ಕೊಪ್ಪಳ (ಡಿ.22): ಶಾಲೆಯಲ್ಲಿ (School) ಮಕ್ಕಳಿಗೆ ಮೊಟ್ಟೆ (Egg) ನೀಡುವ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಪರ ವಿರೋಧದ ವಿಚಾರ ಚರ್ಚೆಯಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ (Koppal ) ಶೇಕಡಾ 93 ರಷ್ಟು ಮಕ್ಕಳಿಂದ ಮೊಟ್ಟೆಗೆ ಬೇಡಿಕೆ ಬಂದಿದೆ. ಕೊಪ್ಪಳ (Koppal) ಜಿಲ್ಲೆಯ ಶಾಲೆಗಳಲ್ಲಿ ಸಮೀಕ್ಷೆ ಮಾಡಿದ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
(Koppal) ಜಿಲ್ಲೆಯಲ್ಲಿ ಶೇಕಡಾ 93 ರಷ್ಟು ಮಕ್ಕಳು ನಮಗೆ ಮೊಟ್ಟೆ ಬೇಕು ಎನ್ನುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1145 ಶಾಲೆಗಳಿದ್ದು, 1,78,455 ಮಕ್ಕಳು ದಾಖಲಾಗಿದ್ದಾರೆ. ಇದರಲ್ಲಿ 1,67,111 ಮಕ್ಕಳು ಶಾಲೆಗೆ (School) ಹಾಜರಾಗುತ್ತಿದ್ದಾರೆ. 1,67,111 ಮಕ್ಕಳಲ್ಲಿ 1,57,045 ಮಕ್ಕಳು ಮೊಟ್ಟೆ ತಿನ್ನುತ್ತಿದ್ದಾರೆ. ಶೇಕಡಾ 93.98 ರಷ್ಟು ಮಕ್ಕಳು ಶಾಲೆಗಳಲ್ಲಿ ನೀಡಲಾಗುವ ಮೊಟ್ಟೆ ಸೇವನೆ ಮಾಡುತ್ತಿದ್ದಾರೆ.
undefined
ಇನ್ನು ಜಿಲ್ಲೆಯಲ್ಲಿ 10,666 ಮಕ್ಕಳು (Children) ಮಾತ್ರ ಬಾಳೆ ಹಣ್ಣು (Banana) ಸೇವನೆ ಮಾಡುತ್ತಿದ್ದಾರೆ. ಶೇಕಡಾ 6.02 ರಷ್ಟು ಮಕ್ಕಳು ಬಾಳೆ ಹಣ್ಣು ಸೇವನೆ ಮಾಡುತ್ತಿದ್ದಾರೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ಜಿಲ್ಲೆಯ ಶಾಲೆಗಳಲ್ಲಿ (School) ಸಮೀಕ್ಷೆ ನಡೆಸಿ ಮಾಹಿತಿ ತಿಳಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೊಟ್ಟೆ ಪರ ವಿರೋಧದ ನಡುವೆಯೂ ಮೊಟ್ಟೆ ತಿನ್ನೋ ಮಕ್ಕಳೇ ಹೆಚ್ಚು ಎನ್ನುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ.
ಇಲ್ಲಿನ ಪೋಷಕರೋರ್ವರು ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋಧಿಸಿ ಮಗುವಿನ ಟಿಸಿ ಪಡೆದಿದ್ದರು. ಕೊಪ್ಪಳದ ವೀರಣ್ಣ ಕೊರ್ಲಹಳ್ಳಿ ತಮ್ಮ ಮಗುವಿನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದರಿ. ಇದಾದ ಬಳಿಕವೇ ನಡೆದ ಸಮೀಕ್ಷೆಯಲ್ಲಿ ಮೊಟ್ಟೆ ತಿನ್ನುವ ಮಕ್ಕಳೇ ಜಾಸ್ತಿ ಎನ್ನುವುದು ಬಹಿರಂಗವಾಗಿದೆ.
ಮೊಟ್ಟೆ ಕೊಟ್ಟಿದ್ದಕ್ಕೆ ಟಿ ಸಿ ಪಡೆದಿದ್ದ ತಂದೆ : ಶಾಲೆಯಲ್ಲಿ (School) ಮೊಟ್ಟೆ (Egg) ವಿತರಣೆಗೆ ರಾಜ್ಯಾದ್ಯಂತ ಕೆಲವು ಕಡೆ ಪರ, ವಿರೋಧದ ಚರ್ಚೆ ನಡೆಯುತ್ತಿರುವಾಗಲೇ ಇಲ್ಲೊಬ್ಬರು ಮಗನಿಗೆ ಮೊಟ್ಟೆ ನೀಡಿದ್ದಾರೆಂದು ಶಾಲೆಯಿಂದಲೇ (School) ಟಿಸಿ (TC) ಪಡೆದ ಘಟನೆ ನಗರದಲ್ಲಿ ಜರುಗಿದೆ. ಕೊಪ್ಪಳದ (Koppal) ನಾಗರಿಕ ಹಾಗೂ ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ಅವರು ನಗರದ ರೈಲ್ವೆ ಸ್ಟೇಷನ್ ಎದುರಿಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Primery School) 1ನೇ ತರಗತಿಯಲ್ಲಿ ಓದುತ್ತಿರುವ ಮಗ ಶರಣ ಬಸವರಾಜನ ಟಿಸಿ ಪಡೆದು ಖಾಸಗಿ ಶಾಲೆಗೆ (Private School) ಸೇರಿಸಿದ್ದರು. ಈ ಕುರಿತು ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ (Facebook) ಹಾಕಿಕೊಂಡಿದ್ದರು.
