ಗಣೇಶನ ದೀಪ ಕಾಯುತ್ತಿದ್ದ ರಫೀಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸಂತೋಷ್!!

Published : Sep 21, 2026, 02:16 PM IST
Ganesha

ಸಾರಾಂಶ

ಗಂಗಾವತಿಯ ಮುಜಾವರ ಕ್ಯಾಂಪಿನಲ್ಲಿ ಗಣೇಶನ ದೀಪ ಕಾಯುತ್ತಿದ್ದ 13 ವರ್ಷದ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕೊಪ್ಪಳ: ಗಣೇಶ ಮೂರ್ತಿಯ ಮುಂದೆ ಹಚ್ಚಿರುವ ದೀಪವನ್ನು ಕಾಯುವ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊ*ಲೆಗೆ ಯತ್ನಿಸಿದ ಘಟನೆ ನಗರದ ಮುಜಾವರ ಕ್ಯಾಂಪಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮುಜಾವರ ಕ್ಯಾಂಪಿನ ಮಹ್ಮದ್ ರಿಯಾಜ್ ರಫೀಕ್ ಸಾಬ (13) ಎನ್ನುವ ಬಾಲಕ ತೀವ್ರ ಗಾಯಗೊಂಡಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಗಂಗಾವತಿಯಲ್ಲಿ ನಡೆದಿದ್ದೇನು?

ಮುಜಾವರ ಕ್ಯಾಂಪಿನಲ್ಲಿ ಯುವಕರು ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಗಣೇಶನ ಮುಂದೆ ದೀಪವನ್ನು ಕಾಯುವುದಕ್ಕಾಗಿ ಅದೇ ಕ್ಯಾಂಪಿನ ಮಹ್ಮದ್ ರಿಯಾಜ್ ಎನ್ನುವ ಬಾಲಕನನ್ನು ನೇಮಿಸಿದ್ದರು. ಇದೇ ಸಂದರ್ಭದಲ್ಲಿ ಹಮಾಲರ ಕಾಲನಿಯ ಸಂತೋಷ (20) ಎನ್ನುವ ಯುವಕ ರಿಯಾಜ್ ಮೇಲೆ ಪಟ್ರೋಲ್‌ ಸುರಿದು ಊದಿನಕಡ್ಡಿಯಿಂದ ಸುಟ್ಟಿದ್ದಲ್ಲದೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ತೀವ್ರ ಗಾಯಗೊಂಡಿದ್ದ ಮಹ್ಮದ್ ರಿಯಾಜ್‌ನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತೋಷ ಎನ್ನುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ ವಿಸರ್ಜನೆ

ಮುಜಾವರ ಕ್ಯಾಂಪಿನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಘಟನೆ ನಡೆದ ಮಧ್ಯರಾತ್ರಿಯೇ ವಿಸರ್ಜಿಸಿದ್ದಾರೆ. ನಗರದಲ್ಲಿ 150ಕ್ಕೂ ಹೆಚ್ಚು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು, ಈಗಾಗಲೇ 60ಕ್ಕೂ ಹೆಚ್ಚು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲಾಗಿದೆ. ಮುಜಾವರ ಕ್ಯಾಂಪಿನಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಕೃಷಿ ಮಾಡುತ್ತಿದ್ದ 39 ವರ್ಷದ ಯುವಕನಿಗೆ ಸಿಗದ ಕನ್ಯೆ?: ಮನನೊಂದು ವಿಷ ಸೇವಿಸಿ ಆತ್ಮ*ತ್ಯೆ!

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಪುರುಷರಿಗೆ ಉಚಿತ ರೈಲ್ವೆ ಪ್ರಯಾಣ ಸೌಲಭ್ಯ ನೀಡಿ: ಮೋದಿಗೆ ಸಚಿವ ರಾಯರಡ್ಡಿ ಸವಾಲ್

PREV
Read more Articles on
click me!

Recommended Stories

'ಕೈಲಾಗದವ ಮೈ ಪರ್ಚೊಂಡ' ಅಂತಾರಲ್ಲ, ಹಾಗಾಯ್ತು ಇವರ ಕಥೆ: ನಟ ಅನಂತ್​ ನಾಗ್​ ತಿರುಗೇಟು
ನರಸಿಂಹರಾಜಪುರ-ಹಳೇ ಚಿಕ್ಕಮಗಳೂರು ರಸ್ತೆ ಸಂಪರ್ಕ ಯಾವಾಗ? 35 km ಪ್ರಯಾಣ ದೂರ ಉಳಿತಾಯ