'ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು ಹಗಲು ಕನಸು'

By Kannadaprabha News  |  First Published Jun 23, 2021, 1:41 PM IST

* ಜನರ ತೀರ್ಪು ಬಂದಾಗ ಅಧಿಕಾರ
* ಮತದಾರರು ಬಹಳ ಜಾಣರಿದ್ದು, ಯಾರನ್ನು ಗೆಲ್ಲಿಸಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ
* ಡಿಕೆಶಿ ಕೂಡ ಹಲವು ದಿನಗಳಿಂದ ಸಿಎಂ ಖುರ್ಚಿಗಾಗಿ ಕಾಯ್ತಾ ಇದ್ದಾರೆ 


ಕೊಪ್ಪಳ(ಜೂ.23): ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಹಗಲು ಕನಸನ್ನು ಅವರ ಬೆಂಬಲಿಗರು ಕಾಣುತ್ತಿದ್ದಾರೆಎಂದು ಸಂಸದ ಕರಡಿ ಸಂಗಣ್ಣ ಲೇವಡಿ ಮಾಡಿದ್ದಾರೆ. 

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ರೀತಿಯಲ್ಲಿ ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಇದು ಕನಸು ಕಾಣುವುದಲ್ಲ ಜನರ ತೀರ್ಪು ಬಂದಾಗ ಅಧಿಕಾರ ಸಿಗುತ್ತದೆ. ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿ ಇನ್ನೂ 2 ವರ್ಷ ಇದೆ. ಆದರೆ, ಸಿದ್ದರಾಮಯ್ಯನವರ ಬೆಂಬಲಿಗರು ಈಗಲೇ ಹಗಲುಗನಸು ಕಾಣುತ್ತಿರುವುದನ್ನು ಗಮನಿಸಿದರೆ ನಗು ಬರುತ್ತಿದೆ. ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳಿದರೆ ಅವರು ಆಗುವುದಿಲ್ಲ. ಜನರ ಮನಸ್ಸಿನಲ್ಲಿ ಮತ್ತು ಬಹುಮತ ಪಡೆದ ಪಕ್ಷದ ನಿರ್ಣಯದ ಮೇಲೆ ಮುಖ್ಯಮಂತ್ರಿ ಸ್ಥಾನ ಲಭಿಸುತ್ತದೆ ಎಂದರು.

Latest Videos

undefined

ಕೊಪ್ಪಳದಲ್ಲಿ ಆಪರೇಷನ್ ಹಸ್ತ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಜಮೀರ್

ಮತದಾರರು ಬಹಳ ಜಾಣರಿದ್ದು, ಯಾರನ್ನು ಗೆಲ್ಲಿಸಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸಿಎಂ ಪ್ರಶ್ನೆ ಈಗ ಉದ್ಭವಿಸುವುದಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ಉಸ್ತುವಾರಿಗಳೇ ಹೇಳಿದ್ದಾರೆ. ಇನ್ನೊಂದಡೆ ಡಿ.ಕೆ. ಶಿವಕುಮಾರ್‌ ಹಲವು ದಿನಗಳಿಂದ ಸಿಎಂ ಖುರ್ಚಿಗಾಗಿ ಕಾಯ್ತಾ ಇದ್ದಾರೆ ಎಂದರು.

ಆಡಳಿತ ಪಕ್ಷದ ಶಾಸಕರು ಕಿಟ್‌ಗಳನ್ನು ವಿತರಿಸುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಕಿಟ್‌ ಎಂದ ಸಿದ್ದರಾಮಯ್ಯ ಓರ್ವ ಮಾಜಿ ಸಿಎಂ ಆಗಿ ಇಂತಹ ಮಾತುಗಳನ್ನು ಆಡಬಾರದು. ಈತ ತಾವು ತಮ್ಮ ಮನೆಯ ಹಣ ಖರ್ಚು ಮಾಡಿ ಇಂತಹ ಕಿಟ್‌ಗಳನ್ನು ವಿತರಿಸುತ್ತಾರೆಯೇ? ಎಂದು ಪ್ರಶ್ನಿಸಿದರು. ಮಾಜಿ ಸಚಿವ ಬಸವರಾಜ ರಾಯರಡ್ಡಿ ಒಬ್ಬರೇ ಹಾನೆಸ್ವ್‌ ಎಂದಿದ್ದಾರೆ. ಹಿಂದೆ ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಅವರ ಸೋಲಿಗೆ ಇದೇ ರಾಯರಡ್ಡಿಯೇ ಕಾರಣ ಎನ್ನುವುದು ಗೊತ್ತಿಲ್ಲವೇ? ಎಂದರು.
 

click me!