Kanakapura; ತಾಯಿ ಆನೆ ನಿಧ​ನ, ದನದ ಹಿಂಡಿನ ಜೊತೆ ಬಂದ ಅನಾ​ಥ​ವಾದ ಮರಿ ಆನೆ ರಕ್ಷಣೆ

By Kannadaprabha News  |  First Published Sep 10, 2022, 12:16 PM IST

ತಾಯಿ ಆನೆ ನಿಧ​ನವಾಗಿ ಅನಾ​ಥ​ವಾದ ಮರಿ ಆನೆ ದನದ ಹಿಂಡಿನೊಂದಿಗೆ ಪತ್ತೆಯಾಗಿದ್ದು, ಮರಿ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ​ಗಳು ರಕ್ಷಣೆ ಮಾಡಿ ಆರೈ​ಕೆ ಮಾಡಿದ್ದು, ಮುತ್ತತ್ತಿ ಬಳಿಯ ಭೀಮೇಶ್ವರಿ ಅರಣ್ಯ ಕ್ಯಾಂಪ್‌ಗೆ ಶಿಫ್ಟ್ ಮಾಡಲಾಗಿದೆ.


ಕನಕಪುರ (ಸೆ. 10): ತನ್ನ ತಾಯಿ ಆನೆಯ ನಿಧನದಿಂದ ಅನಾಥವಾಗಿ ಕಾಡಿನಲ್ಲಿ ದನಗಳ ಹಿಂಡಿನಲ್ಲಿದ್ದ ಮುದ್ದಾದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಆಶ್ರಯಕ್ಕೆ ತಂದು ಆರೈಕೆ ಮಾಡುತ್ತಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು ಒಂದೂವರೆ ತಿಂಗಳ ವಯಸ್ಸಿನ ಮರಿ ಯಾಗಿದ್ದು ಕಾವೇರಿ ವನ್ಯಜೀವಿ ವಲಯದ ಧಾಮಕ್ಕೆ ಹೊಂದಿಕೊಂಡಂತೆ ಇರುವ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಓಡಾಟ ಸಾಮಾನ್ಯವಾಗಿದ್ದು, ಆಗ್ಗಾಗ್ಗೆ ಆನೆಗಳ ಗುಂಪು ಊರಿನತ್ತ ಬಂದು ರೈತರ ಬೆಳೆಗಳನ್ನು ನಾಶಮಾಡಿ ಹೋಗುತ್ತಿತ್ತು. ಹೀಗೆ ಗುಂಪಿನಲ್ಲಿ ಓಡಾಡಿಕೊಂಡಿದ್ದ ಆನೆಗಳ ಪೈಕಿ ಒಂದಾನೆ ಈಚೆಗಷ್ಟೇ ಮರಿಯೊಂದಕ್ಕೆ ಜನ್ಮ ನೀಡಿದ್ದು ನಂತರದ ದಿನಗಳಲ್ಲಿ ಆ ಹೆಣ್ಣಾನೆ ಕುದುರೆ ದಾರಿ ಎಂಬಲ್ಲಿ ಕಂದಕಕ್ಕೆ ಬಿದ್ದು ಮೃತಪಟ್ಟಿತ್ತು ಎನ್ನಲಾಗಿದೆ. ತನ್ನ ತಾಯಿ ಸಾವಿನಿಂದ ವಿಚಲಿತಗೊಂಡ ಮರಿಯು ಒಂದೆರಡು ದಿನ ಕಾಡಿನಲ್ಲೇ ಕಾಲ ಕಳೆದಿದ್ದು ಕನಕಪುರ ತಾಲೂಕಿನ ಸೋಲಿಗೆರೆ, ಪೋಡನಗುಂದಿ ಭಾಗಸ್ಥರು ಕಾಡಿಗೆ ಮೇಯಲು ಬಿಟ್ಟಿದ್ದ ದನಗಳ ಜೊತೆ ಮರಿ ಆನೆಯೂ ಇರುವುದನ್ನು ಗಮನಿಸಿದ್ದಾರೆ.

 ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಮರಿ ಆನೆಯನ್ನು ರಕ್ಷಣೆ ಮಾಡಿ ಬೇರೆ ಆನೆಗಳ ಗುಂಪಿನ ಜೊತೆ ಬಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇತರೆ ಆನೆಗಳು ಈ ಮರಿಯನ್ನು ಜೊತೆಗೆ ಸೇರಿಸಿಕೊಂಡಿಲ್ಲ. ಆದ್ದರಿಂದ ಇದನ್ನು ಸಾತನೂರು ಬಳಿಯ ಭೂಹಳ್ಳಿ ಅರಣ್ಯ ಕ್ಯಾಂಪ್‌ನಲ್ಲಿ ಭೂಹಳ್ಳಿ ಪಶು ವೈದ್ಯಾಧಿಕಾರಿ ಗಿರೀಶ್‌ ನೇತೃತ್ವದಲ್ಲಿ ಪಾಲನೆ ಮಾಡಲಾಗುತ್ತಿದೆ.

Tap to resize

Latest Videos

 

 Viral Video: ದೇಹ ಉಜ್ಜಿಕೊಳ್ಳಲು ಕಾರನ್ನೇ ಹಾಳುಮಾಡಿದ ಆನೆ..! ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..

ಆನೆ ಮರಿ ಹಸುವಿನ ಹಾಲು ಕುಡಿದು ಆರೋಗ್ಯವಾಗಿದೆ. ಡಿಸಿಎಫ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಇನ್ನೊಂದು ವಾರದಲ್ಲಿ ಮುತ್ತತ್ತಿ ಬಳಿಯ ಭೀಮೇಶ್ವರಿ ಅರಣ್ಯ ಕ್ಯಾಂಪಿಗೆ ಬಿಡುತ್ತೇವೆ ಎಂದು ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯಾಧಿಕಾರಿ ದೇವರಾಜು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸೇನಾ ಕಂಟೋನ್ಮೆಂಟ್‌ ಆಸ್ಪತ್ರೆಗೆ ನುಗ್ಗಿದ ಆನೆಗಳ ಹಿಂಡು: Viral Video ನೋಡಿ..

ಭೀಮೇಶ್ವರಿ ಕ್ಯಾಂಪ್‌ನಲ್ಲಿ ಆನೆ ಮರಿಗೆ ಆರೈಕೆ
ಹಲಗೂರು: ಕನಕಪುರ ತಾಲೂಕು ಭೂಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡ ಒಂದೂವರೆ ತಿಂಗಳ ಆನೆ ಮರಿಯನ್ನು ಹಲಗೂರಿನ ಭೀಮೇಶ್ವರಿ ಕ್ಯಾಂಪ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ. ತಾಯಿ ಆನೆಯಿಂದ ಬೇರ್ಪಟ್ಟಮರಿ ಆನೆ ದನಗಳ ಜೊತೆ ಗ್ರಾಮಕ್ಕೆ ಆಗಮಿಸಿದೆ. ಇದನ್ನು ಗಮನಿಸಿದ ಭೂಹಳ್ಳಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಅಧಿಕಾರಿಗಳು ಕೂಡ ಮತ್ತೆ ತಾಯಿ ಆನೆ ಜೊತೆ ಸೇರಿಸಲು ಮುಂದಾಗಿದ್ದರೂ ಸಹ ಕಾಡಿನಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ಅಥವಾ ತಾಯಿ ಆನೆ ಸಾವನ್ನಪ್ಪಿರುವ ಶಂಕೆ ಹಿನ್ನೆಲೆಯಲ್ಲಿ ಮರಿ ಆನೆಯನ್ನು ಮುತ್ತತ್ತಿ ಬಳಿ ಇರುವ ಭೀಮೇಶ್ವರಿ ಕ್ಯಾಂಪ್‌ಗೆ ಶುಕ್ರವಾರ ಸಂಜೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

click me!