ನಾವೆಲ್ಲ ಮನೆಯಲ್ಲಿ ಬಸವ ಧರ್ಮದ ಆಚರಣೆ ಮಾಡುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುತ್ತಿದ್ದೇವೆ. ಆದರೆ ಶಾಲೆಯಲ್ಲಿ (School) ಮಕ್ಕಳಿಗೆ ಮೊಟ್ಟೆ ಕೊಡುತ್ತಿರುವುದು ನಮ್ಮ ಧರ್ಮಕ್ಕೆ, ಸಂಸ್ಕೃತಿಗೆ ಅಡ್ಡಿಯುಂಟಾಗುತ್ತಿದೆ. ನನ್ನ ಮಗುವು ಮೊಟ್ಟೆ (Egg) ತಿನ್ನುವುದಿಲ್ಲ. ಎಲ್ಲ ಮಕ್ಕಳಿಗೂ ಮೊಟ್ಟೆ ಕೊಡುವಾಗ ನನ್ನ ಮಗುವು ಮೊಟ್ಟೆ ಕೊಟ್ಟರೆ ಒಂದೆರಡು ದಿನ ತಿನ್ನದೇ ಬಿಡಬಹುದು. ಬಳಿಕ ಆತನು ತಿನ್ನಲು ಆರಂಭಿಸಿ, ಮುಂದೆ ಆತನೂ ನನ್ನ ಮನೆಯಲ್ಲಿ ಮೊಟ್ಟೆ ಮಾಡಿ ಕೊಡಿ ಎಂದು ಕೇಳಿದರೆ ನಾವು ಏನು ಮಾಡಬೇಕು? ನಮ್ಮ ಸಂಸ್ಕಾರ, ಧರ್ಮದಲ್ಲಿ ಆ ರೀತಿಯ ಆಚರಣೆ ಇಲ್ಲ ಎಂದಿದ್ದರು.
ಮೊಟ್ಟೆ ಕೊಡುವ ಯೋಜನೆ ಒಳ್ಳೆಯದು ಇರಬಹುದು. ಒಂದೇ ಮಾದರಿ ಯೋಜನೆ ತರಬೇಕು. ಒಬ್ಬರಿಗೆ ಮೊಟ್ಟೆ ಕೊಡುವುದು ಇನ್ನೊಬ್ಬರಿಗೆ ಬಾಳೆಹಣ್ಣು (Banana) ಕೊಡುವುದು ತರವಲ್ಲ. ಎಲ್ಲರಿಗೂ ಬಾಳೆಹಣ್ಣು ಕೊಡಬಹುದಿತ್ತು. ಮಕ್ಕಳಲ್ಲಿನ ಪೌಷ್ಟಿಕಾಂಶ ಹೆಚ್ಚಿಸಲು ತರಕಾರಿ ಸೊಪ್ಪು ಇವೆ. ಬೇರೆ ಪದಾರ್ಥಗಳಿವೆ. ಆ ಅಂಶ ಇರುವ ಪದಾರ್ಥಗಳನ್ನು ಕೊಡಬಹುದಿತ್ತು. ಮೊಟ್ಟೆಯನ್ನೇ ಕೊಡಬೇಕೆಂದಿಲ್ಲ. ಸರ್ಕಾರ ಏನೇ ನಿರ್ಧಾರ ಮಾಡಿದರೂ ಅದು ನಮ್ಮ ಧರ್ಮ, ಸಂಸ್ಕೃತಿಗೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ನಾವು ನನ್ನ ಮಗನ ಟಿಸಿ ಹಿಂಪಡೆದು ಬೇರೆ ಶಾಲೆಗೆ ದಾಖಲಿಸಿರುವೆ ಎಂದು ವೀರಣ್ಣ ಬರೆದುಕೊಂಡಿದ್ದರು.
ಕನ್ನಡಾಂಬೆಯ ಅಪಾರ ಅಭಿಮಾನದಿಂದ, ಸರ್ಕಾರಿ ಶಾಲೆಯಲ್ಲಿ (Govt School) ಹಲವು ಸೌಲಭ್ಯಗಳಿವೆ ಹಾಗೂ ಕನ್ನಡ ಶಾಲೆ ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ನನ್ನ ಮಗನನ್ನು ಜೂನ್ ತಿಂಗಳಲ್ಲಿ ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ದಾಖಲಿಸಿದ್ದೆ. ಆದರೆ ಸರ್ಕಾರವು ಶಾಲೆಯಲ್ಲಿ ಮೊಟ್ಟೆಕೊಡುವ ಯೋಜನೆ ಆರಂಭಿಸಿದ್ದರಿಂದ ನನ್ನ ಧರ್ಮ, ಸಂಸ್ಕೃತಿಗೆ ಅಡ್ಡಿಯಾಗುತ್ತಿದೆ. ಆ ಕಾರಣಕ್ಕೆ ನನ್ನ ಮಗನ ಟಿಸಿ ಹಿಂಪಡೆದು ಖಾಸಗಿ ಶಾಲೆಗೆ ದಾಖಲಿಸಿದ್ದೇನೆ.
ವೀರಣ್ಣ ಕೊರ್ಲಹಳ್ಳಿ, ಮಗನ ಟಿಸಿ ಹಿಂಪಡೆದ ಪಾಲಕ