಳಿಕೊಳ್ಳಲು ನೂರಾರು ಕಿ.ಮೀ. ದೂರದ ಕುಗ್ರಾಮದಿಂದ ಬಂದಿದ್ದ ಗ್ರಾಮಸ್ಥರು ಬರಿಗೈಯಲ್ಲಿ ವಾಪಸ್‌ ಹೋಗುವಂತಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಶುಕ್ರವಾರ ನಗರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ಬಗ್ಗೆ ಪ್ರವಾಸಪಟ್ಟಿಬಂದಿತ್ತು. ಈ ಮಾಹಿತಿ ಪಡೆದ ಕುಮಟಾ ತಾಲೂಕಿನ ಕುಗ್ರಾಮವಾದ ಮೇದಿನಿಯ 20ಕ್ಕೂ ಅಧಿಕ ನಿವಾಸಿಗಳು ಕಾರವಾರಕ್ಕೆ ತೆರಳಲು ನಿರ್ಧರಿಸಿದ್ದರು.

ಕೂಲಿಕಾರನಾದ ನನ್ನನ್ನೇ 3 ಬಾರಿ ಮಂತ್ರಿ ಮಾಡಿದ್ದು ಬಿಜೆಪಿ: ಕೋಟ ಶ್ರೀನಿವಾಸ ಪೂಜಾರಿ

ಸಾರಿಗೆ ವ್ಯವಸ್ಥೆ ಇಲ್ಲದ ಈ ಕುಗ್ರಾಮದಿಂದ ಶುಕ್ರವಾರ ಬೆಳಗ್ಗೆ 5 ಗಂಟೆಗೆ ಅರಣ್ಯದ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ 8 ಕಿ.ಮೀ. ನಡೆದುಕೊಂಡು ಹುದ್ಲಾರಕೊಡು ಕ್ರಾಸ್‌ಗೆ ಬಂದು ಅಲ್ಲಿಂದ ಬಸ್‌ ಏರಿ ಕುಮಟಾಕ್ಕೆ ಬಂದಿದ್ದರು. ಅಲ್ಲಿಂದ ಬಸ್‌ ಹತ್ತಿ ನೂರಾರು ಕಿ.ಮೀ. ದೂರದ ಜಿಲ್ಲಾ ಕೇಂದ್ರ ಕಾರವಾರ ತಲುಪಿದ್ದರು. ಆದರೆ ನಗರದಲ್ಲಿ ಆಯೋಜಸಿದ್ದ ಸಚಿವರ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. 120-130 ಕಿ.ಮೀ. ದೂರ ಪ್ರಯಾಣ ಮಾಡಿ ಆಗಮಿಸಿದರೆ ಸಚಿವರನ್ನು ಕಾಣಲಾಗದೇ ಇರುವುದರಿಂದ ಬೇಸರ ವ್ಯಕ್ತಪಡಿಸಿದರು. ಸಚಿವ ಕಚೇರಿಗೆ ತೆರಳಿ ಆಪ್ತ ಕಾರ್ಯದರ್ಶಿ ಬಳಿ ಸಮಸ್ಯೆ ಬಗ್ಗೆ ಹೇಳಿಕೊಳ್ಳುವಂತಾಯಿತು. ಕೃಷ್ಣ ಗೌಡ, ಗಣಪ ಗೌಡ, ದೇವರಾಜ ಗೌಡ, ಬೊಮ್ಮ ಗೌಡ, ಈಶ್ವರ ಗೌಡ, ಮಾದು ಗೌಡ, ಮಂಜುನಾಥ ಗೌಡ ಮೊದಲಾದವರು ಇದ್ದರು.

ತುರ್ತಾಗಿ 3 ಕಿ.ಮೀ. ರಸ್ತೆ ಮಾಡಿಕೊಡಿ’

ಕುಮಟಾ ತಾಲೂಕಿನ ಮೇದಿಯ ಗ್ರಾಮದಲ್ಲಿ ಅಂದಿನ ಡಿಸಿ ಡಾ.ಕೆ.ಹರೀಶಕುಮಾರ, ಹಾಲಿ ಡಿಸಿ ಮುಲ್ಲೈ ಮುಗಿಲನ್‌ ಇಬ್ಬರು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಅರಿತಿದ್ದರು. ಆದರೆ ದೊಡ್ಡ ಮಟ್ಟದ ಅನುದಾನ ಬೇಕಾಗಿರುವುದರಿಂದ ಪ್ರಯತ್ನಿಸುವುದಾಗಿ ತಿಳಿಸುತ್ತಿದ್ದಾರೆ. ಗ್ರಾಮಕ್ಕೆ 7-8 ಕಿ.ಮೀ. ರಸ್ತೆ ಅವಶ್ಯಕತೆಯಿದೆ. ಅನುದಾನ ದೊಡ್ಡಮಟ್ಟದಲ್ಲಿ ಬೇಕು ಎಂದು ಪ್ರತಿ ಬಾರಿಯೂ ಗ್ರಾಮದವರ ಮನವಿ ತಿರಸ್ಕರಿಸಲಾಗುತ್ತಿದೆ. 7-8 ಕಿ.ಮೀ. ಬದಲಾಗಿ ತುರ್ತಾಗಿ ಅಗತ್ಯವಿರುವ ಕೇವಲ 3 ಕಿ.ಮೀ. ರಸ್ತೆ ನಿರ್ಮಾಣ ಮಾಡಿಕೊಡಬೇಕಾಗಿದೆ. ಈ ಬಗ್ಗೆ ಸಚಿವರ ಬಳಿ ಮನವಿ ಮಾಡಲು ಬಂದಿದ್ದು, ಸಚಿವರು ಸಿಕ್ಕಿಲ್ಲ. ಅವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿನ ಸಿಬ್ಬಂದಿ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

Uttara Kannada: ವಾಹನಗಳ ಪಾಸಿಂಗ್‌ ಸಮಸ್ಯೆಗೆ ಕಂಗೆಟ್ಟಮಾಲೀಕರು

ದೂರದಿಂದ ಬೆಳಗ್ಗೆ 5 ಗಂಟೆಗೆ ಎದ್ದು ಬಂದರೂ ಸಚಿವರನ್ನು ಕಾಣದೆ ವಾಪಸ್‌್ಸ ಆಗುತ್ತಿರುವುದು ಬೇಸರ ತಂದಿದೆ. ಸಚಿವರು ನಮ್ಮ ಸಮಸ್ಯೆಗೆ ಸ್ಪಂದಿಸಿ ಆದಷ್ಟುಬೇಗ ರಸ್ತೆಗೆ ಅಗತ್ಯವಿರುವ ಅನುದಾನ ನೀಡಿ ಗ್ರಾಮದ ಬಹುದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!