ಗಂಗಾವತಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಗಣವೇಷದಲ್ಲಿ ಹೆಜ್ಜೆ ಹಾಕಿದ ಶಾಸಕ ಜನಾರ್ದನ ರೆಡ್ಡಿ

Published : Nov 01, 2026, 07:46 PM IST
Janardhana Reddy

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷದ ಅಂಗವಾಗಿ ಗಂಗಾವತಿಯಲ್ಲಿ ಅದ್ಧೂರಿ ಪಥಸಂಚಲನ ನಡೆಯಿತು. ಎರಡು ಮಾರ್ಗಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ 1500ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡರು.

ರಾಮಮೂರ್ತಿ ನವಲಿ

ಗಂಗಾವತಿ (ನ.01): ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ನಗರದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ನಗರದ ಶ್ರೀ ಕೊಟ್ಟೂರೇಶ್ವರ ಶಾಲಾ ಮೈದಾನದಿಂದ ಪ್ರಾರಂಭಗೊಂಡು ಎರಡು ಮಾರ್ಗದಲ್ಲಿ ಗಣವೇಷದೊಂದಿಗೆ 1500ಕ್ಕೂ ಹೆಚ್ಚು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಗಣವೇಷದೊಂದಿಗೆ ಭಾಗವಹಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ 101 ವರ್ಷಕ್ಕೆ ಕಾಲಿಡುತ್ತಿರುವ ಮತ್ತು ಸಂಘ ಪ್ರಾರಂಭವಾದ ವಿಜಯ ದಶಮಿಯ ಅಂಗವಾಗಿ ಗಂಗಾವತಿ ನಗರದಲ್ಲಿ ಘದ ಶತಾಬ್ಧಿ ಹಿನ್ನೆಲೆಯಲ್ಲಿ ಪಥ ಸಂಚಲನ ನಡೆದಿದ್ದು. ಈಗ 101ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.

ಸಂಜೆ 5 ಕ್ಕೆ ಆಗಮಿಸುವ ಸ್ವಯಂಸೇವಕರು ಎರಡು ಭಾಗಗಳಾಗಿ ಮುಂದೆ ಸಾಗಿದರು. ಇದಕ್ಕಿಂತ ಪೂರ್ವದಲ್ಲಿ ಭಾರತ ಮಾತೇ ಮತ್ತು ಆರ್‌ಎಸ್‌ಎಸ್ ಸಂಸ್ಥಾಪಕರ ಭಾವಚಿತ್ರಗಳಿಗೆ ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಪುಷ್ಪಗುಚ್ಚ ಸಮರ್ಪಿಸಿದರು. ಗಣ ವೇಷದಾರಿಗಳು ವಾಲ್ಮೀಕಿ ವೃತ್ತದಿಂದ ಇನ್ನೊಂದು ಗಣವೇಷಧಾರಿಗಳು ಪಂಪಾನಗರ ಮಾರ್ಗವಾಗಿ ಮಹಾತ್ಮಗಾಂಧಿ ವೃತ್ತದಲ್ಲಿ ಸಂಗಮಗೊಂಡರು.

ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಮುನವಳ್ಳಿ ಭಾಗಿ

ಪಥ ಸಂಚಲನದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾಗವಹಿಸಿದ್ದರು. ನಗರದ ಪ್ರಮುಖ ವೃತ್ತಗಳ ಮೂಲಕ ಗಾಂಧಿ ವೃತ್ತಕ್ಕೆ ತೆರಳಿದರು. ಗಾಂಧಿ ವೃತ್ತದಲ್ಲಿ ಗಣವೇಷಧಾರಿಗಳು ಆಗಮಿಸುತ್ತಿದ್ದಂತಯೇ ನಾಗರಿಕರು, ಮಹಿಳೆಯರು ಪುಷ್ಪಗುಚ್ಚ ಸಮರ್ಪಿಸಿದರು. ಈ ವೇಳೆ ಕುಮಾರಸ್ವಾಮೀಜಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಆರ್‌ಎಸ್‌ಎಸ್ ಪ್ರಮುಖರಾದ ವೀಠಲ್ ಜೀ, ಸಂದೀಪ್, ಸಂತೋಷ, ಕೆಲೋಜಿ, ವಿರೇಶ, ಹರೀಶ ಕುಲಕರ್ಣಿ, ವಾಸುದೇವ ನವಲಿ, ಬದರಿನಾಥ ಆದಾಪುರ, ನೀಲಕಂಠ ನಾಗಶೆಟ್ಟಿ, ಶರದಕುಮಾರ ದಂಡಿನ್, ಅಭಯ್ ನವಲಿ, ತಿಪ್ಪೇರುದ್ರಸ್ವಾಮಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಬಿಗಿ ಭದ್ರತೆ

ಅತಿ ಸೂಕ್ಷ್ಮ ಪ್ರದೇಶ ಎಂದೇ ಕರೆಯಲಾಗುತ್ತಿದ್ದ ಗಂಗಾವತಿ ನಗರದಲ್ಲಿ ಪಥ ಸಂಚಲನ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಮೂವರು ಡಿವೈಎಸ್ಪಿ ಸೇರಿದಂತೆ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ನಗರದ ಜಾಮೀಯಾ ಮಸೀದಿ ಮುಂಭಾಗದಲ್ಲಿ ಹಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

PREV
Read more Articles on
click me!

Recommended Stories

HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!
'ಯಾರೀ ಅದು ಕಮಿಷನರ್?' ಈ ಕುಮಾರಸ್ವಾಮಿಯನ್ನ ಟಚ್ ಮಾಡೋಕೆ ಆಗಲ್ಲ-HDK ವಾಗ್ದಾಳಿ