Koppal Floods: ಮಳೆ ಹಾನಿ: ಡಿಸಿ ಸಂಚಾರ, ಪರಿಶೀಲನೆ

By Kannadaprabha News  |  First Published Oct 23, 2022, 11:36 AM IST
  • ಮಳೆ ಹಾನಿ: ಡಿಸಿ ಸಂಚಾರ, ಪರಿಶೀಲನೆ
  • ಕಿಡದಾಳ, ಹಲಗೇರಿ, ಜಬ್ಬಲಗುಡ್ಡ, ಸುತ್ತುಲಿನ ಗ್ರಾಮಗಳಿಗೆ ಭೇಟಿ
  • ಹಿರೇಹಳ್ಳದ ಸಮಸ್ಯೆ: ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ

ಕೊಪ್ಪಳ (ಅ.23) : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾದ ಹಾನಿಯ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ಶನಿವಾರ ತಾಲೂಕಿನ ಕಿಡದಾಳ, ಹಲಗೇರಿ, ಜಬ್ಬಲಗುಡ್ಡ ಹಾಗೂ ಸುತ್ತುಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮತ್ತು ಬೆಳೆ ಹಾನಿಯ ವೀಕ್ಷಣೆ ನಡೆಸಿದರು.

ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಶಕ್ತಿವೃದ್ಧಿ: ಬಾವಾಜಿ

Tap to resize

Latest Videos

ಬಳಿಕ ಅವರು, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿರುವ ಹಿರೇಹಳ್ಳ ಜಲಾಶಯದಿಂದ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡುವುದರಿಂದ ಈ ನೀರು ಕೆಳಮಟ್ಟಕ್ಕೆ ಹರಿದು ಹೋಗುವ ಸಂದರ್ಭದಲ್ಲಿ ಪಕ್ಕದ ಜಮೀನುಗಳಿಗೆ ನುಗ್ಗಿ ಅಲ್ಲಿರುವ ಬೆಳೆ ಹಾನಿಯಾಗುತ್ತಿದೆ. ಈ ಕೂಡಲೇ ಹಿರೇಹಳ್ಳ ಯೋಜನೆಯ ಬಗ್ಗೆ ಜಂಟಿಯಾಗಿ ಪರಿಶೀಲಿಸಿ, ರೈತರಿಗೆ ತೊಂದರೆಯಾಗದಂತೆ ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಂಡರಗಿಯ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.

ಅರ್ಹರು ಬಿಟ್ಟು ಹೋಗಬಾರದು:

ನಿರಂತರ ಮಳೆಯಿಂದಾಗಿ ಹಾನಿಯಾದ ಮನೆಗಳು, ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಸರ್ಕಾರದ ಪರಿಹಾರಧನ ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಸಂಬಂಧಪಟ್ಟಅಧಿಕಾರಿಗಳು ಮಳೆಯಿಂದ ಹಾನಿಯಾಗಿರುವುದಕ್ಕೆ ನಡೆಸುತ್ತಿರುವ ಜಂಟಿ ಸಮೀಕ್ಷೆಯಲ್ಲಿ ಅರ್ಹವಿರುವ ಫಲಾನುಭವಿಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಅರ್ಹವಿರುವ ಫಲಾನುಭವಿಗಳು ಪರಿಹಾರದಿಂದ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಪರಿಹಾರಕ್ಕೆ ಕ್ರಮವಹಿಸಿ:

ನೈಸರ್ಗಿಕ ವಿಕೋಪದಿಂದ ಹಾನಿಯಾಗಿರುವ ಮನೆ ಮತ್ತು ಬೆಳೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಣೆಯ ಬಗ್ಗೆ ಜಿಲ್ಲಾಧಿಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಕೊಪ್ಪಳ ತಹಸೀಲ್ದಾರ್‌ ಅಮರೇಶ ಬಿರಾದಾರ ಅವರು, ಕೊಪ್ಪಳ ತಾಲೂಕಿನಾದ್ಯಂತ ಜೂನ್‌-2022ರಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ ಆದ ಹಾನಿಗಳ ಬಗ್ಗೆ ಮಾಹಿತಿ ನೀಡಿ, ತಾಲೂಕಿನಾದ್ಯಂತ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮಳೆಯಿಂದ ಭಾಗಶಃ ಒಟ್ಟು 410 ಮನೆಗಳು ಹಾನಿಯಾಗಿದ್ದು, ಅದರಲ್ಲಿ ಈಗಾಗಲೇ 380 ಮನೆಗಳಿಗೆ .1.99 ಕೋಟಿ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಮಳೆಯಿಂದ 1010 ಹೆಕ್ಟರ್‌ ಬೆಳೆ ಹಾನಿಯಾಗಿದ್ದು, ಇದರಲ್ಲಿ 300 ಹೆಕ್ಟರ್‌ಗೆ ಪರಿಹಾರವನ್ನು ನೀಡಲಾಗಿದೆ. ಸರ್ಕಾರದಿಂದ ಇದುವರೆಗೂ 410 ರೈತರಿಗೆ .52.50 ಲಕ್ಷ ಪರಿಹಾರವನ್ನು ನೀಡಲಾಗಿರುತ್ತದೆ. ಬಾಕಿ ಉಳಿದ 710 ಹೆಕ್ಟೇರ್‌ನಲ್ಲಿ 550 ಹೆಕ್ಟೇರ್‌ ಪ್ರದೇಶವನ್ನು ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗಿದ್ದು, ಇನ್ನೂ 160 ಹೆಕ್ಟೇರ್‌ ಪ್ರದೇಶ ಬೆಳೆಗಳ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ತ್ವರಿತಗತಿಯಲ್ಲಿ ಡಾಟಾ ಎಂಟ್ರಿ ಮಾಡಲಾಗುವುದು ಹಾಗೂ ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಪರಿಹಾರ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಶೇ. 36ರಷ್ಟುಮಳೆ ಹೆಚ್ಚು:

ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿಮಾತನಾಡಿ, ಜಿಲ್ಲೆಯಲ್ಲಿ ಜೂ. 1ರಿಂದ ಸೆ. 30ರ ವರೆಗೆ 383 ಮಿ.ಮೀ. ವಾಡಿಕೆ ಮಳೆಗಿಂತ ಶೇ. 1ರಷ್ಟುಮಳೆ ಹೆಚ್ಚಾಗಿದೆ. ಅ. 1ರಿಂದ ಅ. 21ರ ವರೆಗೆ ವಾಡಿಕೆ ಮಳೆ 89 ಮಿ.ಮೀ. ಇದ್ದು, ವಾಸ್ತವಿಕ 120 ಮಿ.ಮೀ. ಮಳೆಯಾಗಿ, ಶೇ. 36ರಷ್ಟುಮಳೆ ಹೆಚ್ಚಾಗಿದೆ.

ಪರಿಹಾರ ಕಾರ್ಯ ಪ್ರಗತಿಯಲ್ಲಿ:

ಮಳೆಯಿಂದ ಭಾಗಶಃ ಹಾನಿಯಾದ 1554 ಮನೆಗಳಿಗೆ .8.16 ಕೋಟಿ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಜೂನ್‌ನಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದ ಒಟ್ಟು 4350 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಇದುವರೆಗೂ 1436 ಹೆಕ್ಟೇರ್‌ ಪ್ರದೇಶಕ್ಕೆ 2929 ರೈತರಿಗೆ .2.50 ಕೋಟಿ ಪರಿಹಾರ ನೀಡಲಾಗಿದೆ ಹಾಗೂ ಬಾಕಿ ಉಳಿದ 2914 ಹೆಕ್ಟೇರ್‌ ಪ್ರದೇಶದಲ್ಲಿ 2004 ಹೆಕ್ಟೇರ್‌ ಬೆಳೆಯನ್ನು ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗಿದೆ. ಬಾಕಿ ಉಳಿದ 900 ಹೆಕ್ಟೇರ್‌ ಬೆಳೆ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕೊಪ್ಪಳ ತಾಲೂಕಿನ ಬಹುತೇಕ ಗ್ರಾಮದ ರಸ್ತೆಗಳೀಗ ಸಂಪೂರ್ಣವಾಗಿ ಹಾಳು

ಮೌಲಭೂತ ಸೌಕರ್ಯಕ್ಕೆ ಹಾನಿ:

ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ಕೂಡ ಜಿಲ್ಲಾಧಿಕಾರಿ ಪರಿಶೀಲಿಸಿದರು. .524.20 ಲಕ್ಷ ಅಂದಾಜು ಮೊತ್ತದ ಪಂಚಾಯತ್‌ ರಾಜ್‌ ಇಲಾಖೆಗೆ ಸೇರಿದ 228.2 ಕಿ.ಮೀ. ರಸ್ತೆ ಮತ್ತು ಅಂದಾಜು .189.50 ಲಕ್ಷ ಮೊತ್ತದ 23 ಸೇತುವೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಅಂದಾಜು .1420.00 ಲಕ್ಷ 114 ಕಿ.ಮೀ. ರಸ್ತೆ ಮತ್ತು ಅಂದಾಜು .665.50 ಲಕ್ಷ ಮೊತ್ತದ 35 ಸೇತುವೆಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. 800 ವಿದ್ಯುತ್‌ ಕಂಬಗಳು, 72 ಟ್ರಾನ್ಸ್‌ಫಾರ್ಮರ್‌ ಮತ್ತು 20 ಕಿ.ಮೀ. ವಿದ್ಯುತ್‌ಲೈನ್‌ ಹಾನಿಯಾಗಿದ್ದು, ಹಾನಿಯಾಗಿರುವ ಸಾಮಗ್ರಿಗಳನ್ನು ಜೆಸ್ಕಾಂ ಇಲಾಖೆಯವರು ಕಾಲಕಾಲಕ್ಕೆ ಬದಲಾವಣೆ ಮಾಡಿ ಸರಿಪಡಿಸಿರುತ್ತಾರೆ ಎಂದು ಮಾಹಿತಿ ನೀಡಿದರು.

click me!