ದಾವಣಗೆರೆ (ಡಿ.22): ಎದುರಿಗೆ ಬಂದ ಬೈಕ್ ಗೆ (Bike) ದಾರಿ ಬಿಡಲು ಹೋಗಿ ಖಾಸಗಿ ಬಸ್ (Private Bus) ವಿದ್ಯುತ್ ಟ್ರಾನ್ಸ್ ಫಾರ್ಮರಿಗೆ ಡಿಕ್ಕಿಯಾಗಿ ರಸ್ತೆ (Road) ಪಕ್ಕದ ಅಡಿಕೆ ತೋಟದಲ್ಲಿ ಪಲ್ಟಿಯಾದ ಘಟನೆ ದಾವಣಗೆರೆಯಲ್ಲಿಂದು (Davanagere) ನಡೆದಿದೆ. ವಿದ್ಯುತ್ ಇಲ್ಲದ ಕಾರಣ ಭಾರಿ ದುರಂತವೊಂದು ತಪ್ಪಿದೆ. ಈ ಬಸ್ಸಿನಲ್ಲಿ (Bus) 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ (Hospital) ರವಾನೆ ಮಾಡಲಾಗಿದೆ.
ದಾವಣಗೆರೆ (Davanagere) ತಾಲೂಕಿನ ಎಲೆ ಬೇತೂರ ಗ್ರಾಮದ ಬಳಿ ಘಟನೆ ನಡೆದಿದ್ದು ದಾವಣಗೆರೆ ಯಿಂದ ಜಗಳೂರು ಕಡೆ ಹೋಗುತ್ತಿದ್ದ ವಿನಾಯಕ ಹೆಸರಿನ ಖಾಸಗಿ ಬಸ್ ಪಲ್ಟಿಯಾಗಿದೆ. ಎಲೆಬೇತೂರು ಬಳಿ ಕ್ರಾಸ್ನಲ್ಲಿ ಅನಿರೀಕ್ಷಿತ ವಾಗಿ ಅಡ್ಡ ಬಂದ ಬೈಕ್ ಸವಾರನಿಗೆ ದಾರಿ ಬಿಡಲು ಹೋಗಿ ವಿದ್ಯುತ್ ಟ್ರಾನ್ಸಫಾರ್ಮಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಶಾಲಾ ವಾಹನಕ್ಕೆ ಬೆಂಕಿ : ಶಾಲಾ ವಾಹನಕ್ಕೆ (School Bus) ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿಂದು ನಡೆದಿದೆ. ಡಿಟಿಎಂಎನ್ (DTMN) ಶಾಲೆಗೆ ಸೇರಿದ ಶಾಲಾ ಬಸ್ಗೆ ಬೆಂಕಿ ತಗುಲಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಬಸ್‌ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಕೊಂಡ ತಕ್ಷಣ ಅಕ್ಕಪಕ್ಕದ ಬಸ್ ತೆರವು ಮಾಡಿ ಬೆಂಕಿ ಹರಡದಂತೆ ತಡೆಯಲಾಗಿದೆ. ನೀರು ಹಾಕಿದರು ಬಿಸಿನಲ್ಲಿ ಧಗಧಗನೆ ಉರಿಯುತ್ತಿದ್ದ ಬಸ್ ಬೆಂಕಿ ಆರದೆ ಸಂಪೂರ್ಣ ಸುಟ್ಟು ಹೋಗಿದೆ. ಈ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಬಸ್‌ಗೆ ಮಸಿ ಬಳಿದು ಕಲ್ಲಿ ತೂರಾಟ : ಮಹಾರಾಷ್ಟ್ರ (Maharashtra) ಏಕೀಕರಣ ಸಮೀತಿ (ಎಂಇಎಸ್ - MES ) ಕಿಡಿಗೇಡಿಗಳ ಅಟ್ಟಹಾಸ ಕರ್ನಾಟಕ- ಮಹಾರಾಷ್ಟ್ರ (Karnataka Maharashtra) ಗಡಿ ಭಾಗದಲ್ಲಿ ಮುಂದುವರೆದಿದೆ. ಎಂಇಎಸ್ ಕಾರ್ಯಕರ್ತರು ಕಲ್ಯಾಣ ಕರ್ನಾಟಕದ ಸಾರಿಗೆ ಬಸ್ ತಡೆದು, ಬಸ್ (Bus) ಮೇಲೆ ಜೈ ಶಿವಾಜಿ, ಜೈ ಶಿವಸೇನೆ ಎಂದು ಬರೆದು ಘೋಷಣೆಗಳನ್ನು ಕೂಗಿರುವ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ಮುಂಬೈನಿಂದ (Mumbai) ಕಲಬುರಗಿಗೆ (Kalaburagi) ಬರುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ (KSRTC) ಸೇರಿದ್ದ ಬಸ್ ತಡೆದು ನಿಲ್ಲಿಸಿದ ಎಂಇಎಸ್ (MES) ಕಿಡಿಗೇಡಿಗಳು, ಬಸ್ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ಬಸ್ ಮುಂಭಾಗದಲ್ಲಿ ಎಂಇಎಸ್ ಧ್ವಜ ಕಟ್ಟಿ, ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ನೀಡಿ ಜೈ ಶಿವಾಜಿ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದರು..
ಈ ಪುಂಡಾಟಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಎಂಇಎಸ್ ಕಾರ್ಯಕರ್ತರ ವಿಕೃತಿ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಎಂಇಎಸ್ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ಕಲಬುರಗಿ ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ
ಕಲಬುರಗಿ (Kalaburagi) ಜಿಲ್ಲೆಯ ಆಳಂದ, ಅಫಜಲ್ಪುರ ತಾಲೂಕುಗಳು ಮಹಾರಾಷ್ಟ್ರದ ಸೊಲ್ಲಾಪುರ ಗಡಿ ಹಂಚಿಕೊಂಡಿವೆ. ಇದೀಗ ಈ ಗಡಿಯಲ್ಲಿ ಕಳೆದ 2 ದಿನದಿಂದ ಅವ್ಯಕ್ತ ಭಯ- ಆತಂಕ ಮೂಡಿದೆ. ಹೀಗಾಗಿ ಪರಸ್ಪರ ಉಭಯ ರಾಜ್ಯಗಳ ಜನತೆ ಗಡಿ ಮೂಲಕ ವಾಹನ (Vehicle) ಸಂಚಾರಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ.
ಇಲ್ಲಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯವರು ಮಹಾರಾಷ್ಟ್ರದ (Maharashtra) ಊರುಗಳಾದ ಸೊಲ್ಲಾಪುರ, ಔರಂಗಾಬಾದ್, ಲಾತೂರ್, ಸಾಂಗಲಿ, ಮೀರಜ್ ಇಲಿಗೆ ಬಸ್ಸುಗಳನ್ನು ಓಡಿಸಲು ಆಲೋಚಿಸುವಂತಾಗಿದೆ. ದಿನ ನಿತ್ಯದ ಬೆಳವಣಿಗೆಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡೇ, ಪರಿಶೀಲನೆ ನಡೆಸಿಯೇ, ಅಲ್ಲಿನ ಕಾನೂನು- ಸುವ್ಯವಸ್ಥ ಸಂಗತಿಗಳನ್ನು ಅರಿತುಕೊಂಡೇ ಬಸ್ಸುಗಳನ್ನು ಮಹಾರಾಷ್ಟ್ರದ ಊರುಗಳಿಗೆ ಓಡಿಸುವ ನಿರ್ಧಾರ ಮಾಡಲಾಗುತ್ತಿದೆ ಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.
ಸಾರಿಗೆ ಬಸ್‌ಗೆ ಕಲ್ಲು ತೂರಾಟ : ಕನ್ನಡ (Kannada) ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಮಾಡಿ ವಿಕೃತಿ ಮೆರೆದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡಾಟಿಕೆ ಮೀತಿಮೀರಿದ್ದು, ಇಲ್ಲಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳಿದ್ದ ರಾಜ್ಯ ಸಾರಿಗೆ ಬಸ್ ಗಳ (Bus) ಮೇಲೆ ಕಲ್ಲು ತೂರಾಟ ನಡೆಸಿ, ಪುಂಡಾಟಿಕೆ ಮುಂದುವರೆಸಿದೆ. ಸುರಪುರ ಡಿಪೋಗೆ ಸೇರಿದ ಎನ್ನಲಾದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ಮಹಾರಾಷ್ಟ್ರ ಪುಣೆಗೆ ಹೋಗಿದ್ದ ಸಂದರ್ಭದಲ್ಲಿ, ಭಾನುವಾರ ಮುಂಜಾನೆ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆಯೆಲ್ಲದೆ, ಚಾಲಕ ಹಾಗೂ ನಿರ್ವಾಹಕರಿಗೆ ಜೀವಬೇದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಹಾರಾಷ್ಟ್ರದ ಪುಣೆಯ ಖಡ್ಕಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೀವ ಬೆದರಿಕೆಯಿಂದ ಚಾಲಕ ಸುರಪುರಕ್ಕೆ ಬಸ್ ತೆಗೆದುಕೊಂಡು ಬರಲು ಆತಂಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.