ಕೊಪ್ಪಳ: ಅಧಿಕಾರಿಗಳ ಕಾರ್ಯಾಚರಣೆ, ಎರಡು ದಿನಗಳಲ್ಲಿ ತಪ್ಪಿದ ಐದು ಬಾಲ್ಯವಿವಾಹ!

Kannadaprabha News   | Kannada Prabha
Published : Mar 28, 2026, 07:32 AM IST
 Koppal Officials Prevent Five Child Marriages in Two Days

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ, ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ ಯಲಬುರ್ಗಾ ಮತ್ತು ಕಾರಟಗಿ ತಾಲೂಕುಗಳಲ್ಲಿ ನಡೆಯಲಿದ್ದ ಐದು ಬಾಲ್ಯ ವಿವಾಹಗಳನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಯಶಸ್ವಿಯಾಗಿ ತಡೆಯಲಾಗಿದೆ.

 ಕೊಪ್ಪಳ (ಮಾ.28): ಕೇವಲ ಎರಡು ದಿನಗಳ ಅಂತರದಲ್ಲಿ ಐದು ಬಾಲ್ಯ ವಿವಾಹವಾಗಬಹುದಾಗಿದ್ದನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ಮಾಡಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಹಾಯವಾಣಿ ಸಂಖ್ಯೆ ೧೦೯೮ ಕ್ಕೆ ಕರೆ ಮಾಡಿ, ಬಾಲಕೀಯರನ್ನು ಮದುವೆ ಮಾಡಲು ನಡೆಸಿದ ಸಿದ್ಧತೆಯ ಕುರಿತು ಮಾಹಿತಿ ನೀಡಿದ್ದನ್ನು ಆಧರಿಸಿ ಮಕ್ಕಳ ರಕ್ಷಣಾ ಘಟಕ ಕಾರ್ಯಾಚರಣೆ ನಡೆಸಿ ಐದು ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಬಾಲಕಿಯರಿಗೆ, ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಬ್ಬ ಬಾಲಕಿಗೆ, ಕಾರಟಗಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ವಿವಾಹ ಸಿದ್ಧತೆ ನಡೆಯುತ್ತಿದೆ, ರಕ್ಷಣೆ ಮಾಡಿ ಎಂಬ ಮಾಹಿತಿ ಆಧರಿಸಿ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ, ಅಕ್ಕಪಡೆ ಮತ್ತು ಪೊಲೀಸ್ ಸಿಬ್ಬಂದಿ, ವಲಯ ಮೇಲ್ವಿಚಾರಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯ, ಪುರಸಭೆಯ ಸಿಬ್ಬಂದಿಗಳ ಸಹಯೋಗದೊಂದಿಗೆ ಐದು ಜನರನ್ನು ರಕ್ಷಿಸಿ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಸವರಾಜ ಗುಳೇದ್, ಅಮರಮ್ಮ ಹಿರೇಮಠ, ಬಸಮ್ಮ ಎಸ್, ಮೇಲ್ವಿಚಾರಕಿ ಶ್ರೀದೇವಿ, ಸವಿತಾ, ಅಕ್ಕಪಡೆಯ ಸಾವಿತ್ರಿ ಪಿ.ಸಿ.ಯಲಮ್ಮ, ಭಾಗ್ಯ, ವಾಹನ ಚಾಲಕರು ಶರಣಪ್ಪ ಭಾಗವಹಿಸಿದ್ದರು.

ಕೋಟ್

ಜಿಲ್ಲೆಯಲ್ಲಿ ನಡೆಯಬಹುದಾಗಿದ್ದ ಐದು ಬಾಲ್ಯವಿವಾಹಗಳನ್ನು ಖಚಿತ ಮಾಹಿತಿ ಆಧಾರದ ಮೇಲೆ ನಮ್ಮ ಸಿಬ್ಬಂದಿ ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೊಪ್ಪಳ

PREV
Read more Articles on
click me!

Recommended Stories

ಜನರ ಜೀವ ಮುಖ್ಯವೋ? ಐಪಿಎಲ್‌ ಮುಖ್ಯವೋ? ಉಚಿತ ವಿಐಪಿ ಟಿಕೆಟ್‌ ಕೇಳಿದ ಶಾಸಕರಿಗೆ ಮಾತಲ್ಲೇ ಬೆಂಡೆತ್ತಿದ ನಿಖಿಲ್
ಬಳ್ಳಾರಿ: ಮೂರು ತಿಂಗಳಲ್ಲಿ 4300 ಮಂದಿಗೆ ಬೀದಿ ನಾಯಿ ಕಡಿತ! ಚಿಕಿತ್ಸೆ ಫಲಿಸದೇ ಇಬ್ಬರ ಸಾವು