ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ 3 ಕಡೆ ಯತ್ನ: ಆತಂಕ

By Kannadaprabha News  |  First Published Oct 23, 2022, 11:11 AM IST
  • ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ 3 ಕಡೆ ಯತ್ನ: ಆತಂಕ
  • ತೀರಾ ಕೆಳ ಮಟ್ಟದಲ್ಲಿ ಹಾರಾಡಿದ ಕಾಪ್ಟರ್‌
  • ಕೊನೆಗೂ ಸ್ಪಷ್ಟೀಕರಣ ನೀಡಿದ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು

ಕಾರವಾರ (ಅ.23) : ನಗರದ ಮೂರು ಕಡೆ ಹೆಲಿಕಾಪ್ಟರ್‌ವೊಂದು ಶನಿವಾರ ಏಕಾಏಕಿ ಲ್ಯಾಂಡ್‌ ಆಗಲು ಪ್ರಯತ್ನಿಸಿತ್ತು. ಇದರಿಂದಾಗಿ ಸ್ಥಳೀಯರು ಆತಂಕ್ಕೆ ಕಾರಣರಾಗಿದ್ದರು. ಇಂಡಿಯನ್‌ ಕೋಸ್ಟ್‌ ಗಾರ್ಡ್‌ಗೆ ಸೇರಿದ ಅಡ್ವಾನ್ಸ್‌$್ಡ ಲೈಟ್‌ ಹೆಲಿಕಾಪ್ಟರ್‌ ಇಲ್ಲಿನ ಮಾಲಾದೇವಿ ಕ್ರೀಡಾಂಗಣ, ಜಿಲ್ಲಾಧಿಕಾರಿ ಕಚೇರಿ ಎದುರು ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್‌ ಮೇಲೆ ಹಾಗೂ ರವೀಂದ್ರನಾಥ ಟಾಗೋರ್‌ ಕಡಲತೀರದ ಮೈದಾನದಲ್ಲಿ ಇಳಿಯಲು ಪ್ರಯತ್ನಿಸಿ ಸಾಧ್ಯವಾಗದೇ ವಾಪಸ್‌ ತೆರಳಿದೆ.

ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಆರು ಪ್ರವಾಸಿಗರು ಸಾವು

Latest Videos

undefined

ಹೆಲಿಕಾಪ್ಟರ್‌ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಮಾಲಾದೇವಿ ಕ್ರೀಡಾಂಗಣದಲ್ಲಿ, ಕಡಲತೀರದಲ್ಲಿ ಕೆಲವರು ಮೊಬೈಲ್‌ ಹಿಡಿದು ಫೋಟೊ, ವಿಡಿಯೋ ಮಾಡಿಕೊಂಡರೆ, ಇನ್ನು ಕೆಲವರು ತಾವಿದ್ದ ಜಾಗದಿಂದ ಕಾಲ್ಕಿತ್ತರು. ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್‌ನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂದು ತಿಳಿದುಕೊಳ್ಳಲು ಪ್ರಯೋಗ ಮಾಡಲಾಗಿದೆ ಎಂದು ಹೇಳಿದ್ದಾರೆ.

ಚಿರತೆ ಭೀತಿ: ಸಾಲ್ಕೋಡ್‌ಗೆ ಶಾಸಕ ದಿನಕರ ಶೆಟ್ಟಿಭೇಟಿ

ಹೊನ್ನವರ: ತಾಲೂಕಿನ ಸಾಲ್ಕೋಡ್‌ ಗ್ರಾಪಂ ವ್ಯಾಪ್ತಿಯಲ್ಲಿ ಚಿರತೆ ದಾಳಿಯಿಂದ ಜನತೆ ಆತಂಕಕ್ಕೊಳಗಾಗಿರುವ ಹಿನ್ನಲೆ ಶಾಸಕ ದಿನಕರ ಶೆಟ್ಟಿಶನಿವಾರ ಭೇಟಿನೀಡಿ ಅಧಿಕಾರಿಗಳೊಡನೆ ಸಭೆ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬಿದರು.ಚಿರತೆ ಸೆರೆ ಹಿಡಿಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು. ಸೆರೆ ಹಿಡಿಯುವ ಪೂರ್ವದಲ್ಲಿ ಜನರ ಸುರಕ್ಷತೆಗಾಗಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಲಹೆ ನೀಡಿದರು.

ಸಾಲ್ಕೋಡ್‌ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ, ಕಡ್ಲೆ ಗ್ರಾಪಂ ಅಧ್ಯಕ್ಷ ಗೋವಿಂದ ಗೌಡ, ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ, ಸಾಲ್ಕೋಡ್‌ ಹಾಗೂ ಕಡ್ಲೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

Uttara Kannada New : ನಿಲ್ಲದ ಚಿರತೆ ಉಪಟಳ; ಜಾನುವಾರು ಮೇಲೆ ದಾಳಿ

click me!