ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಒಡವೆ ಬ್ಯಾಗ್ ರಾಬರಿ!

Published : Mar 12, 2026, 03:25 PM IST
Koppal Gold Robbery

ಸಾರಾಂಶ

ಕೊಪ್ಪಳ ಹೊರವಲಯದಲ್ಲಿ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಿಂದ 90 ಲಕ್ಷ ಮೌಲ್ಯದ ಬಂಗಾರದ ಚೀಲವನ್ನು ನಾಲ್ವರು ಖದೀಮರು ದರೋಡೆ ಮಾಡಿದ್ದಾರೆ. ಊಟಕ್ಕೆ ನಿಲ್ಲಿಸಿದ್ದ ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕರಿಂದ ಈ ಕಳ್ಳತನ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿನ್ನದ ಬೆಲೆ ಏರುತ್ತಿರುವ ಸಮಯದಲ್ಲಿ ಬಂಗಾರದ ದರೋಡೆಗಳು ಕೂಡ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕೊಪ್ಪಳ ಜಿಲ್ಲೆಯ ಹೊರವಲಯದಲ್ಲಿ ನಡೆದ ಬಂಗಾರದ ದರೋಡೆ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮಂತ್ರಾಲಯದಿಂದ ಮಂಗಳೂರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ 90 ಲಕ್ಷ ಒಡವೆ ಇರೋ ಬಂಗಾರದ ಚೀಲವನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದ್ದು, ನಾಲ್ಕು ಜನರಿಂದ ಈ ದರೋಡೆ ನಡೆದಿದೆ. ಇದೀಗ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸ್ಲೀಪರ್ ಕೋಚ್ ಬಸ್‌ನಲ್ಲೇ ಬಂದ ಮಾಸ್ಟರ್ ಮೈಂಡ್

ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿ ಕೊಪ್ಪಳಕ್ಕೆ ಬಂದಿದ್ದಾನೆ. ಅದೇ ವೇಳೆ ಇನ್ನೂ ಮೂವರು ಖದೀಮರು ಬೇರೆ ವಾಹನದಲ್ಲಿ ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಒಟ್ಟು ನಾಲ್ವರು ಸೇರಿಕೊಂಡು ಈ ದರೋಡೆ ಕೃತ್ಯವನ್ನು ಸಂಚು ರೂಪಿಸಿ ನಡೆಸಿದ್ದಾರೆ.

ತವಾ ಪಂಜಾಬ್ ಹೋಟೆಲ್ ಮುಂದೆ ನಡೆದ ದರೋಡೆ

ಈ ದರೋಡೆ ಘಟನೆ Tawa Punjab Hotel ಮುಂಭಾಗದಲ್ಲಿ ನಡೆದಿದೆ. ರಾ.ಹೆ 63 ಕ್ಕೆ ಹೊಂದಿಕೊಂಡಂತೆ ಇರುವ ತವ ಪಂಜಾಬ್ ಹೊಟೇಲ್. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಕೊಪ್ಪಳ ಹೊರವಲಯದಲ್ಲಿ ಊಟಕ್ಕಾಗಿ ನಿಲ್ಲಿಸಲಾಗಿತ್ತು. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. 

ಸಿಸಿ ಕ್ಯಾಮರಾದಲ್ಲಿ ಸೆರೆಗೊಂಡ ದೃಶ್ಯ

ಹೋಟೆಲ್ ಮುಂಭಾಗದಲ್ಲಿದ್ದ ಸಿಸಿ ಕ್ಯಾಮರದಲ್ಲಿ ಈ ದರೋಡೆ ಕೃತ್ಯದ ಸಂಪೂರ್ಣ ದೃಶ್ಯ ದಾಖಲಾಗಿದ್ದು, ಆರೋಪಿಗಳು ಹೇಗೆ ಬಸ್‌ಗೆ ಹತ್ತಿ ಬಂಗಾರದ ಚೀಲವನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರದ್ದೇ ಆಗ ಸಿಗ್ನಲ್‌ಗಳು ಒಬ್ಬೊಬ್ಬರಂತೆ ಬಂದು ಕಾಯುತ್ತಿರುವುದು ಕಂಡುಬಂದಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಮ್ಮದ್ ಮತ್ತು ಇರ್ಷಾದ್ ಎಂಬವರು ಮಂತ್ರಾಲಯದಿಂದ ಮಂಗಳೂರಿಗೆ ಬಂಗಾರದೊಂದಿಗೆ ಪ್ರಯಾಣಿಸುತ್ತಿದ್ದರು. ಬಸ್ ಊಟಕ್ಕಾಗಿ ನಿಂತಿದ್ದ ವೇಳೆ ಅವರು ಮಲಗಿದ್ದ ಕಾರಣ ಖದೀಮರು ಈ ಅವಕಾಶವನ್ನು ಬಳಸಿಕೊಂಡು ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಪೊಲೀಸರ ಹುಡುಕಾಟ

ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಬಸ್ ಪ್ರಯಾಣಿಕರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದರೋಡೆ ನಡೆಸಿದ ನಾಲ್ವರು ಖದೀಮರು ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಟ್ಟಾರೆ, ದಿನದ ಬೆಳಕಿನಲ್ಲಿ ನಡೆದ ಈ ಬಂಗಾರದ ದರೋಡೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲೇ ಭಾರೀ ಸಂಚಲನ ಮೂಡಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಸುಬ್ರಹ್ಮಣ್ಯ-ಕುಮಾರ ಪರ್ವತ ಚಾರಣ ಬೆಳಗ್ಗೆ 5 ಗಂಟೆಗೆ ಆರಂಭಿಸಲು ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯ, ಸಚಿವರ ಭರವಸೆ
ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು?